ಆಯುರ್ವೇದ ಅನ್ನುವುದು ಹಲವು ವರ್ಷಗಳಿಂದ ಬ್ಗಳಕೆಯಲ್ಲಿದೆ ಆಯುರ್ವೇದದ ಮಡೆಮದ್ದುಗಳು ಹಲವು ರೀತಿಯ ಕಾಯಿಲೆಗಳಿಗೆ ಬಳಸಲಾಗುತ್ತದೆ, ಹಾಗೆಯೆ ನಿಮ್ಮ ಮನೆಯ ಸುತ್ತಮುತ್ತ ಚೇಳು ಅಥವಾ ಜೇಡ ಕಚ್ಚಿದರೆ ಏನ್ ಮಾಡಬೇಕು ಮತ್ತು ಯಾವ ರೀತಿಯಾಗಿ ಆವ್ಯಕ್ತಿಯ ಪ್ರಾಣವನ್ನು ಉಳಿಸಬಹುದು ಅನ್ನೋದು ಇಲ್ಲಿದೆ ನೋಡಿ.

ಬೇವಿನ ಸೊಪ್ಪು ಅರೆದು ಚೇಳು ಕಚ್ಚಿದ ಜಾಗಗಕ್ಕೆ ಒಂದು ಶುದ್ಧವಾದ ಬಟ್ಟೆಯಿಂದ ಕಟ್ಟಬೇಕು ಇದರಿಂದ ವಿಷ ಏರುವುದು ಕಡಿಮೆಯಾಗುತ್ತದೆ,ಅದೇ ಜಾಗಗಕ್ಕೆ ಉರಿತ ಕಡಿಮೆಯಾಗಬೇಕು ಅಂದ್ರೆ ಬೆಳ್ಳುಳ್ಳಿಯನ್ನು ಅರೆದು ಆ ಜಾಗಕ್ಕೆ ಹಚ್ಚಿದರೆ ಉರಿತ ಕಡಿಮೆಯಾಗುತ್ತದೆ.

ಇನ್ನು ಜೇನು ಹುಳ ಹಾಗು ಕಡಜ ಕಚ್ಚಿದರೆ ಈರುಳ್ಳಿಯನ್ನು ಕಚ್ಚಿದ ಜಾಗಕ್ಕೆ ಚೆನ್ನಾಗಿ ತಿಕ್ಕಬೇಕು ಇದರಿಂದ ಅಲ್ಲಿನ ಉರಿತ ಕಡಿಮೆಯಾಗುತ್ತದೆ. ಮೂಲಂಗಿ ಮತ್ತು ಉಪ್ಪನ್ನು ಜಜ್ಜಿ ಚೇಳು ಕಚ್ಚಿದ ಜಾಗಕ್ಕೆ ಪಟ್ಟು ಹಾಕಿದ್ರೆ ನೋವು ಮತ್ತು ಉರಿ ಕಡಿಮೆಯಾಗುತ್ತದೆ, ನಿಂಬೆ ಹಣ್ಣಿನ ಬೀಜಗಳನ್ನು ಜಜ್ಜಿ ಅರೆದು ಕಚ್ಚಿದ ಜಾಗಕ್ಕೆ ಲೇಪಿಸಬೇಕು.

ಹಾಗಲಕಾಯಿಯನ್ನು ಜಜ್ಜಿ ಅದರ ರಸವನ್ನು ಕಚ್ಚಿದ ಜಾಗಕ್ಕೆ ಸವರುವುದರಿಂದ ಉರಿ ಕಡಿಮೆಯಾಗುತ್ತದೆ, ಪಚ್ಚ ಕರ್ಪುರದಿಂದ ಕೊಬ್ಬರಿ ಎಣ್ಣೆಯಲ್ಲಿ ಅರೆದು ಲೇಪಿಸುವುದರಿಂದ ಬೇಗ ಗುಣ ಕಾಣುತ್ತದೆ.

Leave a Reply

Your email address will not be published. Required fields are marked *