Breaking News
Home / Featured / ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್ ಜೂನ್ 01 ರಿಂದ ಈ ಸೇವೆ ಬಂದ್ ಆಗುತ್ತಂತೆ..!

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್ ಜೂನ್ 01 ರಿಂದ ಈ ಸೇವೆ ಬಂದ್ ಆಗುತ್ತಂತೆ..!

ರಾಜ್ಯದಲ್ಲಿ ಸಾರ್ವಜನಿಕ ವಲಯದ ನಾಲ್ಕು ವಿಮಾ ಕಂಪನಿ ಹಾಗೂ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳ ನಡುವೆ ವಿಮೆ ಸೇವಾ ದರ ಪರಿಷ್ಕರಣೆ ಕುರಿತು ಬಿಕ್ಕಟ್ಟು ಉಂಟಾಗಿದೆ. ಮೇ ಅಂತ್ಯದೊಳಗೆ ಸೇವಾ ದರ ಪರಿಷ್ಕರಣೆ ಮಾಡದಿದ್ದರೆ ಜೂ.1ರಿಂದ ನಗದು ರಹಿತ ಸೇವೆ ಸ್ಥಗಿತಗೊಳಿಸುವುದಾಗಿ ಖಾಸಗಿ ಆಸ್ಪತ್ರೆಗಳು ಎಚ್ಚರಿಕೆ ನೀಡಿವೆ.

ಇದರ ಬೆನ್ನಲ್ಲೇ ಬುಧವಾರ ಸಂಜೆ ವಿಮಾ ಕಂಪನಿಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸಭೆ ನಡೆಸಿದ್ದು, ತಮ್ಮ ಅಂತಿಮ ನಿರ್ಧಾರವನ್ನು ಗುರುವಾರ ಘೋಷಿಸುವುದಾಗಿ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸ್ಪಷ್ಟಪಡಿಸಿದೆ.

ಆಸ್ಪತ್ರೆಗಳು ನಗದು ರಹಿತ ಸೇವೆ ಸ್ಥಗಿತಗೊಳಿಸಿದರೆ ಜನರಲ್‌ ಇನ್ಷೂರೆನ್ಸ್‌ ಪಬ್ಲಿಕ್‌ ಸೆಕ್ಟರ್‌ ಅಸೋಸಿಯೇಷನ್‌ ಅಡಿಯಲ್ಲಿ ಬರುವ ನಾಲ್ಕು ವಿಮಾ ಕಂಪನಿಗಳಾದ ನ್ಯಾಷನಲ್‌ ಇನ್ಷೂರೆನ್ಸ್‌ ಕಂಪನಿ ಲಿ., ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿ., ಒರಿಯೆಂಟಲ್‌ ಇನ್ಷೂರೆನ್ಸ್‌ ಕಂಪನಿ ಲಿ. ಮತ್ತು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಕಂಪನಿ ಲಿಮಿಟೆಡ್‌ಗಳ ವಿಮಾ ಕಂಪನಿಯ ಗ್ರಾಹಕರಿಗೆ ಸಮಸ್ಯೆ ಉಂಟಾಗಲಿದೆ.

ಸೇವಾ ದರ ಪರಿಷ್ಕರಣೆ ಮಾಡಲು ವಿಮಾ ಕಂಪನಿಗಳು ಒಪ್ಪದ ಕಾರಣ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್ಸ್‌ ಒಕ್ಕೂಟ ಮತ್ತು ಫೆಡರೇಷನ್‌ ಆಫ್‌ ಹೆಲ್ತ್‌ಕೇರ್‌ ಅಸೋಸಿಯೇಷನ್‌ ಅಸಮಾಧಾನ ವ್ಯಕ್ತಪಡಿಸಿವೆ.

ತುರ್ತು ಸಂದರ್ಭ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಹಣವಿಲ್ಲದಿದ್ದರೂ ಆರೋಗ್ಯ ವಿಮೆ ಹೊಂದಿದವರು ಧೈರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮೆ ಸೌಲಭ್ಯ ಹೊಂದಿದವರಿಗೆ ವಿಮಾ ಕಂಪನಿಗಳೇ ನೇರವಾಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚ ಪಾವತಿಸುತ್ತಿವೆ. ಆದರೆ ಇದೀಗ ವಿಮಾ ಕಂಪನಿಗಳು ಸೇವಾ ದರ ಪರಿಷ್ಕರಣೆಗೆ ಮುಂದಾಗದ ಕಾರಣ ನಗದುರಹಿತ ಸೇವೆ ನೀಡದಿರಲು ಫಾನಾ ಮತ್ತು ಎಫ್‌ಎಚ್‌ಎ ಚಿಂತನೆ ನಡೆಸಿವೆ. ಇದರಿಂದ ಲಕ್ಷಾಂತರ ರೋಗಿಗಳು ಗುಣಮಟ್ಟದ ಚಿಕಿತ್ಸೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.ಕೃಪೆ: ಸುವರ್ಣ

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *