ಈ ಗಿಡಕ್ಕೂ ವಾಸ್ತುವಿಗೂ ಇದೆ ನಂಟು. ಭಾರತೀಯ ಸಂಸ್ಕೃತಿಯಲ್ಲಿಯೂ ಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಯಾವ ಭೂಮಿಯಲ್ಲಿ ಹೆಚ್ಚು ಹೆಚ್ಚು ಸೀಬೆಹಣ್ಣಿನ ವೃಕ್ಷ ಬೆಳೆಯುತ್ತದೋ, ಆ ಭೂಮಿ ವಾಸ್ತುವಿನ ಪ್ರಕಾರ ತುಂಬಾ ಶ್ರೇಷ್ಠ ತಾಣ. ದಪ್ಪ ಮಣ್ಣಿನಿಂದ ಹಿಡಿದು, ಮರಳಿನಂಥ ಮಣ್ಣಿನವರೆಗೂ ಎಲ್ಲ ವಿಭಿನ್ನ ಪ್ರಕಾರದ ಮಣ್ಣಿನಲ್ಲಿಯೂ ಇದು ಬೆಳೆಯುತ್ತದೆ. ಎಲ್ಲಿ ಸಮೃದ್ಧವಾಗಿ ಬೆಳೆದು ಕೊಳ್ಳುತ್ತದೋ, ಅದನ್ನು ಶ್ರೇಷ್ಠ ಜಾಗವೆನ್ನಲು ಅಡ್ಡಿಯಿಲ್ಲ.

ನಿಮ್ಮ ಮನೆಯ ಅವರದಲ್ಲಿ ಯಾವ ಭಾಗದಲ್ಲಿ ಬೇಕಾದ್ರು ಹಾಕಿ ಇದು ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಮತ್ತು ಎಲ್ಲ ರೀತಿಯಾದ ವಾಸ್ತು ದೋಷವನ್ನು ಹೋಗಲಾಡಿಸುತ್ತದೆ.

ಶೀತಗುಣ ಹೊಂದಿರುವ ಸೀಬೆ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಮಲಬದ್ಧತೆಯಂಥ ಸಮಸ್ಯೆಗೂ ಇದು ಮದ್ದು. ಆಯುರ್ವೇದದಲ್ಲೂ ಸೀಬೆಹಣ್ಣು ಮತ್ತು ಅದರ ಬೀಜಕ್ಕೆ ವಿಶೇಷ ಮಹತ್ವವಿದೆ. ಇದರಲ್ಲಿರುವ ವಿಟಮಿನ್ ಮತ್ತು ಖನಿಜ ಶರೀರದಲ್ಲಿ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು. ಹಳ್ಳಿ ಹಿತ್ತಲಲ್ಲಿ ಇರೋ ಈ ಗಿಡ ಮನೆ ಮಂದಿ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಸಹ ಪ್ರಮುಖ ಪಾತ್ರವಹಿಸುತ್ತದೆ.

Leave a Reply

Your email address will not be published. Required fields are marked *