Breaking News
Home / Featured / ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ ಚಾಲಕರು ಫುಲ್ ಕುಶ್..!

ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ ಚಾಲಕರು ಫುಲ್ ಕುಶ್..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಲಘು ಮೋಟಾರು ವಾಹನ (ಎಲ್​ಎಂವಿ)ವಿಭಾಗದ ಟ್ಯಾಕ್ಸಿ, ಆಟೋ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಗೂಡ್ಸ್ ರಿಕ್ಷಾ ಓಡಿಸಲು ಇನ್ನು ಮುಂದೆ ಸಾರಿಗೆ ವಾಹನ ಚಾಲನೆ (ಟ್ರಾನ್ಸ್​ಪೋರ್ಟ್)ಲೈಸೆನ್ಸ್ ಅಗತ್ಯವಿಲ್ಲ. ಕೇವಲ ಎಲ್​ಎಂವಿ ಲೈಸೆನ್ಸ್ ಇದ್ದವರೂ ಈ ವಾಹನ ಓಡಿಸಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.

ರಾಜ್ಯಕ್ಕೆ ಸೂಚನೆ:
2011ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದ ಮುಕುಂದ್ ದೇವಗನ್ ಮತ್ತು ಓರಿಯೆಂಟರ್ ವಿಮಾ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಂದಿದೆ. ಈ ಆದೇಶ ಪಾಲಿಸುವಂತೆ ಎಲ್ಲ ರಾಜ್ಯದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವಾಲಯ ಸೂಚನೆ ನೀಡಿದೆ. ‘ಸುಪ್ರೀಂ ಕೋರ್ಟ್ ಆದೇಶದಂತೆ ಕೇವಲ ಮಧ್ಯಮ ಮತ್ತು ಭಾರಿ ಗಾತ್ರದ ಸರಕು ಹಾಗೂ ಪ್ಯಾಸೆಂಜರ್ ವಾಹನಗಳಿಗೆ ಮಾತ್ರ ಟ್ರಾನ್ಸ್​ಪೋರ್ಟ್ ಲೈಸೆನ್ಸ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಉಳಿದ ಯಾವುದೇ ವಾಹನಗಳಿಗೂ(ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡರೂ) ಟ್ರಾನ್ಸ್ ಪೋರ್ಟ್ ಲೈಸೆನ್ಸ್ ಅಗತ್ಯವಿಲ್ಲ. ಗೇರ್​ಸಹಿತ ಮತ್ತು ರಹಿತ ಮೋಟಾರು ಸೈಕಲ್, 7,500 ಕೆ.ಜಿ.ಗಿಂತ ಕಡಿಮೆ ಇರುವ ಎಲ್​ಎಂವಿ (ಸರಕು ಮತ್ತು ಪ್ಯಾಸೆಂಜರ್) ಇ-ರಿಕ್ಷಾ, ಇ-ಕಾರ್ಟ್ ವಾಹನ ಓಡಿಸಲು ಎಲ್​ಎಂವಿ ಲೈಸೆನ್ಸ್ ಸಾಕು’ ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಆದೇಶಕ್ಕೆ ಪೂರಕವಾಗುವಂತೆ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸುವ ‘ಸಾರಥಿ’ ಸಾಫ್ಟ್​ವೇರ್​ನಲ್ಲೂ ಬದಲಾವಣೆ ಮಾಡಿಕೊಳ್ಳಲು ನ್ಯಾಷನಲ್ ಇನ್​ಫೋರ್ವೆಟಿಕ್ಸ್ ಸೆಂಟರ್ ಅಧಿಕಾರಿಗಳಿಗೆ ಇಲಾಖೆ ಸೂಚಿಸಿದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *