ಮೂಲತಃ ಭಾರತೀಯ ಈ ವಿಜ್ಞಾನಿ ಅಮರಿಕದಲ್ಲಿ ಒಂದೊಳ್ಳೆ ಕೆಲಸವಿತ್ತು ಅಲ್ಲಿ ದುಡಿದರೆ ಸಕಾಕುತ್ತಿತ್ತು ಇವರ ಜೀವನ ಸುಖಮಯವಾಗಿರುತ್ತಿತ್ತು ಆದ್ರೆ ಅವೆಲ್ಲವನ್ನು ಬಿಟ್ಟು ಮರಳಿ ತಮ್ಮೂರಿಗೆ ಬಂದು ರೈತನಾಗಲು ಕಾರಣವೇನು ಗೊತ್ತಾ?

ಪ್ರತಿದಿನ ಹೊಸತನವನ್ನು ಹೊಸ ಹೊಸ ವಿಷಯಗಳನ್ನು ಆವಿಷ್ಕಾರ ಮಾಡುವಂತ ಈ ವಿಜ್ಞಾನಿಗಳು ಸುಮ್ಮನೆ ಇರಲಾರರು ಒಂದು ವಿಷ್ಯದ ಬಗ್ಗೆ ತಿಳಿಯಲು ಹೆಚ್ಚು ಕಾತುರತೆಯನ್ನು ಹೊಂದಿರುತ್ತಾರೆ. ಒಂದು ದಿನ ಭಾರತದಿಂದ ಮನೆಯವರು ಇವರಿಗೆ ಕರೆ ಮಾಡುತ್ತಾರೆ ಅಮ್ಮನಿಗೆ ಆಸ್ಪತ್ರೆಯಲ್ಲಿ ಸೇರಿಸಿದ್ದೇವೆ ಎಂಬುದಾಗಿ. ಇವರ ತಾಯಿ ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು. ಹರಿನಾಥ್ ಅವರ ಅಮ್ಮನಿಗೆ ಸಂಧಿವಾತದ ಜೊತೆಗೆ ಬೆನ್ನೆಲುಬಿನ ಬೇನೆಯಿತ್ತು. ಇದು ತೀವ್ರವಾಗಿದ್ದ ಕಾರಣ ವೈದ್ಯರು ಹೆಚ್ಚು ಪವರ್‌ನ ಮೆಡಿಸಿನ್ ಕೊಡುತ್ತಿದ್ದರು. ಇದರಿಂದ ಅಮ್ಮನಿಗೆ ಗ್ಯಾಸ್ಟ್ರಿಕ್‌ನಂಥ ಸಮಸ್ಯೆ ಹೆಚ್ಚಾಗಿ ಒದ್ದಾಡುತ್ತಿದ್ದರು.

ದಿನ ಕಳೆದಂತೆ ಅಮ್ಮನ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಜಾಗತಿಕ ಮಟ್ಟದ ಮೆಡಿಸಿನ್ ರಿಸರ್ಚರ್ ಆಗಿ, ಅನೇಕ ಬಗೆಯ ಮೆಡಿಸಿನ್ಗಳನ್ನು ಸೃಷ್ಟಿಸುತ್ತಿದ್ದ ನಾನು ಕೈಲಾಗದಂತೆ ಕೂತಿದ್ದೆ. ಆಗ ಜಪಾನಿನ ವಿಜ್ಞಾನಿಯೊಬ್ಬರು ನುಗ್ಗೆ ಎಲೆ ಜ್ಯೂಸ್ ಬಗ್ಗೆ ಬರೆದಿದ್ದ ಲೇಖನ ನೆನಪಾಯ್ತು. ಬೇರೆ ದಾರಿ ಇರಲಿಲ್ಲ. ಆದದ್ದಾಗಲಿ ಅಂತ ನುಗ್ಗೆ ಎಲೆಯಿಂದ ಮಾಡಿದ ಜ್ಯೂಸ್ ಅನ್ನು ದಿನಾ ಅಮ್ಮನಿಗೆ ಕುಡಿಯಲು ಕೊಟ್ಟೆ. ನನಗೇ ಅಚ್ಚರಿಯಾಗುವಂತೆ ಅಮ್ಮ ಚೇತರಿಸಿಕೊಂಡರು. ಬಹಳ ಗುಣವಾಗಿ ಮನೆಗೆ ಮರಳಿದರು’ ಎನ್ನುವಾಗ ಡಾ. ಹರಿನಾಥ್ ಕಣ್ಣಂಚು ಒದ್ದೆಯಾಗುತ್ತದೆ.

ಡಾ. ಹರಿನಾಥ್ ಕಸಿಗಣೇಸನ್ ಇಂದು ಅಪ್ಪಟ ಕೃಷಿಕನಾಗಿದ್ದಾರೆ, ಅಲ್ಲದೆ ಅಂದಿನ ಜೀವನಕ್ಕೂ ಹಿಂದಿನ ಜೀವನಕ್ಕೂ ತುಂಬಾನೇ ವ್ಯತ್ಯಾಸವಿದೆ. ತಮಿಳುನಾಡು ಬಾರ್ಡರ್ನಲ್ಲಿರುವ ಪೆನ್ನಗರಮ್ ಎಂಬ ಹಳ್ಳಿಯತ್ತ ಹೋದರೆ ಉಳಿದ ರೈತರ ಹೊಲಗಳ ಜೊತೆಗೆ ಹರಿನಾಥ್ ಅವರ ಜಮೀನೂ ಕಾಣಸಿಗುತ್ತದೆ.

ಶಿಕ್ಷಕಿಯಾಗಿದ್ದ ತಾಯಿ ಬಲುಕಷ್ಟದಿಂದ ಮಗನನ್ನು ಬೆಳೆಸಿದರು. ಕಾಡಿನ ಸಮೀಪವಿದ್ದ ಮನೆ, ಶಿಕ್ಷಕ ವೃತ್ತಿಯ ಜೊತೆಗೆ ಸಾಂಪ್ರದಾಯಿಕ ವ್ಯವಸಾಯ ಮಾಡುತ್ತಿದ್ದ ಕುಟುಂಬದಲ್ಲಿ ಹರಿನಾಥ್ ಬೆಳೆದರು. ಆಗಲೇ ಕೃಷಿಯತ್ತ ಬಹಳ ಆಸಕ್ತಿ ಇತ್ತು. ಮುಂದೆ ಚೆನ್ನೈಯಲ್ಲಿ ಉನ್ನತ ಪದವಿ ಪಡೆದರು. ಮುಂದೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧಕನಾಗಿ ಉದ್ಯೋಗ ಶುರುವಾಯ್ತು.

ಕಲಾಂ ಮೆಚ್ಚಿದ ಹುಡುಗ: ಹರಿನಾಥ್ ಡಿಆರ್‌ಡಿಓದಲ್ಲಿ ಸಂಶೋಧಕನಾಗಿದ್ದಾಗ ಅಮೆರಿಕಾದ ಕೆರೊಲಿನಾದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂಶೋಧನಾ ಕಾರ್ಯಕ್ಕೆಂದು ತೆರಳಬೇಕಾಯ್ತು. ಕನಿಷ್ಠ ಒಂದು ವರ್ಷದ ರಜೆಯ ಅವಶ್ಯಕತೆ ಇತ್ತು. ಅದು ಡಾ.ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ಕಾಲ. ಸಂಶೋಧಕನಾಗಿ ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದ ಹರಿನಾಥ್ ಬಗ್ಗೆಕಲಾಂ ಅವರಿಗೆ ಮೊದಲೇ ಗೊತ್ತಿತ್ತು.

2 ವರ್ಷಗಳ ರಜೆ ಮಂಜೂರು ಮಾಡುವ ಮೊದಲು ಅವರು ಹರಿನಾಥ್ ಅವರಿಗೆ ಒಂದು ಮಾತು ಹೇಳಿದರು ನೀನು ಅಮೆರಿಕಾದಲ್ಲೇ ನಿಲ್ಲಬೇಡ. ಮರಳಿ ಭಾರತಕ್ಕೆ ಬಾ. ಹುಟ್ಟಿದ ದೇಶಕ್ಕೆ ನಿನ್ನ ಸೇವೆ ಸಿಗಲಿ’ ಅಂತ. ಕಲಾಂ ಅವರ ಮಾತು, ವಿಚಾರಗಳು ಹರಿನಾಥ್ ಅವರಿಗೆ ಪ್ರೇರಣೆಯಾಯ್ತು ಅನ್ನೋದನ್ನ ಹೇಳಲಾಗುತ್ತದೆ.

Leave a Reply

Your email address will not be published. Required fields are marked *