ಪಶು-ಪಕ್ಷಿಗಳಿಗೆ ಮತ್ತು ಮನುಷ್ಯನಿಗೆ ಸಾಕಷ್ಟು ವ್ಯತ್ಯಾಸಗಳು ಇವೆ. ಮನುಷ್ಯರಲ್ಲಿ ಹತ್ತಿರದ ಸಂಬಂಧದಲ್ಲಿ ಮದುವೆಯಾದರೆ ಮುಂದೆ ಹುಟ್ಟುವ ಸಂತಾನ ದೈಹಿಕ ವಿರೂಪತೆಗೆ ಕಾರಣವಾಗಬಹುದು ಎಂಬುದು ಪ್ರಾಚೀನ ಚಿಂತಕರ ಅಭಿಪ್ರಾಯವಾಗಿತ್ತು. ಸಾಪಿಂಡ್ಯ ಮತ್ತು ಸಗೋತ್ರ ವಿವಾಹವನ್ನು ಪ್ರಾಚೀನ ಪರಂಪರೆ ಶಾಸ್ತ್ರಪೂರ್ವಕವಾಗಿ ವಿರೋಧಿಸಿದೆ. ಪ್ರಾಣಿ-ಪಕ್ಷಿಗಳಿಗೂ, ಮನುಷ್ಯನಿಗೂ ಬೇಕಾದಷ್ಟು ವ್ಯತ್ಯಾಸವಿದೆ. ರಕ್ತಸಂಬಂಧದ ಬಗ್ಗೆ ಆಧುನಿಕ ವಿಜ್ಞಾನ ವ್ಯಾಪಕ ಸಂಶೋಧನೆ ನಡೆಸಿ ಸಮೀಪದ ಬಂಧುಗಳಲ್ಲಿ ವಿವಾಹ ಸರಿಯಲ್ಲ ಎಂದು ಖಚಿತಪಡಿಸಿದೆ.

ಮಾನವ ತಳಿಶಾಸ್ತ್ರದ ಪ್ರಕಾರ ಹತ್ತಿರ ಸಂಬಂಧದ ಗಂಡು-ಹೆಣ್ಣುಗಳ ದೇಹದಲ್ಲಿ ಒಂದೇ ತಳಿಗೆ ಸೇರಿದ ವಂಶವಾಹಿನಿಗಳು ಕಂಡು ಬರುತ್ತವೆ. ಇವುಗಳು ಕೂಡುವಿಕೆಗೆ ಸ್ವಕೀಯ ಸಂಕರ› ಎಂಬ ಹೆಸರಿದೆ. ಇದರಿಂದ ವರ್ಣತಂತುಗಳು ಕಳಾಹೀನವಾಗುತ್ತಾ ಅಶಕ್ತ ವಂಶವಾಹಿನಿಗೆ ಕಾರಣವಾಗುತ್ತವೆ. ಕಾರಣ ಎರಡು ಶಕ್ತಿಹೀನ ವಂಶವಾಹಿನಿಗಳ ಮಿಲನ ಹೊಂದಿದ ಗರ್ಭ ರೂಪುಗೊಂಡರೆ ಅದು ಹುಟ್ಟುವ ಮಗುವಿನ ಅಂಗರಚನೆಯ ಮೇಲೆ ಪರಿಣಾಮ ಬೀರಿ ಬುದ್ಧಿವಿಕಲ ಮಗುವಿನ ಜನನಕ್ಕೆ ಕಾರಣವಾಗುತ್ತದೆ. ಈ ಸಮೀಪ ಸಂಬಂಧಿಗಳ ವಿವಾಹವನ್ನು ಆಧುನಿಕ ವೈದ್ಯ ವಿಜ್ಞಾನರಕ್ತ ಸಂಬಂಧದ ವಿವಾಹ’ ಎಂದು ಕರೆದಿದೆ. ಇಂತಹ ವಿವಾಹವನ್ನು ಆಧುನಿಕ ವಿಜ್ಞಾನವೂ ವಿರೋಧಿಸಿದೆ.

ಭಾರತೀಯರು ಬಹಳ ಹಿಂದೆಯೇ ಸಂಶೋಧಿಸಿ ಅದನ್ನು ಧಾರ್ಮಿಕ ನಿಯಮಗಳ ಚೌಕಟ್ಟಿನಲ್ಲಿ ಕೂಡ್ರಿಸಿ ಸಾಮಾಜಿಕವಾಗಿ ಬಳಕೆಗೂ ತಂದಿದ್ದರು. `ಹಾಗೆ ರೂಪುಗೊಂಡ ಧಾರ್ಮಿಕ ನಿಯಮವೇ ಸಾಪಿಂಡ್ಯ ಮತ್ತು ಸಗೋತ್ರ ನಿಷೇಧದ ಸಂಪ್ರದಾಯ.’ ಅತ್ಯಂತ ಜಟಿಲವಾದ ಇಂದಿಗೂ ಖಚಿತವಾಗಿ ವಿಮರ್ಶಿಸಲು ಸಾಧ್ಯವಿಲ್ಲದ ತಳಿಕೂಟದ ಮೂಲಭೂತ ರಹಸ್ಯವನ್ನು ನಾಲ್ಕಾರು ಸಾವಿರ ವರ್ಷಗಳ ಹಿಂದೆಯೇ ಭಾರತೀಯರು ಸಂಶೋಧಿಸಿದ್ದರು.

