Breaking News
Home / Featured / ಮಿಥುನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಮಿಥುನ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೃಗಶಿರ3,4, ಆರಿದ್ರ, ಪುನರ್ವಸು1,2,3
[ಕ,ಕಿ,ಕು,ಘ,ಙ,ಚ,ಕೆ,ಕೊ,ಹ ]

ಮಿಥುನ ರಾಶಿಯವರಿಗೆ ಗುರು ಗ್ರಹವು 12.10.2018ರವರೆಗೆ ತುಲಾರಾಶಿ 5ನೇ ಮನೆಯ ಫಲವನ್ನು ಕೊಡುತ್ತಾದೆ. ಗುರುಬಲ ಇರುವ ಕಾರಣ ನಿಮ್ಮ ಆಕಾಂಕ್ಷೆಗಳು ಪೂರ್ಣವಾಗುವುದು ಶುಭಕಾರ್ಯಗಳು ನೆರವೇರುವುದು ಸಂತಾನ ಅಪೇಕ್ಷಿತರಿಗೆ ಸಂತಾನವಾಗುವುದು ದೇವತಾ ಆರಾಧನೆಯಿಂದ ಇಷ್ಟಾರ್ಥಸಿದ್ಧಿ ವಿದ್ಯೆಯಲ್ಲಿ ಪ್ರಗತಿ ಕಾಣುವಿರಿ ಮನಸ್ಸು ಉಲ್ಲಾಸದಿಂದಿರುತ್ತದೆ.


ವ್ಯವಹಾರದಲ್ಲಿ ಪ್ರಗತಿಕಾಣುವಿರಿ ಆರ್ಥಿಕವಾಗಿ ಸುಧಾರಣೆಯಾಗುತ್ತದೆ ನಿಮ್ಮ ಚಿಂತನೆ ನಿಮ್ಮ ಯೋಚನಾ ಶೈಲಿಯು ಬದಲಾಗುವುದು.

ಗುರುಗ್ರಹ 11.10.2018 ರ ನಂತರ ವೃಶ್ಚಿಕದಲ್ಲಿ ಸಂಚರಿಸುವಾದಾಗ ಹಿತಶತ್ರುಗಳು ಶಮನಗೊಳಿಸುವಿರಿ ಆರೋಗ್ಯ ವ್ಯತ್ಯಾಸವಾದರೂ ಶ್ರೀಘ್ರಗುಣಮುಖ ಹೊಂದುವಿರಿ ಸಾಲಬಾಧೆ ಹೆಚ್ಚಾಗುವುದು ಮಾಡುವ ಕೆಲಸದಲ್ಲಿ ತೊಂದರೆಗಳು ಉಂಟಾಗುತ್ತದೆ.

ಶನಿಗ್ರಹವು ಸಪ್ತಮದಲ್ಲಿ 24.01.2020 ವರೆಗೆ ಇರುವುದಿಂದ ದುಷ್ಟ ವಿಷಯಗಳ ಚಿಂತೆಯು ಕಾನೂನಿಗೆ ಸಂಭಂದಿತ ವ್ಯವಹಾರಗಳು ಏರಿಳಿತದಿಂದ ಕೂಡಿರುತ್ತದೆ ವಿವಾಹಾದಿ ಶುಭ ಕಾರ್ಯಗಳು ತತ್ಕಾಲಿಕವಾಗಿ ತಡೆಯಾಗಬಹುದು ಗಂಡ ಹಂಡತಿಯರಲ್ಲಿ ಕಲಹಗಳು ಪಾಲುದಾರಿಕೆಯಲ್ಲಿ ವ್ಯತ್ಯಾಸವಾಗಬಹುದು.
ಮನಸ್ಸು ಒಂದಲ್ಲ ಒಂದು ವಿಷಯದ ಬಗ್ಗೆ ಚಿಂತಿತವಾಗಿರುತ್ತದೆ ಪ್ರಯಾಣದಲ್ಲಿ ಹಣವನ್ನು ಕಳೆದುಕೊಳ್ಳುವುದು ಚೋರಭೀತಿ
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆದಾಡುವ ಪ್ರಸಂಗಗಳು ಉಂಟಾಗುತ್ತದೆ.

ರಾಹುಗ್ರಹವು 07.3.2019ವರೆಗೆ ಕಟಕದಲ್ಲಿ ಇರುವುದರಿಂದ ನಿಮ್ಮ ರಾಶಿಗೆ 2ನೇ ಮನೆಯ ಫಲವನ್ನು ಕೊಡುತ್ತದೆ ಅಧೈರ್ಯವು ಸದಾ ದುಃಖವು ನಿಮ್ಮ ಮಾತಿನ ಸಂದೇಶವನ್ನು ಅರ್ಥಮಾಡಿಕೊಳ್ಳುವ ಬದಲಾಗಿ ಅಪಾರ್ಥ ಮಾಡಿಕೊಳ್ಳುತ್ತಾರೆ ವಾದ ವಿವಾದವು ದುಷ್ಟ ಜನರ ಸಹವಾಸವು ಭೀತಿಯು ಉಂಟಾಗುತ್ತದೆ ಕುಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಒಬ್ಬರ ಮೇಲೊಬ್ಬರಿಗೆ ಬರುತ್ತಿರುತ್ತದೆ ತಾಮಸ ಪದಾರ್ಥಗಳ ಆಹಾರ ಸೇವನೆ ಅಧಿಕವಾಗುತ್ತದೆ ದುರಾಭ್ಯಾಸಗಳು ಹೆಚ್ಚಾಗುವುದು.

ಪರಿಹಾರ: ಲಕ್ಷ್ಮೀ ದುರ್ಗಿಯ ಅಷ್ಟೋತ್ತರವನ್ನು ನಿತ್ಯ ಓದಿರಿ, ದೇವಿ ದರ್ಶನ ಮಾಡಿ.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *