ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಎಂಬುದನ್ನು ಖಾತರಿ ಪಡಿಸಲು ವೋಟರ್​​ ಹೆಲ್ಪ್​​ಲೈನ್‘ ಸಹಾಯಕ. ಗೂಗಲ್​ ಪ್ಲೆ ಸ್ಟೋರ್​ನಲ್ಲಿ ಲಭ್ಯವಿರುವ ಈ ಆ್ಯಪ್​​ ಅನ್ನು ಡೌನ್​ ಲೋಡ್​ ಮಾಡಿಕೊಂಡು, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು ಮತ್ತು ಕೆಲ ಮಾಹಿತಿಯನ್ನು ಒದಗಿಸಿದರೆ ಸಾಕು. ಕ್ಷಣಾರ್ಧದಲ್ಲೇ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮ ಮೊಬೈಲ್​ ಸ್ಕ್ರೀನ್​ನಲ್ಲಿ ಕಾಣಬಹುದು.

ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾಗಿದೆ. ಮತದಾರ ಮತ ಹಾಕಲು ಗುರುತಿನ ಚೀಟಿ ಕಡ್ಡಾಯವಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅಗತ್ಯ. ಹಾಗಿದ್ದಾಗ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಖಾತರಿ ಪಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ

ವೋಟರ್​ ಹೆಲ್ಪ್​ಲೈನ್​: ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಎಂಬುದನ್ನು ಖಾತರಿ ಪಡಿಸಲು ವೋಟರ್​​ ಹೆಲ್ಪ್​​ಲೈನ್ ಸಹಾಯಕ. ಗೂಗಲ್​ ಪ್ಲೆ ಸ್ಟೋರ್​ನಲ್ಲಿ ಲಭ್ಯವಿರುವ ಈ ಆ್ಯಪ್​​ ಅನ್ನು ಡೌನ್​ ಲೋಡ್​ ಮಾಡಿಕೊಂಡು, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು ಮತ್ತು ಕೆಲ ಮಾಹಿತಿಯನ್ನು ಒದಗಿಸಿದರೆ ಸಾಕು. ಕ್ಷಣಾರ್ಧದಲ್ಲೇ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮ ಮೊಬೈಲ್​ ಸ್ಕ್ರೀನ್​ನಲ್ಲಿ ಕಾಣಬಹುದು.ಅಷ್ಟೇ ಅಲ್ಲದೆ 1950 ಸಂಖ್ಯೆಗೆ ಉಚಿತ ಸಂದೇಶವನ್ನು ಕಳುಹಿಸುವ ಮೂಲಕ ಹೆಸರನ್ನು ಖಾತರಿಪಡಿಸಿಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಹೋದಲ್ಲಿ ಅಥವಾ ಡಿಲೀಟ್​ ಆಗಿದ್ದಲ್ಲಿ ಅರ್ಹ ಮತದಾರರು ಫಾರಂ ನಂ. 6 ಅನ್ನು ಭರ್ತಿ ಮಾಡಿ ಭೂತ್​ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಮಾರ್ಚ್​ 19ರ ವರೆಗೆ ಹೊಸ ಮತದಾರರು ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *