ಹಿಂದೂ ಧರ್ಮದಲ್ಲಿ ಹಲವಾರು ದೇವಸ್ಥಾನಗಳಿವೆ. ಅವು ಒಂದೊಂದು ರೀತಿಯಾದ ವಿಶೇಷತೆಯನ್ನು ಹೊಂದಿವೆ. ಆದರೆ ಈ ದೇವಸ್ಥಾನದಲ್ಲಿ ನೆಡೆಯುವುದೇ ಬೇರೆ. ನಮ್ಮ ಧರ್ಮದ ಪ್ರಕಾರ ಪುರೋಹಿತರೇ ಪೂಜೆ ಪುನಸ್ಕಾರಗಳನ್ನು ನೆಡೆಸುತ್ತಾರೆ. ಆದ್ರೆ ಇಲ್ಲಿ ನೆಡೆಯುವ ವಿಶೇಷತೆ ಕೇಳಿದರೆ ಆಶ್ಚರ್ಯವಾಗುತ್ತದೆ. ಹಾಗಾದ್ರೆ ಈ ವಿಶೇಷ ದೇವಸ್ಥಾನ ಯಾವುದು ಗೊತ್ತಾ..?

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ ಒಂದೇ ದಿನದಲ್ಲಿ ಪರಿಹಾರ ಶತಸಿದ್ಧ, ಉಚಿತ ಭವಿಷ್ಯ ಉಚಿತ ಪರಿಹಾರ. ಶ್ರೀ ಚಕ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಕಾರ್ತಿಕ್ ಭಟ್ ಅವರಿಂದ ಇಂದೇ ಸಂಪರ್ಕಿಸಿ ಪಂಡಿತ್ ಕಾರ್ತಿಕ್ ಭಟ್: 9008144054.

ಈ ದೇವಸ್ಥಾನವು ತೆಲಂಗಾಣದ ಖಮ್ಮಂ ನಗರದಿಂದ ಸುಮಾರು 20 ಕಿಮೀ ದೂರದಲ್ಲಿನ ಪರ್ವತದ ಮೇಲಿರುವ ಉಗ್ರ ನರಸಿಂಹ ದೇವಾಲಯ. ಅಷ್ಣಗುರ್ತಿ ಗ್ರಾಮಕ್ಕೆ ಸೇರಿದ ಭೂಪತಿ ವೆಂಕಮ್ಮ ಅತ್ಯಂತ ದೊಡ್ಡ ಭಕ್ತೆಯಾಗಿದ್ದಳು.ಒಮ್ಮೆ ವೆಂಕಮ್ಮಳ ಕನಸಿನಲ್ಲಿ ಸ್ವಾಮಿಯು ತಾನು ಸ್ತಂಭಾದ್ರಿ ಗುಡ್ಡದ ಮೇಲೆ ನೆಲೆಸಿದ್ದೇನೆ ಎಂದು ಹೇಳಿದ್ದನಂತೆ. ಅಲ್ಲಿ ತನಗೆ ನಿತ್ಯ ನೈವೆಧ್ಯ ಹಾಗೂ ಪೂಜೆಗಳನ್ನು ಮಾಡಬೇಕು ಎಂದು ಆದೇಶವನ್ನು ನರಸಿಂಹ ಸ್ವಾಮಿ ನೀಡಿದನಂತೆ.

ಆಗ ವೆಂಕಮ್ಮ ತನ್ನ ಕನಸಲ್ಲಿ ನೆಡೆದ ಘಟನೆಯನ್ನು ಊರಿನ ಜನಗಳಿಗೆ ತಿಳಿಸಿದಳಂತೆ. ಆಗ ಜನ ಸ್ತಂಭಗಿರಿಯ ಮೇಲೆ ಹೋದಾಗ ಸ್ವಾಮಿ ಹೇಳಿದ ಪ್ರದೇಶವು ಕಾಣಿಸದೆ. ಅಲ್ಲಿ ನರಸಿಂಹನ ದೇವಸ್ಥಾನ ಇತ್ತಂತೆ. ದೇವಸ್ಥಾನ ಕಂಡ ಜನರು ಆಶ್ಚರ್ಯ ಗೊಂಡು ಭಕ್ತರು ಸ್ವಾಮಿಯನ್ನು ಹಲವು ಪೂಜಾ ಕೈಂಕರ್ಯವನ್ನು ಮಾಡಲಾರಂಭಿಸಿದ್ದಾರೆ. ಆಗ ಹಿಂದೂಗಳ ಜೊತೆ ಮುಸ್ಲಿಂರು ಸೇರಿ ಹಿಂದೂ ದೇವರಾದ ಉಗ್ರ ನರಸಿಂಹ ಸ್ವಾಮಿಗೆ ಅಭಿಷೇಕವನ್ನು ಮಾಡಲಾರಂಭಿಸದರಂತೆ.

ಅಂದಿನಿಂದ ಇಂದಿನವರೆಗೂ ಮುಸ್ಲಿಂರು ಉಗ್ರ ನರಸಿಂಹನಿಗೆ ಯುಗಾದಿಯೊಂದು ಅತ್ಯಂತ ಸಡಗರದಿಂದ ಮೊದಲ ಅಭೀಷೇಕವನ್ನು ಮಾಡುವ ಆಚಾರವನ್ನು ರೂಢಿಸಿಕೊಂಡು ಬಂದಿದ್ದಾರೆ. ನಿಜಾಮ ನವಾಬರ ಕಾಲದಿಂದಲೂ ಇಲ್ಲಿ ಮುಸ್ಲೀಂರೇ ಅಭಿಷೇಕ ಮಾಡುವುದು ಪ್ರತೀತಿಯಾಗಿದೆಯಂತೆ.

Leave a Reply

Your email address will not be published. Required fields are marked *