Breaking News
Home / Featured / ಲಿಮ್ಕಾ ದಾಖಲೆಯಲ್ಲಿ ಗುರುತಿಸಕೊಂಡಿರುವ ಚಂದನ ಆರಾಧ್ಯ ಎಂಬ ಚಂದನವನದ ಅದ್ಭುತ ಸೆಲಿಬ್ರಿಟಿ ಫ್ಯಾಷನ್ ಡಿಸೈನರ್..!

ಲಿಮ್ಕಾ ದಾಖಲೆಯಲ್ಲಿ ಗುರುತಿಸಕೊಂಡಿರುವ ಚಂದನ ಆರಾಧ್ಯ ಎಂಬ ಚಂದನವನದ ಅದ್ಭುತ ಸೆಲಿಬ್ರಿಟಿ ಫ್ಯಾಷನ್ ಡಿಸೈನರ್..!

ಯಾರು ಈ ಚಂದನ ಆರಾಧ್ಯ: ಚಿಕ್ಕಬಳ್ಳಾಪುರ ದ ಮಂಜುನಾಥ ಆರಾಧ್ಯ ಮತ್ತು ಶಾಂತವಾದ ದಂಪತಿಗಳ ಗಳಾದ ಚಂದನ ಹುಟ್ಟು ಬೆಳೆದದ್ದು ಚಿಕ್ಕಬಳ್ಳಾಪುರದಲ್ಲೇ ಆದರೂ ಮಿಂಚುತ್ತಿರುವುದು ಚಂದನವನದಲ್ಲಿ.. M.Sc in Fashion Technology ಮುಗಿಸಿರುವ ಈ ಹುಡುಗಿ 23 ರ ಹರೆಯದಲ್ಲೇ ಸಿನಿ ರಂಗದಲ್ಲಿ ಸೆಲಿಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಮಿಂಚುತ್ತಿದ್ದಾರೆ.

ಇಂದು ಫ್ಯಾಷನ್ ಡಿಸೈನಿಂಗ್‍ನ ಮಹತ್ವ ಅಧಿಕವಾಗಿದೆ. ಇಂತಹ ಕಲೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಇಂದು “ಲಿಮ್ಕಾ” ದಾಖಲೆಯಲ್ಲಿ ಚಂದನ ರವರ ಹೆಸರು ದಾಖಲುಗೊಂಡಿದ್ದು ಇವರ ಫ್ಯಾಷನ್ ಡಿಸೈನಿಂಗ್‍ನ ಅದ್ಭುತ ಪ್ರತಿಭೆ ವ್ಯಕ್ತವಾಗುತ್ತದೆ. 2012 ರಲ್ಲಿ ಚಂದನರವರು ಫ್ಯಾಷನ್ ಡಿಸೈನಿಂಗ್ ಅನ್ನು ತಲ್ಲೀನವಾಗಿ ಕರಗತವಾಗಿಸಿಕೊಂಡ ಬಳಿಕ ಅದನ್ನು ಹಲವು ವ್ಯಕ್ತಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿ ಕಲೆಯನ್ನು ಹಲವರಿಗೆ ಪಸರಿಸುವ ನಿಟ್ಟಿನಲ್ಲಿ ತಮ್ಮ ನಿಲುವನ್ನು ಹೊಂದಿದ್ದಾರೆ. ಹಲವು ಫ್ಯಾಷನ್ ಶೋಗಳಲ್ಲಿ ಇವರ ಡಿಸೈನಿಂಗ್ ಚಾಕಚಕ್ಯತೆ, ವರ್ಣರಂಜಿತ ವಿನ್ಯಾಸ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದೆ. ಇದೀಗ ಹಲವು ಫ್ಯಾಷನ್ ಶೋಗಳಲ್ಲಿ ಚಂದನ ಹೆಸರು ಮಿನುಗುವ ನಿಟ್ಟಿನಲ್ಲಿ ಉತ್ತಮ ಭವಿಷ್ಯದ ಲಕ್ಷಣವನ್ನು ತೋರ್ಪಡಿಸಬಹುದು. ಕೇವಲ ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿ ಹಿಂದುಳಿದ ಮಕ್ಕಳಿಗೆ, ಅಲ್ಲಿಯ ಜನಗಳಿಗೂ ಕೂಡ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಅವರಲ್ಲಿ ಹೊಸಬಗೆಯ ಚೈತನ್ಯವನ್ನು ಉಂಟುಮಾಡಿದ್ದಕ್ಕಾಗಿ ದೆಹಲ್ಲಿಯಲ್ಲಿ ಇವರ ಹೆಸರು.

ಸೆಲಿಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಮಿಂಚುತ್ತಿದ್ದಾರೆ: ಸದ್ಯ ಚಿಟ್ಟೆ ಚಿತ್ರಕ್ಕೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿರುವ ಚಂದನ. ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ರಿಗೆ ಸ್ಟೈಲಿಶ್ ಲುಕ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಆಗಿರುವ ಚಿಟ್ಟೆ ಚಿತ್ರದ ಪ್ರಥಮ ನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಹರ್ಷಿಕಾ ರ ಬೆನ್ನ ಮೇಲೆ ಮೂಡಿರುವ ಕಲರ್ಫುಲ್ ಚಿಟ್ಟೆ ಇವರ ಕುಂಚದಲ್ಲೇ ಮೂಡಿ ಬಂದಿರುವುದು ವಿಶೇಷ.

