ಈಗಿನ ಕಾಲದ ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆಯಲ್ಲಿ ಡಿಸ್‌ಲೆಕ್ಸಿಯಾ ರೋಗವು ಒಂದು. ಈ ರೋಗವು ತುಂಬಾ ಅಪಾಯಕಾರಿ ಅಲ್ಲವಾದರೂ ಕೂಡ ಮಕ್ಕಳಲ್ಲಿ ಓದು, ಬರಹ ಹಾಗೂ ಮಾತನಾಡಲು ಕಷ್ಟವಾಗುವ ಒಂದು ಸಮಸ್ಯೆಯಾಗಿದೆ. ಈ ರೋಗವು ಶೈಕ್ಷಣಿಕವಾಗಿ ಮಕ್ಕಳನ್ನು ಕುಂಠಿತಗೊಳಿಸುತ್ತದೆ. ಆಗಾಗಿ ಮಕ್ಕಳಲ್ಲಿ ಈ ಸಮಸ್ಯೆಯನ್ನು ಪರಿಗಣಿಸಿ, ಸೂಕ್ತ ಚಿಕಿತ್ಸೆ ನೀಡಿದರೆ ಸಾಕು ಈ ರೋಗವನ್ನು ಗುಣಪಡಿಸಬಹುದಾಗಿದೆ.

ಈ ಡಿಸ್ ಲೆಕ್ಸಿಯಾ ರೋಗವು ಮಕ್ಕಳಿಗೆ ಇದೆ ಎಂದು ಪೋಷಕರಿಗೆ ತಿಳಿಯುವುದು ಮಕ್ಕಳನ್ನು ಶಾಲೆಗೆ ಸೇರಿಸಿದ ನಂತರ. ಪ್ರತಿ ಮಗುವಿನಲ್ಲಿ ಡಿಸ್‌ಲೆಕ್ಸಿಯಾ ರೋಗದ ಗುಣಲಕ್ಷಣ ವಿಭಿನ್ನವಾಗಿರುತ್ತವೆ. ಈ ಸಮಸ್ಯೆಯ ಮಕ್ಕಳು ಓದುವುದು ಮತ್ತು ಬರೆಯುವುದರಲ್ಲಿ ನಿಧಾನಗತಿಯಲ್ಲಿರುತ್ತದೆ. ಅಕ್ಷರಗಳಲ್ಲಿ ಗೊಂದಲ ಉಂಟಾಗುತ್ತದೆ. ಯಾವ ಅಕ್ಷರ ಎಲ್ಲಿ ಬಳಕೆ ಮಾಡಬೇಕು ಎಂದು ತಿಳಿದಿರುವುದಿಲ್ಲ. ಪದಗಳನ್ನು ಓದಿ ಅರ್ಥಮಾಡಿಕೊಳ್ಳಲು ಆಗದಿರುವುದು ಆದರೆ, ಹೇಳಿದ ವಿಚಾರ, ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮಕ್ಕಳು ಈ ಸಮಸ್ಯೆಯನ್ನು ಅನುಭವಿಸುತ್ತಾರೆ.

ಡಿಸ್ ಲೆಕ್ಸಿಯಾ ಎಂಬ ರೋಗವು ಮಕ್ಕಳ ವಿದ್ಯಾಭ್ಯಾಸ ಮತ್ತು ಓದಿಗೆ ಸಂಬಂಧಿತ ಸಮಸ್ಯೆ. ಮಕ್ಕಳಲ್ಲಿ ಓದುವುದು, ಬರೆಯುವುದು ಹಾಗೂ ಅಕ್ಷರಗಳಲ್ಲಿ ವ್ಯತ್ಯಾಸ ಗುರುತಿಸುವಲ್ಲಿ ಕಷ್ಟವಾಗುವ ಸಮಸ್ಯೆಗೆ ಡಿಸ್‌ಲೆಕ್ಸಿಯಾ ಎಂದು ಕರೆಯುತ್ತಾರೆ. ಡಿಸ್ ಲೆಕ್ಸಿಯಾ ಸಮಸ್ಯೆ ಕ್ರಮೇಣವಾಗಿ ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅದೇ ರೀತಿ ಮಕ್ಕಳ ಇನ್ನಿತರ ಬೆಳವಣಿಗೆ ಹಾಗೂ ಚಟುವಟಿಕೆಗಳ ಮೇಲೆ ಕ್ರಮೇಣವಾಗಿ ಪರಿಣಾಮ ಬೀರುತ್ತದೆ.

ಡಿಸ್‌ಲೆಕ್ಸಿಯಾ ಮಕ್ಕಳಿಗೆ ಅಗತ್ಯವಾಗಿ ಬೇಕಾಗುವುದು ಪ್ರೋತ್ಸಾಹ. ಓದು, ಬರವಣಿಗೆಯ ವೇಳೆ, ಅವರಿಗೆ ಅರ್ಥವಾಗುವಂತೆ ನಿಧಾನವಾಗಿ ಅರ್ಥಬದ್ದವಾಗಿ ಹೇಳುವುದು ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು. ಹಾಗೂ ಮಕ್ಕಳನ್ನು ನುರಿತ ವೈದ್ಯರಿಗೆ ತೋರಿಸಿ, ಅವರ ಮಾರ್ಗದರ್ಶನದಂತೆ ಮಗುವನ್ನು ನೋಡಿಕೊಳ್ಳಬೇಕು

Leave a Reply

Your email address will not be published. Required fields are marked *