ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಕಾರಣ ಇತ್ತೀಚಿಗೆ ಮಾಲಿನ್ಯ ಮತ್ತು ಕಳಪೆ ಗುಣಮಟ್ಟದ ಆಹಾರ, ಆದ್ದರಿಂದ ನಾವು ಜಾಸ್ತಿ ಹಣ್ಣು ಹಂಪಲು ಕಡೆ ಗಮನ ಹರಿಸುತ್ತೇವೆ ಕಾರಣ ನಮ್ಮ ದೇಹಕ್ಕೆ ಅಗತ್ಯ ಇರುವ ವಿಟಮಿನ್ ಮತ್ತು ಪೋಷಕಾಂಶಗಳನ್ನು ನೀಡುತ್ತವೆ ಎನ್ನುವ ಉದ್ದೇಶದಿಂದ. ಅದೇ ರೀತಿ ಮೂಸಂಬಿ ಹಣ್ಣು ಸಹ ಹಲವಾರು ರೋಗಗಳಿಗೆ ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಇನ್ನು ಹಲವಾರು ಆರೋಗ್ಯಕಾರಿ ಲಾಭಗಳು ಈ ಹಣ್ಣಿನಲ್ಲಿವೆ ಮುಂದೆ ಓದಿ.

ಮಾನ್ಸೂನ್ ಕಾಲದಲ್ಲಿ ಮೂಸಂಬಿ ಹಣ್ಣುಗಳು ಹೆಚ್ಚಾಗಿ ಸಿಗುತ್ತದೆ. ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್​, ಫ್ಲಾವೊನೈಡ್, ಅಮೈನೋ ಆ್ಯಸಿಡ್, ಕ್ಯಾಲ್ಸಿಯಂ, ಅಯೋಡಿನ್, ಫಾಸ್ಪರಸ್, ಸೋಡಿಯಂ, ಮ್ಯಾಂಗನೀಸ್ ಮೊದಲಾದ ಅಂಶಗಳು ಮೂಸಂಬಿಯಲ್ಲಿ ಹೇರಳವಾಗಿದೆ. ಅಂಟಿ-ಆ್ಯಕ್ಸಿಡೆಂಟ್​​ ಅಂಶಗಳು ಇದರಲ್ಲಿ ಹೇರಳವಾಗಿರುವುದರಿಂದ ಮಳೆಗಾಲದ ಉಪಯುಕ್ತ ಹಣ್ಣುಗಳಲ್ಲಿ ಮೂಸಂಬಿಗೆ ಮೊದಲ ಸ್ಥಾನವಿದೆ.

ಮೂಸಿ ಅಂದರೆ ಹಣ್ಣುಗಳನ್ನು ತಿನ್ನುವುದು ಎಂದು ಅರ್ಥ ಸಾಮಾನ್ಯವಾಗಿ ತಿನ್ನುವದು ಮೋಸುವುದು ಆಡುಭಾಷೆಗಳಾಗಿವೆ.

ಈ ಹಣ್ಣಿನಲ್ಲಿ ಪೊಟಾಶಿಯಂ, ಫಾಲಿಕ್ ಆ್ಯಸಿಡ್, ಕ್ಯಾಲ್ಸಿಯಂ ಕೊಲೆಸ್ಟ್ರಾಲ್ ಅಂಶಗಳಿದ್ದು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ರಕ್ತದ ಜೀವಕೋಶಗಳಲ್ಲಿ ಎಲೆಕ್ಟ್ರೋಲೈಟ್​ ಸಮತೋಲನ ಕಾಪಾಡಿಕೊಳ್ಳುವಲ್ಲಿ ಈ ಅಂಶಗಳು ಸಹಾಯಕವಾಗಿದೆ. ಈ ಹಣ್ಣಿನಲ್ಲಿರುವ ಪೊಟಾಶಿಯಂ ಮೆದುಳಿಗೆ ಆಮ್ಲಜನಕವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಮೂಸಂಬಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಸೇವನೆ ಉತ್ತಮ. ಅಷ್ಟೇ ಅಲ್ಲದೆ ಶೀತ ಮತ್ತು ಕೆಮ್ಮಿಗೆ ಈ ಹಣ್ಣು ಅತ್ಯುತ್ತಮ ಪರಿಹಾರವಾಗಿದೆ.

ಜ್ವರ ಬಂದು ಸುಸ್ತಾಗ ಮೂಸಂಬಿ ಹಣ್ಣನು ತಿನ್ನುವುದರಿಂದ ಮತ್ತು ಮೂಸಂಬಿಯ ಜ್ಯುಸ್ ಕುಡಿಯುವುದರಿಂದ ಜ್ವರದಿಂದ ಬಳಲಿ ಸುಸ್ತಾಗಿದ್ದಾರೆ ಸುಸ್ತು ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *