ನೀರು ಇದ್ರೆ ಮಾತ್ರ ಜೀವ ಅಂದ್ರೆ ತಪ್ಪಿಲ್ಲ ಯಾಕೆ ಅಂದ್ರೆ ಈ ಜಗತ್ತಿನ ಭೂಮಂಡದಲ್ಲಿರುವ ಪ್ರತಿಯೊಂದು ಸಕಲ ಜೀವಗಳಿಗೂ ಜೀವಿಸಬೇಕು ಅಂದ್ರೆ ನೀರು ಅನ್ನೋದು ತುಂಬ ಮುಖ್ಯ. ಆದ್ರೆ ಇವತ್ತಿನ ದಿನಗಳಲ್ಲಿ ನಾವು ನೀವುಗಳು ನೀರನ್ನು ಬಳಕೆ ಮಾಡುವಾಗ ಎಷ್ಟೋ ನೀರನ್ನು ವ್ಯರ್ಥಾ ಮಾಡುತ್ತವೆ. ಆದ್ರೆ ಈ ನೀರಿನ ಮಹತ್ವ ತಿಳಿದರು ನಾವು ತಪ್ಪು ಮಾಡುತ್ತವೆ.

ನೀರು ನಮ್ಮ ದೇಹಕ್ಕೆ ತುಂಬಾನೇ ಮುಖ್ಯ ನಮ್ಮ ದೇಹದ ಅಂಗಗಳನ್ನು ಸ್ವಚ್ಛ ಮಾಡುತ್ತದೆ ಮತ್ತು ದೇಹದ ಕೆಲ ಭಾಗಗಳಿಗೆ ನೀರು ಇಲ್ಲ ಅಂದ್ರೆ ಬದುಕೋದೇ ಕಷ್ಟ ,ಹಾಗಾಗಿ ನೀರಿಗೆ ಇನ್ನೊಂದು ಪರ್ಯಾಯ ಪದ ಅಂದ್ರೆ ಅದು ಅಮೃತ ಎಂದೇ ಕರೆಯಲಾಗುತ್ತದೆ. ಇನ್ನು ಈ ಅಮೃತದ ಇನ್ನು ಹಲವು ಲಾಭಗಳು ಇಲ್ಲಿದೆ ನೋಡಿ.

ದೇಹಕ್ಕೆ ಪ್ರತಿದಿನ ಕನಿಷ್ಠ ಮೂರು ಲೀಟರ್‌ಗಳಷ್ಟು ನೀರು ಅಗತ್ಯವಿದೆ. ಇಷ್ಟು ಪ್ರಮಾಣದಲ್ಲಿ ನೀರು ಲಭಿಸದಿದ್ದರೆ ಮೂತ್ರಾಂಗಗಳ ದೋಷ ಸಂಭವಿಸುತ್ತದೆ. ಇಂತಹ ಪ್ರಮುಖ ಕಾರಣಗಳಿಂದಾಗಿ ನೀರು ಮನುಷ್ಯನ ಅಸ್ತಿತ್ವಕ್ಕೆ ಅಗತ್ಯವಿರುವ ನಿಸರ್ಗದತ್ತ ಸಾಮಗ್ರಿಯಾಗಿದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜಠರದ ಚಲನೆ ಚೆನ್ನಾಗಿರುತ್ತದೆ. ದೇಹದ ವಿಷಕಾರಿಗಳನ್ನು ಹೊರಗೆ ಹಾಕಿ ದುರ್ಬಲ ಚರ್ಮಕ್ಕೆ ಹೊಳಪು ನೀಡುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಕೆಂಪು ರಕ್ತಕಣಗಳು ಪ್ರಚೋದನೆಗೊಂಡು ವೇಗವಾಗಿ ಬೆಳೆಯುತ್ತವೆ. ಅದರಿಂದ ರಕ್ತಕ್ಕೆ ಹೆಚ್ಚು ಆಮ್ಲಜನಕ ಸರಬರಾಜು ಆಗುತ್ತದೆ.

Leave a Reply

Your email address will not be published. Required fields are marked *