ಈ ವ್ಯಕ್ತಿಯು ತಾನು ಕೂಡ ಬೇರೆಯವರ ಹಾಗೆ ದುಡಿದು ತನ್ನ ಕಾಲಿನ ಮೇಲೆ ತಾನು ನಿಂತು ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಅಂದುಕೊಂಡಿದ್ದರು ಆದರೆ ವಿಧಿಯ ಆಟ ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಆದರೆ ಈ ವ್ಯಕ್ತಿ ತನ್ನ ಎರಡು ಕೈಗಳನ್ನು ಕಳೆದುಕೊಂಡು ಏನು ಸಾಧನೆ ಮಾಡಿದ್ದಾರೆ ಅನ್ನೋದು ಇಲ್ಲಿದೆ ನೋಡಿ.

ಆ ಸಮಯ ಇವರ ಪಾಲಿಗೆ ಕೆಟ್ಟ ಸಮಯ ಅಂತಾನೆ ಹೇಳಬಹುದು ಕಬ್ಬಿನ ಗ್ರೈಂಡರ್ಗೆ ಆಕಸ್ಮಿಕವಾಗಿ ತಮ್ಮ ಎರಡು ಕೈಗಳು ಎಳೆಯಲ್ಪಟ್ಟು ಕೈಗಳನ್ನು ಕಳೆದು ಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಏನು ಮಾಡಲಾಗದೆ ಮನೆಯಲ್ಲೆಯೇ ಹಲವು ವರ್ಷಗಳು ಕಾಲ ಕಳೆಯುತ್ತಾರೆ.

ಹೀಗೆ ಕಾಲ ಚಕ್ರ ಉರುಳಿದಂತೆ ತಮಗೆ ಏನು ಮಾಡಬೇಕು ಅಂತ ದಾರಿ ಕಾಣದಂತಾಗುತ್ತದೆ. ಏನಾದರು ಒಂದು ಸಾಧನೆಯನ್ನು ಮಾಡಬೇಕು ಅನ್ನೋ ಛಲವನ್ನು ಬೆಳೆಸಿ ಕೊಳ್ಳುತ್ತಾರೆ, ಆ ಛಲದೊಂದಿಗೆ ಸಾಧನೆಯ ಹಾದಿಯನ್ನು ಮುಟ್ಟಲು ಸಿದ್ಧರಾಗುತ್ತಾರೆ, ಎರಡು ಕೈಗಳನ್ನು ಕಳೆದು ಕೊಂಡಿದ್ದರು ಇವರು ಏನು ಸಾಧನೆ ಮಾಡುತ್ತಾರೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಆದ್ರೆ ಅವರಲ್ಲಿರುವ ಛಲ ನೋಡಿ ತಮ್ಮ ಬಾಯಿಯಿಂದ ಚಿತ್ರವನ್ನು ಬಿಡಿಸಲು ಪ್ರಾರಂಭಿಸುತ್ತಾರೆ.

ಹೀಗೆ ಚಿತ್ರವನ್ನು ಬಿಡಿಸಲು ಪ್ರಾರಂಭಿಸಿದ ಇವರು ಹಳ್ಳಿಯಿಂದ ಸಿಟಿಗೆ ಬಂದು ಪೇಂಟಿಂಗ್ ಪರೀಕ್ಷೆ ಬರೆದು ಪಾಸಾಗುತ್ತಾರೆ. ಪೇಂಟಿಂಗ್ ಇಂದ ಹಲವು ಪ್ರಶಸ್ತಿಗಳನ್ನು ಪಡೆಯುತ್ತಾರೆ. ಇವರ ವರ್ಣ ಚಿತ್ರಗಳು ವಿಶ್ವದ ಅನೇಕ ಭಾಗಗಳಲ್ಲಿ ಮಾರಾಟ ಆಗುತ್ತಿವೆ. ಇವರು ಇದುವರೆಗೂ ಒಂದು ಲಕ್ಷಕ್ಕೂ ಅಧಿಕ ಪೈಂಟಿಂಗ್ ಅನ್ನು ಬಾಯಿಯಿಂದ ಬಿಡಿಸಿದ್ದಾರೆ.

Leave a Reply

Your email address will not be published. Required fields are marked *