ಉಸಿರಾಟದ ತೊಂದ್ರೆ ನಿವಾರಣೆಗೆ: ಪ್ರತಿನಿತ್ಯ ಒಂದು ದೊಡ್ಡ ಚಮಚ ಕಿರುಕಸಾಲೆ ಸೊಪ್ಪಿನ ರಸಕ್ಕೆ, ಒಂದು ಚಮಚ ಜೇನು ಬೆರೆಸಿ, ಬೆಳೆಗ್ಗೆನೇ ಸೇವಿಸಬೇಕು. ಹಳೆಯ ಶ್ವಾಶಕೋಶ ಪುಪ್ಪಸ ದೋಷವನ್ನು ನಿವಾರಿಸುವುದು ಅಸ್ತಮಾ, ಕ್ಷಯವ್ಯಾಧಿಗಳನ್ನು ಹೋಗಲಾಡಿಸುವುದು.

ಗರ್ಭಿಣಿಯರು ಮತ್ತು ಮಕ್ಕಳ ತಾಯಂದಿರ ಅರೋಗ್ಯ ಸುಧಾರಣೆಗೆ ಮತ್ತು ಎದೆಹಾಲು ವೃದ್ಧಿಗಾಗಿ:
ಎರಡು ದೊಡ್ಡ ಚಮಚ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನು ತುಪ್ಪ ಮತ್ತು ಒಂದು ಯಾಲಕ್ಕಿ ಕಾಳಿನ ನುಣ್ಣನೆ ಪುಡಿ ಬೆರೆಸಿ ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯರು ಸೇವಿಸುತ್ತಿರಬೇಕು. ಮಗುವಿನ ಉತ್ತಮ ಬೆಳವಣಿಗೆಯಾಗುವುದು. ಮೂತ್ರ ದೋಷಗಳಿದ್ದರೆ ನಿವಾರಣೆಯಾಗುವುದು.

ಮಕ್ಕಳ ಕುಂಠಿತ ಬೆಳವಣಿಗೆಯನ್ನು ಸುಧಾರಿಸಲು: ಅನೇಕ ಮಕ್ಕಳಲ್ಲಿ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಇರುವುದಿಲ್ಲ. ಇಂಥ ಮಕ್ಕಳಿಗೆ ಒಂದು ಚಮಚ ಸೊಪ್ಪಿನ ರಸಕ್ಕೆ ಒಂದು ಅರ್ಧ ಚಮಚ ಜೇನು ಬೆರೆಸಿ, ಕುಂಠಿತ ಬೆಳವಣಿಗೆಯು ಉತ್ತಮಗೊಳ್ಳುವುದು. ಮಗುವಿನ ಮಲಭಾದ್ದತೆಯನ್ನು ನಿವಾರಿಸುವುದು ಮತ್ತು ಹಲ್ಲು ಬರಲು ಸಹಕಾರಿಯಾಗುವುದು ಮಕ್ಕಳಿಗೆ ಇದೊಂದು ಟಾನಿಕ್ ಇದ್ದಂತೆ.

ವೃದ್ಧಾಪ್ಯವನ್ನು ತಡೆಗಟ್ಟಲು ಸುಲಭ ಉಪಾಯ: ಕಿರುಕಸಾಲೆ ಸೊಪ್ಪನ್ನು ಸಾರು, ಪಲ್ಯ ಇತ್ಯಾದಿಗಳ ರೂಪದಲ್ಲಿ ವಯಸ್ಸಾದವರು ದಿನನಿತ್ಯ ಯಥೇಚ್ಛವಾಗಿ ಊಟದಲ್ಲಿ ಉಪಯೋಗಿಸಬೇಕು. ಮತ್ತು ಎರಡು ಚಮಚ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನು ಸೇರಿಸಿ ಪ್ರತಿದಿನ ಬೆಳೆಗ್ಗೆನೇ ಸೇವಿಸುತ್ತಿರಬೇಕು. ಕ್ಯಾಲ್ಸಿಯಂ ಮತ್ತು ಲೋಹಾಂಶಗಳು ದೇಹದ ಎಲ್ಲ ಭಾಗಕ್ಕೆ ಪ್ರಸರಿಸುವಾತದರೆ ವೃದ್ಧಾಪ್ಯದ ಲಕ್ಷಣಗಳು ಕಂಡು ಬರುವುದಿಲ್ಲ. ಈ ಕೊರತೆಯನ್ನು ಕಿರುಕಸಾಲೆ ಸೊಪ್ಪು ನಿವಾರಿಸುವುದು.

ರಕ್ತಸ್ರಾವವನ್ನು ತಡೆಗಟ್ಟುತ್ತದೆ: ನಾಲ್ಕು ದೊಡ್ಡ ಚಮಚ ಕಿರುಕಸಾಲೆ ಸೊಪ್ಪಿನ ರಸಕ್ಕೆಅರ್ಧ ಹೋಳು ನಿಂಬೆ ಹಣ್ಣಿನ ರಸ ಬೆರೆಸಿ, ಪ್ರತಿ ದಿನ ರಾತ್ರಿ ಮಲಗುವುದಕ್ಕಿಂತ ಮುಂಚೆ ಕುಡಿಯಬೇಕು.

Leave a Reply

Your email address will not be published. Required fields are marked *