Breaking News
Home / Featured / ಕಾಲು ಕಳೆದುಕೊಂಡ ಹುಡುಗನಿಗೆ ಕೃತಕ ಕಾಲು ಹಾಕಿದ ಕೂಡಲೇ ಕುಣಿದು ಕುಪ್ಪಳಿಸಿದ ಬಾಲಕ: ವಿಡಿಯೋ ವೈರಲ್, ಕೆಲವೊಂದು ಖುಷಿಗೆ ಮಿತಿನೇ ಇಲ್ಲ ಅನ್ಸುತ್ತೆ..!

ಕಾಲು ಕಳೆದುಕೊಂಡ ಹುಡುಗನಿಗೆ ಕೃತಕ ಕಾಲು ಹಾಕಿದ ಕೂಡಲೇ ಕುಣಿದು ಕುಪ್ಪಳಿಸಿದ ಬಾಲಕ: ವಿಡಿಯೋ ವೈರಲ್, ಕೆಲವೊಂದು ಖುಷಿಗೆ ಮಿತಿನೇ ಇಲ್ಲ ಅನ್ಸುತ್ತೆ..!

ಹೌದು ಒಬ್ಬ ಮನುಷ್ಯನಿಗೆ ತಾನು ಕಳೆದುಕೊಂಡ ವಸ್ತು ಸಿಕ್ಕಾಗ ಎಷ್ಟು ಖುಷಿ ಆಗುತ್ತೆ ಅಂತಹದರಲ್ಲಿ ತನ್ನ ಕಾಲು ಮರಳಿ ಬಂದಾಗ ಎಷ್ಟು ಖುಷಿ ಆಗಬಹುದು ಹೇಳಿ ನೋಡಣ, ಕಾಲು ಕಳೆದುಕೊಂಡ ಬಾಲಕನಿಗೆ ವೈದ್ಯರು ಪ್ರಾಸ್ಥೆಟಿಕ್ ಕಾಲು ಜೋಡಣೆ ಮಾಡಿದ್ದಾರೆ. ಕೃತಕ ಕಾಲು ಜೋಡಣೆ ಮಾಡಿದ ತಕ್ಷಣವೇ ಬಾಲಕ ಖುಷಿಯಿಂದ ಕುಣಿದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಹ್ಮದ್ ಕಾಲು ಕಳೆದುಕೊಂಡ ಬಾಲಕ. ಅಪ್ಘಾನ್‍ನ ಲೋಗರ್ ನಲ್ಲಿ ಆದ ಗಣಿಗಾರಿಕೆಯಲ್ಲಿನ ಸ್ಫೋಟದಿಂದಾದ ಭೂ ಕುಸಿತದಿಂದಾಗಿ ಅಹ್ಮದ್ ತನ್ನ ಕಾಲನ್ನು ಕಳೆದುಕೊಂಡಿದ್ದನು. ಈಗ ಆತನಿಗೆ ಪ್ರಾಸ್ಥೆಟಿಕ್ ಕಾಲು ಹಾಕಿದ್ದು, ಆತ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾನೆ.

ಈ ವಿಡಿಯೋದಲ್ಲಿ ಬಾಲಕ ಅಹ್ಮದ್ ತನ್ನ ಪ್ರಾಸ್ಥೆಟಿಕ್ ಕಾಲು ಜೋಡಣೆ ಆಗುತ್ತಿದ್ದಂತೆ ಎದ್ದು ಖುಷಿಯಿಂದ ಕುಣಿದಾಡಿದ್ದಾನೆ. ಅಲ್ಲಿದ್ದ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಅಹ್ಮದ್‍ನ ಖುಷಿ ನೋಡಿ ತಾವು ಕೂಡ ಸಂತೋಷಪಟ್ಟಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋವನ್ನು ಆಫ್ಘಾನಿಸ್ತಾನದ ಅಂತರಾಷ್ಟ್ರೀಯ ರೆಡ್ ಕ್ರಾಸ್ ಆರ್ಥೋಪೇಡಿಕ್ ಸೆಂಟರ್ ನಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋಗೆ ಇದುವರೆಗೂ ಒಟ್ಟು 3 ಲಕ್ಷಕ್ಕೂ ಹೆಚ್ಚು ವ್ಯೂ ಹಾಗೂ ಶೇರ್ ಬಂದಿದೆ. ಅಲ್ಲದೆ 16,000ಕ್ಕೂ ಹೆಚ್ಚು ಲೈಕ್ಸ್ ಗಳು ಈ ವಿಡಿಯೋಗೆ ಬಂದಿದೆ.

ಈ ವಿಡಿಯೋ ನೋಡಿದ ಹಲವರು ರೆಡ್ ಕ್ರಾಸ್ ಆಸ್ಪತ್ರೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಕೆಲವರು ಬಾಲಕನ ಖುಷಿ ನೋಡಿ ಆತನನ್ನು ತಬ್ಬಿಕೊಂಡು ಒಂದು ಕೋಣೆಯಲ್ಲಿ ಜೋರಾಗಿ ಅಳಬೇಕು ಎಂದು ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *