ಕರ್ನಾಟಕದ ಕರಾವಳಿಯ ಭಾಗ ದೇವಸ್ಥಾನಗಳ ತವರೂರಾಗಿದೆ. ಹಲವಾರು ಪ್ರಸಿದ್ಧ ದೇವಾಲಯಗಳು ಅಲ್ಲಿವೆ ಅದೇ ರೀತಿ ಉಡುಪಿಯಲ್ಲಿರುವ ಅಂಬಲ್ಪಾಡಿಯೂ ಬಹಳ ಶಕ್ತಿ ಹೊಂದಿರುವ ಪುಣ್ಯ ಕ್ಷೇತ್ರ. ಇಲ್ಲಿನ ಮಹಾಕಾಳಿ ದೇವಿ ಮಹಿಮೆ ಅಪಾರ.

ಅಂಬಾ ಎಂದರೆ ತಾಯಿ ಹಾಗೂ ಪಾಡಿ ಎಂದರೆ ತುಳುವಿನಲ್ಲಿ ಬೆಟ್ಟದ ತುದಿ ಎಂದರ್ಥ. ಅಂದರೆ ಬೆಟ್ಟದ ಮೇಲಿರುವ ತಾಯಿ ಎಂದರ್ಥ.

ಇಲ್ಲಿ ಪ್ರತಿ ಶುಕ್ರವಾರ ಸಂಜೆ 5 ರಿಂದ 9 ಗಂಟೆಯವರೆಗೂ ಭಕ್ತರು ಈ ದೇವಿಯೊಂದಿಗೆ ಮಾತನಾಡಬಹುದು. ಈ ವೇಳೆ ಜನರು ಅವರು ವೈಯಕ್ತಿಕ ಜೀವನದ ತೊಂದರೆಯನ್ನು ದೇವಿಯೊಂದಿಗೆ ಹಂಚಿಕೊಳ್ಳುತ್ತಾರೆ.

ಇಲ್ಲಿ ನಡೆಯುವ ತರ್ಥಿ ಸ್ನಾನ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಸಪ್ತ ಋಷಿ ಪಾರಾಯಣ, ಚಂದ್ರಿಕಾ ಹೋಮ, ರಕ್ಷ ಯಂತ್ರ ಹಾಗೂ ಮಹಾ ಪೂಜೆ ವಿಶೇಷವಾದವು. ಮಹಾಕಾಳಿ ಮೂರ್ತಿಯನ್ನು ಮರದಿಂದ ಮಾಡಿದ್ದು, 6 ಅಡಿ ಎತ್ತರವಿದೆ. ಸಾಮಾನ್ಯವಾಗಿ ಶಕ್ತಿ ಮಾತೆ ಗುಡಿ ಸುತ್ತ ಪರಮೇಶ್ವರನ ಸನ್ನಿಧಾನವಿರುತ್ತದೆ. ಆದರೆ ಇಲ್ಲಿ ಲಕ್ಷ್ಮಿ ಜನಾರ್ದನನ ಗುಡಿಯಿದೆ. ಅಷ್ಟೇ ಅಲ್ಲದೆ ಗುಡಿಯ ಸುತ್ತ ಅಯ್ಯಪ್ಪ ಹಾಗೂ ಆಂಜನೇಯನ ಸನ್ನಿಧಾನವಿದೆ.

ಈ ದೇವಾಲಯವು ಉಡುಪಿ ಮಠದಿಂದ 2-3 ಕಿಲೋ ಮೀಟರ್ ಅಂತರದಲ್ಲಿದೆ. ಈ ದೇವಿ ಹತ್ತಿರ ಬೇಡಿಕೊಂಡರೆ ಅಂದುಕೊಂಡಿದ್ದು ನೆರವೇರುತ್ತದೆ ಎಂದೇ ಭಕ್ತರು ನಂಬುತ್ತಾರೆ. ಈ ಮಹಾ ಶಕ್ತಿ ಸ್ಥಳದ ಬಗ್ಗೆ ಹಲವು ಕಥೆಗಳಿವೆ.

ಬಡ ರೈತನೊಬ್ಬನ ಮಗ ಮನೆಯಲ್ಲಿ ಹೇಳದೇ, ಕೇಳದೇ ಹೋಗಿರುತ್ತಾನೆ. ಎಷ್ಟು ದಿನವಾದರೂ ಮಗನ ಸುಳಿವು ಸಿಗದ ರೈತ ಕಂಗಾಲಾಗಿ ದೇವಿ ಬಳಿ ಬರುತ್ತಾನೆ. ದೇವಿಯನ್ನು ಪ್ರಾರ್ಥಿಸಿಕೊಂಡು ಹೋದ ವಾರದಲ್ಲಿಯೇ ಮಗ ದಿಲ್ಲಿಯಲ್ಲಿ ಸುರಕ್ಷಿತವಾಗಿ ಇರುವುದಾಗಿ ಪತ್ರ ಬರೆಯುತ್ತಾನೆ. ಇಂಥ ಹತ್ತು ಹಲವು ಘಟನೆಗಳು ಈ ದೇವಿಯ ಮಹಿಮೆ ಹಾಗೂ ಪವಾಡಗಳಿಗೆ ಸಾಕ್ಷಿಯಾಗಿವೆ.

Leave a Reply

Your email address will not be published. Required fields are marked *