ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಲೈಂಗಿಕ ಕ್ರಿಯೆ ಅನ್ನೋದು ತುಂಬಾ ಮುಖ್ಯ. ಯಾಕೆಂದರೆ ಒಬ್ಬ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ತುಂಬಾ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯು ಆರೋಗ್ಯವಂತರಾಗಿರಲು ಸೆಕ್ಸ್​ ಬಹು ಮುಖ್ಯ ಎಂದು ಸಂಶೋಧಕರು ಸಹ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಲೈಂಗಿಕ ಕ್ರಿಯೆಯಲ್ಲಿ ನಿಯಮಿತವಾಗಿ ಭಾಗಿಯಾಗುವುದರಿಂದ ಹೃದ್ರೋಗದ ಸಮಸ್ಯೆಗೆ ಉಂಟಾಗುವುದಿಲ್ಲ ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.

ಆಧುನಿಕ ಜೀವನ ಶೈಲಿಯಲ್ಲಿ ಕಂಡು ಬರುತ್ತಿರುವ ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಲೈಂಗಿಕ ಚಟುವಟಿಕೆಗಳು ಮುಖ್ಯ ಪಾತ್ರವಹಿಸುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಲೈಂಗಿಕ ಕ್ರಿಯೆಯಿಂದ ದೇಹದಲ್ಲಿ ಹಾರ್ಮೋನುಗಳು ಸೂಕ್ತ ಪ್ರಯಾಣದಲ್ಲಿ ಉತ್ಪತಿಯಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯವು ಸ್ಥಿರವಾಗಿರುತ್ತದೆ.

ಉತ್ತಮ ಲೈಂಗಿಕ ಬಂಧವಿದ್ದರೆ ಮಾತ್ರ ದಾಂಪತ್ಯ ಜೀವನವು ಸುಖಕರವಾಗಿರುತ್ತದೆ ಎಂದು ಸಂಶೋಧಕರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಲೈಂಗಿಕ ಸಂಬಂಧದಿಂದ ಬೇರ್ಪಟ್ಟವರಲ್ಲಿ ಹೆಚ್ಚಾಗಿ ಜಗಳ ಮತ್ತು ಮನಸ್ತಾಪಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸಂಗಾತಿಯೊಂದಿಗೆ ಸಮಯ ಕಳೆಯುವುದು ವೈವಾಹಿಕ ಜೀವನವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎಂದು ತಿಳಿಸಲಾಗಿದೆ.

ಈ ಸಂಶೋಧನೆಯ ಪ್ರಕಾರ ವಾರಕ್ಕೆ ಒಂದೆರಡು ಬಾರಿ ಸೆಕ್ಸ್​ ನಡೆಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ತೃಪ್ತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಆಯಾಸಭಾವ ಕಾಡಬಹುದು. ಇದು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ದಂಪತಿಗಳು ಲೈಂಗಿಕ ಸಂಬಂಧಕ್ಕಿಂತ ರೋಮ್ಯಾನ್ಸ್​ ಸೇರಿದಂತೆ ಇತರೆ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಇನ್ನೂ ಉತ್ತಮ.

ಇಂತಹ ಚಟುವಟಿಕೆಯಿಂದ ದಂಪತಿಗಳ ನಡುವೆ ಅನೋನ್ಯತೆ ಇನ್ನೂ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಒಟ್ಟಿನಲ್ಲಿ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಮತ್ತು ಪ್ರೀತಿ ಮೂಡಲು ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *