ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು ಪ್ರಯೋಜನ ಉಂಟು ಕ್ಯಾರೆಟ್ ನಿಂದ ಉಪ್ಪಿನಕಾಯಿ ಕೋಸುಂಬರಿ ಹಲ್ವಾ ತಯಾರಿಸಿ ಸೇವಿಸಬಹುದು.

ಪ್ರತಿ ಊಟದ ನಂತರ ಒಂದು ಕ್ಯಾರೆಟ್ ಅನ್ನು ಅಗಿದು ತಿನ್ನುವುದರಿಂದ ಬಾಯಿಯಿಂದ ಬರುವ ದುರ್ಗಂಧ ನಿಂತು ಹೋಗುವುದು, ಬಾಯಲ್ಲಿ ಬರಬಹುದಾದ ಹಾನಿಕಾರಕ ಜೀವಾಣುಗಳು ನಾಶವಾಗುವುದು, ಹಲ್ಲುಗಳು ಸ್ವಚ್ಛವಾಗುವುದು, ವಸಡುಗಳಿಂದ ರಕ್ತಸ್ರಾವ ತಡೆಯುವುದು, ಆಹಾರ ಚೆನ್ನಾಗಿ ಜೀರ್ಣವಾಗುವುದು.

ಕ್ಯಾರೆಟನ್ನು ಸದಾಕಾಲ ಸೇವಿಸುತ್ತಿದ್ದಲ್ಲಿ ವಾಚಕಗಳಲ್ಲಿ ಹುಟ್ಟುವ ಅನೇಕ ರೋಗಗಳಿಂದ ಮುಕ್ತರಾಗಬಹುದು, ಸರ್ವೇಸಾಮಾನ್ಯವಾಗಿ ತಲೆದೋರುವ ಅಜೀರ್ಣ ರೋಗದಿಂದ ಪಾರಾಗಬಹುದು.

ಹೆಸರು ಬೇಳೆ ಕೋಸಂಬರಿ ಯೊಂದಿಗೆ ಕ್ಯಾರೆಟ್ ಅನ್ನು ಸೇರಿಸಿ ತಿನ್ನುವುದರಿಂದ ದೇಹ ತಂಪಾಗುವುದು, ಮಲಬದ್ಧತೆ ನಿವಾರಣೆ ಆಗುವುದು, ಕಣ್ಣಿನ ಆರೋಗ್ಯ ರಕ್ಷಣೆಗೆ ಕ್ಯಾರೆಟ್ ಕೋಸಂಬರಿ ಆಗಾಗೆ ಸೇವಿಸುವುದು ಒಳ್ಳೆಯದು.

ಕ್ಯಾರೆಟ್ ಅನ್ನು ಕೊಬ್ಬರಿಯಂತೆ ತುರಿದು ಆ ತುರಿಗೆ ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ಸೇವಿಸುತ್ತಿದ್ದಲ್ಲಿ ನರಮಂಡಲ ಪಿತ್ತಕೋಶ, ಶ್ವಾಸಕೋಶ, ಮೂತ್ರಪಿಂಡ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಲ್ಲಿ ಹೆಚ್ಚು ಗುಣ ಕಂಡು ಬರುವುದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುವುದು.

ಕ್ಯಾರೆಟನ್ನು ತುರಿದು ಒಂದು ಸ್ಟೀಲ್ ಡಬ್ಬಿಯಲ್ಲಿ ತುಂಬಿರಿ, ಆ ತುರಿಗೆ ಅಗತ್ಯವಾದಷ್ಟು ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ, ಅರ್ಧ ಗಂಟೆಯ ನಂತರ ಸ್ವಲ್ಪ ನೀರು ಸುರಿದು ಕ್ಯಾರೆಟ್ ತುರಿಯನ್ನು ನೀರಿನಲ್ಲಿ ಚೆನ್ನಾಗಿ ಕಿವುಚಿ, ಆ ನೀರಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಅಗತ್ಯವಿದ್ದಲ್ಲಿ ಇನ್ನಷ್ಟು ಸಕ್ಕರೆ ಸೇರಿಸಿ ಕ್ಯಾರೆಟ್ ಶರಬತ್ತು ಸಿದ್ಧವಾಗುವುದು, ಇದು ಶಕ್ತಿವರ್ಧಕ ಪಾನೀಯ, ಕೆಮ್ಮು, ದಮ್ಮು, ಸಂದಿವಾತ, ಮಲಕಟ್ಟು ಈ ರೋಗಗಳಲ್ಲಿ ಕ್ಯಾರೆಟ್ ಶರಬತ್ತು ಸೇವಿಸುವುದರಿಂದ ಗುಣ ಕಂಡು ಬರುವುದು.

ಕ್ಯಾರೆಟ್ ನಿಂದ ಹಲ್ವಾ ತಯಾರಿಸಿ ಸೇವಿಸಿದರೆ ವೀರ್ಯ ವೃದ್ಧಿಯಾಗುವುದು ಮತ್ತು ಲೈಂಗಿಕ ಸಾಮರ್ಥ್ಯ ಹೆಚ್ಚುವುದು.

ಒಂದು ಬಟ್ಟಲು ಕ್ಯಾರೆಟ್ ಸೊಪ್ಪಿನ ರಸಕ್ಕೆ ಒಂದು ಟೀ ಚಮಚ ನಿಂಬೆರಸ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಕ್ಯಾರೆಟ್ ಸೇವನೆಯಿಂದ ಅದಕ್ಕಿಂತ ಹೆಚ್ಚು ಫಲಾ ದೊರಕುವುದು, ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಅಗತ್ಯವಾದ ಎ ಬಿ ಮತ್ತು ಸಿ ಜೀವಸತ್ವಗಳು ಕ್ಯಾಲ್ಸಿಯಂ ಮತ್ತು ಕಬ್ಬಿನ ಒಂದು ಬಟ್ಟಲು ರಸದಿಂದ ಲಭಿಸುವುದು ಆದುದರಿಂದ ಕ್ಯಾರೆಟ್ ತಂದಾಗ ಅದರ ಸೊಪ್ಪು ಕಿತ್ತು ಬೀದಿಗೆ ಚೆಲ್ಲುವುದು ಸರಿಯಲ್ಲ.

Leave a Reply

Your email address will not be published. Required fields are marked *