Breaking News
Home / Featured / ನಿಮ್ಮ ವಾಹನಕ್ಕೆ ಡೀಸೆಲ್, ಪೆಟ್ರೋಲ್ ಬೇಕಾ, ಜಸ್ಟ್ ಒಂದ್ ಕ್ಲಿಕ್ ಮಾಡಿ ಸಾಕು ನಿಮ್ಮ ಮನೆಗೆ ಬರತ್ತೆ…!

ನಿಮ್ಮ ವಾಹನಕ್ಕೆ ಡೀಸೆಲ್, ಪೆಟ್ರೋಲ್ ಬೇಕಾ, ಜಸ್ಟ್ ಒಂದ್ ಕ್ಲಿಕ್ ಮಾಡಿ ಸಾಕು ನಿಮ್ಮ ಮನೆಗೆ ಬರತ್ತೆ…!

ಸ್ಮಾರ್ಟ್ ಫೋನ್ ಯುಗದಲ್ಲಿ ಜನ ಕೂಡ ಸ್ಮಾರ್ಟ್ ಆಗಿದ್ದಾರೆ. ಕೂತ ಜಾಗದಲ್ಲೇ ಎಲ್ಲವೂ ಸಿಗಬೇಕು ಅನ್ನೋ ದಾವಂತದಲ್ಲಿ ವ್ಯಾಪಾರಸ್ಥರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.. ಈಗಾಗಲೇ ಒಂದು ಕ್ಲಿಕ್ ಮಾಡೋದ್ರಿಂದ ಬೇಕರಿಯ ಕೇಕ್, ಹೋಂ ಮೇಡ್ಸ್, ಆಹಾರ, ಔಷಧಗಳು ಮನೆ ಬಾಗಲಿಗೆ ಬಂದು ಬೀಳುತ್ತಿವೆ. ಇನ್ಮುಂದೆ ಆ ಸಾಲಿಗೆ ಡೀಸೆಲ್ ಮತ್ತು ಪೆಟ್ರೋಲ್ ಕೂಡ ಸೇರಲಿದೆ.

ಇಡೀ ದೇಶದಲ್ಲೇ ಮೊದಲ ಬಾರಿಗೆ ಮೊಬೈಲ್ ಡೀಸೆಲ್ ವಾಹನವೊಂದನ್ನ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ರಸ್ತೆಗಿಳಿಸಲಿದೆ. ಪೂಣೆಯಲ್ಲಿ ಇಂತಹದೊಂದು ಯೋಜನೆಯನ್ನ ಜಾರಿಗೊಳಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲಿಯಂ ಮತ್ತು ಸ್ಟೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್)ಯ ಅನುಮತಿಯನ್ನೂ ಪಡೆದಿದೆ.

ಗ್ರಾಹಕ ಅನುಕೂಲಕ್ಕಾಗಿ # ಫ್ಯೂಯಲ್ ಆಟ್ಡೋರ್ಸ್ಟೆಪ್ನಲ್ಲಿ ಮತ್ತೊಂದು ಮೈಲಿಗಲ್ಲು. ಇಂಡಿಯನ್ ಆಯಿಲ್ ತನ್ನ ಕನ್ಸೋಲ್ ಪೆಸೊವನ್ನು ಪುನರ್ವಸತಿಯ ಗ್ರಾಹಕರಿಗೆ ಡೀಸೆಲ್ನ ಡೆಲಿವರಿ ಪೂರೈಕೆಗಾಗಿ ಮೊಬೈಲ್ ಡಿಸ್ಪೆನ್ಸರ್ ಅನುಮೋದಿಸಿದೆ. ಗ್ರಾಹಕರು ಇಂಡಿಯನ್ ಆಯಿಲ್ ನ ಅಫ್ಲಿಕೇಷನ್ ಓಪನ್ ಮಾಡಿ ಡಿಸೇಲ್ ಬುಕ್ ಮಾಡಿದ್ರೆ ಸಾಕು ಮೊಬೈಲ್ ವಾಹನ ಅವರ ಮನೆಗೆ ಹೊಗಿ ಡಿಸೇಲ್ ಡಿಲೆವರಿ ಮಾಡುತ್ತದೆ.

ಸದ್ಯ ಈ ಯೋಜನೆಯನ್ನ ಪುಣೆಯಲ್ಲಿ ಮಾತ್ರ ಜಾರಿಗೊಳಿಸಿದ್ದು, ಸಾಧಕ-ಬಾಧಕಗಳನ್ನ ನೋಡಿಕೊಂಡು ದೇಶಾದ್ಯಂತ ವಿಸ್ತರಿಸುವ ಚಿಂತನೆಯಲ್ಲಿದೆ. ಅಂದುಕೊಂಡಂತೆ ಆದ್ರೆ, ಮುಂದಿನ ಆರು ತಿಂಗಳೊಳಗೆ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

About SSTV Kannada

Check Also

ಮೂತ್ರಪಿಂಡಲ್ಲಿ ಕಲ್ಲಾಗಿರುವ ಸಮಸ್ಯೆಯೇ ಇದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಪೈಲ್ಸ್, ಪಿಸ್ತುಲ, ಚರ್ಮ ರೋಗ, ಮೂಳೆ ಮಂಡಿ ನೋವು , ಅಜೀರ್ಣ, ಮುಟ್ಟು ಸಮಸ್ಯೆ , ಕ್ಷಯ ರೋಗ, ಬಿ …

Leave a Reply

Your email address will not be published. Required fields are marked *