ಅನವಶ್ಯಕ ವಾದ ಎಲ್ಲ ಆಪ್‌ಗಳನ್ನು ತೆಗೆದುಹಾಕಿ. ಮೆಮೊರಿಯಲ್ಲಿ ಅನವಶ್ಯಕವಾಗಿ ಕುಳಿತುಕೊಳ್ಳುವ ಎಲ್ಲ ಆಪ್‌ಗಳನ್ನು ನಿಷ್ಕ್ರಿಯ ಮಾಡಿ.

ಮೊದಲಿಗೆ Clean Master ಎಂಬ ಆಪ್ ಹಾಕಿಕೊಂಡು ನಿಮ್ಮ ಫೋನನ್ನು ಸ್ವಚ್ಛ ಮಾಡಿ. ಡಿವೈಸ್ನಲ್ಲಿರುವ ಟೆಂಪರರಿ ಫೈಲುಗಳು, ಕುಕೀಸ್, ಹಿಸ್ಟರೀ ಎಲ್ಲಾ ಅಳಸಿ ಹೋಗಿ ನಿಮ್ಮ ಫೋನ್ ಹ್ಯಾಂಗ್ ಆಗದೆ ಇರುತ್ತದೆ.

ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಆಪ್ ಅನ್ನು ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿ.

ಪೋನಿನಲ್ಲಿ ಆಂಟಿ ವೈರಸ್ ಇಲ್ಲವೆ ಕ್ಲೀನಿಂಗ್ ಆಪ್ ಇನ್ಸ್ಟಾಲ್ ಮಾಡಿ ಬೇಡದಿರುವ ಆಪ್ಗಳನ್ನು ಡಿಲೀಟ್ ಮಾಡಿಕೊಳ್ಳಿ.

ಡಿವೈಸ್ ಮೆಮೊರಿ ಫ್ರೀ ಆಗಿ ಇಟ್ಟುಕೊಂಡಿರಿ. ಫೋನಿನ ಇಂಟರ್ನಲ್ ಮೆಮೊರಿ ಕಡಿಮೆಯಿದ್ದರೂ ಡಿವೈಸ್ ಸರಿಯಾಗಿ ಕೆಲಸಮಾಡುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಪೈಲುಗಳನ್ನು ಎಸ್ ಡಿ ಕಾರ್ಡ್ಗೆ ವರ್ಗಾಯಿಸಿಕೊಳ್ಳುವುದು ಉತ್ತಮ.

ಫೋನನ್ನು ವಾರಕ್ಕೆ ಒಮ್ಮೆಯಾದರೂ ರೀಸ್ಟಾರ್ಟ್ ಮಾಡಿ ಇದರಿಂದ ಫೊನ್ ಚೆನ್ನಾಗಿ ಕೆಲಸಮಾಡುತ್ತದೆ. ಅಥವಾ ಫೋನನ್ನು ವಾರಕ್ಕೆ ಒಮ್ಮೆ ಮೆಮೊರಿ ಕಾರ್ಡ್ ಬ್ಯಾಟರಿ ತೆಗೆದು ಮತ್ತೆ ಹಾಕಿ ಆನ್ ಬಳಸಿ.

ಸಾಧ್ಯವಾದರೆ ಎಲ್ಲ ಬ್ಯಾಕ್‌ಅಪ್ ತೆಗೆದುಕೊಂಡು ಒಂದು ಸಲ ಫೋನನ್ನು ಪೂರ್ತಿಯಾಗಿ ರಿಸೆಟ್ ಮಾಡಿ.

ಫೋನ್ ಚಾರ್ಜ್ ಮಾಡಲು ಕಂಪೆನಿ ಕೊಟ್ಟ ಚಾರ್ಜರ್ ಗಳನ್ನೇ ಉಪಯೋಗಿಸಬೇಕು. ಇದರಿಂದ ಫೊನ್ ಸರಿಯಾಗಿ ಕೆಲಸ ಮಾಡುವುದಿಲ್ಲ.

ಅನವಶ್ಕಕವಾದ ಆಪ್ಗಳನ್ನು ಡಿಲೀಟ್ ಮಾಡುವುದರಿಂದ ಮೆಮೊರಿ ಹೆಚ್ಚಾಗಿ ಫೋನಿನ ವೇಗ ಹೆಚ್ಚುತ್ತದೆ.

ಬೇಕಾದಾಗ ಮಾತ್ರ ವೈಫೈ, ಬ್ಲೂಟೂತ್, ಜಿಪಿಎಸ್ ಎಲ್ಲ ಬಳಸಿ, ಬೇಡವಾದಾಗ ಅವುಗಳನ್ನು ಆಫ್ ಮಾಡಿ.

Leave a Reply

Your email address will not be published. Required fields are marked *