Breaking News
Home / Featured / ಮಂಡಿ ನೋವು ನಿವಾರಿಸುವ ಎಳ್ಳೆಣ್ಣೆ ಇನ್ನು ಹತ್ತು ರೋಗಗಳಿಗೆ ರಾಮಬಾಣ..!

ಮಂಡಿ ನೋವು ನಿವಾರಿಸುವ ಎಳ್ಳೆಣ್ಣೆ ಇನ್ನು ಹತ್ತು ರೋಗಗಳಿಗೆ ರಾಮಬಾಣ..!

ಮೂರು ಚಮಚ ಎಳ್ಳೆಣ್ಣೆಯ ಜೊತೆ ಒಂದು ಚಮಚ ಬೆಳ್ಳುಳ್ಳಿಯನ್ನು ಜಜ್ಜಿ ಎದೆಗೆ ತಿಕ್ಕಿದರೆ ಎದೆಯಲ್ಲಿ ಕಟ್ಟಿದ ಕಫ ಕರಗುತ್ತದೆ.

ಮಂಡಿಯ ನೋವು, ಊತವಿದ್ದಲ್ಲಿ ಎಳ್ಳೆಣ್ಣೆಯಲ್ಲಿ 3 ಚಮಚ ಹಿಪ್ಪಲಿ ಪುಡಿಯನ್ನು ಚೆನ್ನಾಗಿ ಕರಿದು, ಆ ಎಣ್ಣೆಯನ್ನು ಮಂಡಿಗೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ.ಬೇವಿನ ಎಲೆ ಪುಡಿಯನ್ನು ಅರಿಶಿನ ಮತ್ತು ಎಳ್ಳೆಣ್ಣೆಯ ಜೊತೆ ಕಲಸಿ ಲೇಪ ಮಾಡಿದರೆ, ಚರ್ಮದ ರೋಗವು ಗುಣವಾಗುತ್ತದೆ.

ಎಲ್ಲಾ ತರಹದ ಬಾಯಿಯ ರೋಗಗಳಿಗೆ , ಪ್ರತಿ ದಿನ ಎಳ್ಳೆಣ್ಣೆಯಿಂದ ಬಾಯಿಮುಕ್ಕಳಿಸುವುದು ರಾಮಬಾಣ.ಅರ್ಧ ಚಮಚ ಕಪ್ಪು ಎಳ್ಳಿನ ಜೊತೆ ಅರ್ಧ ಚಮಚ ಜೀರಿಗೆ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ, ಮಹಿಳೆಯರ ಮುಟ್ಟು ತಿಂಗಳಿಗೆ ಸರಿಯಾಗಿ ಆಗುತ್ತದೆ.

ಚೆನ್ನಾಗಿ ನಿದ್ದೆ ಬರಲು ಎಳ್ಳೆಣ್ಣೆಯ ಜತೆ ಸೋರೆಕಾಯಿಯ ರಸವನ್ನು ಬೆರೆಸಿ ತಲೆಗೆ ಹಚ್ಚಿದರೆ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.ಎಳ್ಳೆಣ್ಣೆಯ ಜತೆ ಅರಿಶಿನವನ್ನು ಕಲಸಿ ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತದೆ.
ಕೃಪೆ:vk

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *