ಎದೆಯುರಿ ಹಾಗು ಗ್ಯಾಸ್ಟ್ರಿಕ್‌ ಸಮಸ್ಯೆ ಜೀವನದಲ್ಲಿ ಯಾವತ್ತೂ ಬರಬಾರದು ಅಂದ್ರೆ ಈ ವಿಧಾನ ಅನುಸರಿಸಿ ಸಾಕು..!

ಹೌದು ಸಾಮಾನ್ಯವಾಗಿ ಈ ಎದೆಯುರಿ ಹಾಗು ಗ್ಯಾಸ್ಟ್ರಿಕ್‌ ಸಮಸ್ಯೆ ತುಂಬ ಮಂದಿಗೆ ಕಾಡುತ್ತದೆ ಹಾಗು ಇದರಿಂದ ಸಾಕಷ್ಟು ತೊಂದ್ರೆ ಆಗಿರುತ್ತದೆ ಹಾಗಾಗಿ ಈ ಎದೆಯುರಿ ಹಾಗು ಗ್ಯಾಸ್ಟ್ರಿಕ್‌ ಸಮಸ್ಯೆ ಯಾವತ್ತು ಬರಬಾರದು ಅಂದ್ರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.

ಜಠರಗ ಒಳಪದರದಲ್ಲಿನ ಉರಿಯೂತವೇ ಗ್ಯಾಸ್ಟ್ರಿಕ್‌ ಸಮಸ್ಯೆ ಅಥವಾ ಎದೆಯುರಿ ಸಮಸ್ಯೆಗೆ ಕಾರಣ. ನಾವು ತಿನ್ನುವ ಆಹಾರದ ವ್ಯತ್ಯಾಸದಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಸೇವಿಸುವ ಆಹಾರದ ಮೇಲೆ ನಿಗಾ ಇದ್ದಲ್ಲಿ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಕೆಲವರಿಗೆ ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರು ಎದೆಯುರಿ ಆರಂಭವಾಗುತ್ತದೆ. ಕೆಲವರಿಗೆ ಎದೆಯಲ್ಲಿ ಬೆಂಕಿಯುರಿದ ಅನುಭವವಾಗುತ್ತದೆ. ಜಠರದ ಒಳಪದರದಲ್ಲಿನ ಉರಿಯೂತವೇ ಈ ಸಮಸ್ಯೆಗೆ ಮೂಲ ಕಾರಣ.

ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ದೂರವಾಗಲು ಹೀಗೆ ಮಾಡಿ: ಅತಿಯಾಗಿ ಟೀ, ಕಾಫಿ, ಮಾರುಕಟ್ಟೆಯಲ್ಲಿ ಸಿಗುವ ತಂಪುಪಾನೀಯಗಳನ್ನು ಸೇವಿಸಬೇಡಿ. ಮಧ್ಯಪಾನ ಮತ್ತು ಧೂಮಪಾನಗಳೆರಡೂ ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಅತಿಯಾದ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ. ಅತಿಯಾದ ಉಪ್ಪಿನಂಶವಿರುವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ.

ನಿಗದಿತ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವನೆ ಮಾಡಿ. ಪ್ರತಿದಿನ 8-10 ಗಂಟೆ ನಿದ್ರೆ ಮಾಡಿ. ಪ್ರತಿದಿನ 3-4 ಲೀಟರ್‌ ನೀರು ಕುಡಿಯಿರಿ. ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಂಶವಿರು ಪದಾರ್ಥಗಳನ್ನು ಸೇವಿಸಿ. ಧಾನ್ಯಗಳು ಹಾಗೂ ಬೇಳೆಕಾಳುಗಳನ್ನು ಹೆಚ್ಚಾಗಿ ಸೇವಿಸಿ.

Leave a Reply

Your email address will not be published. Required fields are marked *