Breaking News
Home / Featured / ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಕೊಂದ್ರು, ಮಾನವೀಯತೆ ಮರೆತ ಕುಟುಂಬಸ್ಥರು..!

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಕೊಂದ್ರು, ಮಾನವೀಯತೆ ಮರೆತ ಕುಟುಂಬಸ್ಥರು..!

ಅಂತರ್ಜಾತಿ ವಿವಾಹವಾದರೆಂದು 2 ತಿಂಗಳ ಗರ್ಭಿಣಿ ಮಗಳು ಹಾಗೂ ಆಕೆಯ ಪತಿಗೆ ಅಪ್ಪ ಸೇರಿ ಕುಟುಂಬಸ್ಥರೇ ಬೆಂಕಿ ಹಚ್ಚಿದ ಆಘಾತಕಾರಿ ಘಟನೆಯೊಂದು ಪುಣೆಯ ಅಹಮ್ಮದ್ ನಗರ ಜಿಲ್ಲೆಯಲ್ಲಿ ಮೇ 1ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೃತ ದುರ್ದೈವಿಯನ್ನು 19 ವರ್ಷದ ರುಕ್ಮಿಣಿ ಎಂದು ಗುರುತಿಸಲಾಗಿದ್ದು, ಬೆಂಕಿಯಿಟ್ಟ ಪರಿಣಾಮ ಈಕೆಯ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕಳೆದ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಯ ಪತಿ ಮಂಗೇಶ್ ರಣ್‍ಸಿಂಗ್ ದೇಹಕ್ಕೆ ಶೇ.50ರಷ್ಟು ಹಾನಿಯಾಗಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಮ್ಮದ್ ನಗರ ಪಟ್ಟಣದಿಂದ 55 ಕಿ.ಮೀ ದೂರದ ಪರ್ನಾರ್ ತಾಲೂಕಿನ ನಿಘೋಜಿ ಎಂಬ ಗ್ರಾಮದಲ್ಲಿ ಮೇ 1ರಂದು ಮಧ್ಯಾಹ್ನ ಬಳಿಕ ಈ ಘಟನೆ ನಡೆದಿದೆ. ಸದ್ಯ ದಂಪತಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ನೀಡಿದ ಹೇಳಿಕೆ ಮೇರೆಗೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಅಹಮ್ಮದ್ ನಗರ ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ರುಕ್ಮಿಣಿ ಚಿಕ್ಕಪ್ಪನನ್ನು ಬಂಧಿಸಿದ್ದಾರೆ. ಮಗಳು ತೀರಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ರಾಮಭಾರ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ ಆತನ ಪತ್ತೆಗೆ ಸುರೇಂದ್ರ ಹಾಗೂ ಘನಶ್ಯಾಮ್ ಪೊಲೀಸ್ ತಂಡ ಬಲೆ ಬೀಸಿದೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *