ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಆಗುತ್ತಿದ್ದರೆ ಅಥವಾ ಮಕ್ಕಳು ಓದಿನಲ್ಲಿ ಆಸಕ್ತಿ ತೋರಿಸದೆ ಇದ್ರೆ, ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಎಲ್ಲ ಸರಿ ಹೋಗುತ್ತೆ ಅನ್ನೋ ಮಾತು ಭಕ್ತರದ್ದು. ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಇದರ ವಿಶೇಷತೆ ಏನು.? ಈ ದೇವಾಲಯಕ್ಕೆ ಭೇಟಿ ನೀಡೋದು ಹೇಗೆ ಅನ್ನೋ ಮಾಹಿತಿಯನ್ನು ಸಂಪೂರ್ಣವಾಗಿ ಮುಂದೆ ತಿಳಿಸಲಾಗಿದೆ.

ಈ ದೇವಾಲಯಕ್ಕೆ ತ್ರಿಕೋಟೇಶ್ವರ ದೇವಾಲಯ ಎಂಬುದಾಗಿ ಕರೆಯಲಾಗುತ್ತದೆ, ಇದು ಗದಗ ಶಹರದಲ್ಲಿದೆ ಧಾರವಾಡದಿಂದ ಆಗ್ನೇಯಕ್ಕೆ 42 ಕಿ.ಮೀ ದೂರದಲ್ಲಿರುವ ಗದಗಿಗೆ ಎಲ್ಲಾ ಕಡೆಯಿಂದಲೂ ಉತ್ತಮ ರಸ್ತೆ ಸಂಪರ್ಕವಿದೆ ಬೆಂಗಳೂರು ಧಾರವಾಡ ಬಿಜಾಪುರಗಳಿಂದಲೂ ನೇರ ರೈಲು ಸಂಪರ್ಕ ಇದೆ.

ದೇವಾಲಯದ ವಿಶೇಷತೆ: ತ್ರಿಕೋಟೇಶ್ವರ ದೇವಾಲಯದ ರಚನೆ ಹೇಗಿದೆ ಅಂದ್ರೆ,ಎರಡು ಗರ್ಭಗುಡಿಗಳಿದ್ದು ಪೂರ್ವಾಭಿಮುಖವಾಗಿರುವ ದೊಡ್ಡ ಗುಡಿಯಲ್ಲಿ ಮೂರು ಲಿಂಗಗಳಿವೆ ಆದ್ದರಿಂದ ಇದಕ್ಕೆ ತ್ರಿಕೂಟಾಚಲ ಎಂದು ಹೆಸರು ಇದರ ಮುಂಭಾಗದಲ್ಲಿ ಅರ್ಧ ಮಂಟಪ ಮತ್ತು ಅದರ ಎದುರು ದೊಡ್ಡದಾದ ತೆರೆದ ಮಂಟಪ ಇವೆ.ದೇವಸ್ಥಾನದ ಒಳಭಾಗದಲ್ಲಿ ಸರಸ್ವತಿ ದೇವಸ್ಥಾನ ಇದೆ ಇದು ಗರ್ಭಗೃಹ ಅರ್ಧಮಂಟಪ ಹಾಗೂ ತೆರೆದ ಮುಖಮಂಟಪವನ್ನು ಹೊಂದಿದೆ ಈ ದೇವಸ್ಥಾನದ ಕಂಬಗಳು ಅತ್ಯಂತ ಉದಾಹರಣೆಯಾಗಿದೆ.

ವಿಶೇಷವಾದ ನಂಬಿಕೆ ಏನಂದ್ರೆ: ಈ ದೇವಾಲಯಕ್ಕೆ ಬಂದು ಮಕ್ಕಳಿಗೆ ವಿದ್ಯಾಭ್ಯಾಸ ಪ್ರಾರಂಭ ಮಾಡಿಸಿದರೆ ತುಂಬಾ ಶುಭಕರವಾಗುತ್ತದೆ ಮತ್ತು ಓದುವ ಮಕ್ಕಳು ಮಂದವಿದ್ದರೆ ಇಲ್ಲಿ ಬಂದು ಪೂಜೆ ಮಾಡಿಸಿಕೊಂಡು ಹೋದರೆ ಉತ್ತಮವಾದ ಜ್ಞಾನ ಬರುತ್ತದೆ ಎಂಬ ನಂಬಿಕೆ ಇದೆ ಈ ದೇವಸ್ಥಾನದ ಒಳಭಾಗ ಸಾಧಾರಣವಾಗಿದೆ ಅದರೆ ಹೊರಭಾಗ ಉತ್ತಮ ರೀತಿಯ ಕೆತ್ತನೆಗಳಿಮದ ಪ್ರಜ್ವಲಿಸುತ್ತದೆ ಇಲ್ಲಿ ಭೈರವ ಲಕ್ಷ್ಮೀ ವಿಷ್ಣು ಗಣಪತಿ ಮಹಿಷಮರ್ದಿನಿ ಮುಂತಾದ ಶಿಲ್ಪಗಳು ಕಂಡು ಬರುತ್ತದೆ.

Leave a Reply

Your email address will not be published. Required fields are marked *