ತಳಿ ವಿಜ್ಞಾನದ ಆಳವಾದ ತಿಳಿವು ಇಲ್ಲವಾದರೂ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಸಾಪಿಂಡ್ಯ ಮತ್ತು ಸಗೋತ್ರ’ ಎಂಬ ಕಲ್ಪನೆಯ ಮೂಲಕ ಜಾರಿಯಲ್ಲಿ ತಂದಿದ್ದರು. ತಾಯಿಯ ಕಡೆಯ ಏಳು(ಕನಿಷ್ಠ ಐದು) ಹಾಗೂ ತಂದೆಯ ಕಡೆಯ ಏಳು ತಲೆಮಾರುಗಳವರೆಗೆ ವಿವಾಹ ಆಗುವುದನ್ನು ನಿಷೇಧಿಸಲಾಗಿತ್ತು. ಈ ನಿಯಮವನ್ನು ಜನಸಾಮಾನ್ಯರು ಪಾಲಿಸಿದ ರೀತಿ ಅತ್ಯಂತ ಆಶ್ಚರ್ಯಕರವಾಗಿದೆ.

ಸಾಮಾನ್ಯವಾಗಿ ಜನ್ಮ ನೀಡಿದವರು, ತಂದೆ-ತಾಯಿ ಸಂಗಡ ಹುಟ್ಟಿದವರು, ಸಹೋದರನ ಸಹೋದರಿಯರು, ತಂದೆ-ತಾಯಿಗಳ ಹಿರಿಯರು, ಅಜ್ಜ-ಅಜ್ಜಿ, ತಾತ-ಮುತ್ತಾತ-ಮುತ್ತಜ್ಜಿ, ತಂದೆಯ ಸೋದರರು- ಅಂದರೆ ಚಿಕ್ಕಪ್ಪಂದಿರು, ತಂದೆಯ ಸೋದರಿಯರು ಅಂದರೆ ಸೋದರತ್ತೆಯರು ಹೀಗೆ ರಕ್ತಸಂಬಂಧ ವನ್ನು ವರ್ಗೀಕರಿಸಲಾಗಿದೆ. ಇದು ರಕ್ತಸಂಬಂಧದ ಒಳ ಸುಳಿ. ಕ್ರಮೇಣ ಸಾಪಿಂಡ್ಯದ ಹಿನ್ನೆಲೆ ಯಲ್ಲಿರುವ ವೈಜ್ಞಾನಿಕ ಅಂಶ ಮರೆಯಾಗುತ್ತಾ ಮೊದಲು ತಾಯಿಕಡೆಯ ಸಂಬಂಧದ ನಿಷೇಧವು ಏಳರಿಂದ ಐದು ತಲೆಮಾರುಗಳ ಮಿತಿಗೆ ಇಳಿಯಿತು. ಈಗಂತೂ ಸಾಪಿಂಡ್ಯದ ಬಗ್ಗೆ ಯಾರೂ ಚಿಂತಿಸುವುದಿಲ್ಲ.

ನಾತೆಯಲ್ಲಿ ಸೋದರರಾಗುವ ವಿವಾಹಗಳು ನಡೆಯುತ್ತಿಲ್ಲವಾದರೂ ತಾಯಿಯ ಕಡೆಯ ಸಂಬಂಧ ಅಂದರೆ ಸೋದರ ಮಾವ, ಅವರ ಸಂತಾನ ಮುಂತಾದ ವಿವಾಹಗಳು ಸ್ವೀಕೃತವಾಗುತ್ತಿವೆ. ತವರಿನ ಮಮತೆ ಆಸ್ತಿ ಬೇರೆಯವರಿಗೆ ಹೋಗದೆ ಉಳಿಯಲೆಂಬ ಆಶಯ ಇಂತಹ ವಿವಾಹಗಳಿಗೆ ಕಾರಣವಾಗುತ್ತವೆ.

ಬ್ರಾಹ್ಮಣ, ವೈಶ್ಯ ಮುಂತಾದವರಲ್ಲಿ ಪ್ರತಿ ಕುಟುಂಬವೂ ನಿರ್ದಿಷ್ಟ `ಗೋತ್ರ’ ಎಂಬ ಗುಂಪಿಗೆ ಸೇರುತ್ತದೆ. ಒಂದೇ ಗೋತ್ರಕ್ಕೆ ಸೇರುವ ಎಲ್ಲಾ ಕುಟುಂಬಗಳು ಸಗೋತ್ರ ಕುಟುಂಬಗಳು. ಈ ಕುಟುಂಬಗಳಲ್ಲಿ ವಿವಾಹ ಸಂಬಂಧವನ್ನು ಬೆಳೆಸುವಂತಿಲ್ಲ. ಈ ಆಚಾರವು ಕಟ್ಟುನಿಟ್ಟಾಗಿ ಅನೇಕ ಕಡೆಗಳಲ್ಲಿ ಬಳಕೆಯಲ್ಲಿದೆ. ಸಂಗ್ರಹ ಮಾಹಿತಿ.

Leave a Reply

Your email address will not be published. Required fields are marked *