ಇನ್ನು ತಾಯಿಗೆ ತಕ್ಕ ಮಗ ಚಿತ್ರ ದಲ್ಲಿ ಸುಮಲತಾ ಅಂಬರೀಷ್ ಹಾಗೂ ನಟ ಅಜಯ್ ರಾವ್ ರ ಸ್ಟೈಲಿಂಗ್ ಅದ್ಭುತ ವಾಗಿ ಮೂಡಿ ಬಂದಿದೆ.

ಆಶಿಕಾ ರಂಗನಾಥ್,ಅಜಯ್ ರಾವ್, ಬಜರಂಗಿ ಲೋಕೀ, ಪೂಜಾ ಗಾಂಧಿ ಹೀಗೆ ಹಲವಾರು ತಾರೆಯರ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿ ಕೊಂಡಿದ್ದಾರೆ .

ಫ್ಯಾಷನ್ ಗೆ ಹೊಸ ವ್ಯಾಖ್ಯಾನ ಬರೆದಿದ್ದಾರೆ ಚಂದನ: ಚಂದನ ರವರ ಪ್ರಕಾರ ಫ್ಯಾಷನ್ ಇವರ ಉಸಿರು-ಆತ್ಮದಲ್ಲಿ ಬೆರೆತಿದೆ. ಕೇವಲ ಒಂದು ಸೂಜಿ ಮತ್ತು ಬಣ್ಣದ ದಾರ ನನ್ನ ಇಡೀ ಜೀವನವನ್ನೇ ಬದಲಿಸಿದೆ. ಪ್ರತಿ ಒಬ್ಬರೂ ಫ್ಯಾಷನ್ ನನ್ನ ಪ್ರೀತಿಸುತ್ತಾರೆ.. ನಾನು ಫ್ಯಾಷನ್ ನನ್ನು ಆರಾಧಿಸುತ್ತೇನೆ. ನಾನು ಡಿಸೈನ್ ಮಾಡುವ ಪ್ರತಿ ಉಡುಪು ದಿ ಬೆಸ್ಟ್ ಆಗಿರಬೇಕೆಂದೇ ನನ್ನ ಬಯಕೆ ಎಂದು ಆತ್ಮವಿಶ್ವಾಸದ ಮಾತನಾಡುತ್ತಾರೆ ಚಂದನ.

ಚಿಕ್ಕ ವಯಸ್ಸಿನಲ್ಲೇ ಲಿಮ್ಕಾ ದಾಖಲೆ ಮೆರೆದ ಹೆಮ್ಮೆಯ ಕನ್ನಡತಿ: ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುತ್ತಿರುವ ಚಂದನ ಫ್ಯಾಷನ್ ವಿನ್ಯಾಸ ಸಂಸ್ಥೆಯ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ 12 ಗಂಟೆಗಳ ಕಾಲ ಸತತವಾಗಿ ಫ್ಯಾಷನ್ ಶೋ ಮಾಡಿದ ವಿಷಯ “ಲಿಮ್ಕಾ” ದಾಖಲೆಯಲ್ಲಿ ನಮೂದಿಸಲ್ಪಟ್ಟಿರುವುದು ಹೆಮ್ಮೆಯ ವಿಷಯ. ಇನ್ನು ಹೆಚ್ಚಿನ ಸಾಧನೆ ಇವರಿಂದ ಜರುಗಲಿ ಮತ್ತು ಅನೇಕ ಯುವತಿಯರು ಇವರ ಫ್ಯಾಷನ್ ಡಿಸೈನಿಂಗ್ ಅನ್ನು ಕಲಿತು ಜೀವನ ರೂಪಿಸಿಕೊಳ್ಳಲಿ ಹಾಗೂ ಇವರ ನೂತನ ನಿರ್ಮಾಣದ “ವಿನ್ಯಾಸ” ಎಂಬ ಶಾಲೆ ಬೆಳೆಯಲಿ ಎಂದು ಹಾರೈಸೋಣ.

ಪತಿ ಚಂದನ್ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಚಂದನ. ಮುಂದೆ ಫ್ಯಾಷನ್ ಲೋಕದಲ್ಲಿ ಭಾರೀ ಹೆಸರು ಮಾಡುವ ಕನಸು ಹೊತ್ತಿದ್ದಾರೆ. ಇವರ ಕನಸು ನನಸಾಗಲೆಂದು ಹಾರೈಸುತ್ತೇವೆ. ಹಾಗೆ ಈದಿನ ಇವರ ವಿವಾಹ ವಾರ್ಷಿಕೋತ್ಸವ ದಿನವಾಗಿದ್ದು ಚಂದನ ಆರಾಧ್ಯ ಅವರಿಗೆ ನಮ್ಮ ಕಡೆಯಿಂದ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *