Breaking News
Home / Featured / ಮೇಷ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೇಷ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..!

ಅಶ್ವಿನಿ, ಭರಣಿ, ಕೃತ್ತಿಕ 1ನೇ ಪಾದ
[ಚು,ಚೆ,ಚೊ,ಲ,ಲಿ,ಲು,ಲೆ,ಲೋ,ಅ]

ಮೇಷ ರಾಶಿಯವರಿಗೆ ಈ ವರ್ಷ ಗುರುಗ್ರಹವು 12.09.2017 ರಿಂದ 11.10.2018 ರವರೆಗೆ ತುಲಾರಾಶಿಯಲ್ಲಿ ಇರುವ ಕಾರಣ 7ನೇ ಮನೆಯ ಫಲವನ್ನು ಕೊಡುತ್ತದೆ. ಗುರುಗ್ರಹವು 7ನೇ ಮನೆಯಲ್ಲಿರುವುದರಿಂದ ಆರೋಗ್ಯ ಉತ್ತಮ ಅಧಿಕಾರಿಗಳ ಭೇಟಿ ವಿವಾಹಾದಿ ಮಂಗಳ ಕಾರ್ಯಗಳು ನೆರವೇರುತ್ತದೆ ಪ್ರಯಾಣಗಳಿಂದ ಲಾಭ ಉಂಟಾಗುತ್ತದೆ ವ್ಯಾಜ್ಯಗಳಲ್ಲಿ ಜಯವು, ಸಂಘ ಸಂಸ್ಥೆಯಲ್ಲಿ ಹೆಸರು ಕೀರ್ತಿಗಳಿಸುವಿರಿ ವೈವಾಹಿಕ ಜೀವನ ತೃಪ್ತಿಕರವಾಗಿರುತ್ತದೆ ಉದ್ಯೋಗಪ್ರಾಪ್ತಿ ಮುಂತಾದ ಶುಭ ಫಲಗಳು ಪ್ರಾಪ್ತವಾಗುತ್ತದೆ.

11.10.2018ರಿಂದ 30.03.2019 ವರೆಗೆ ಗುರು ಗ್ರಹವು ವೃಶ್ಚಿಕರಾಶಿಗೆ ಪ್ರವೇಶ 8ನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಲಕ್ಷಣಗಳಿರುತ್ತವೆ.

ಮೇಷರಾಶಿಯವರಿಗೆ ಶನಿಗ್ರಹವು 27.01.2017 ರಿಂದ 24.01.2020ರವರೆಗೆ ಧನಸ್ಸು ರಾಶಿಯಲ್ಲೇ ಅಂದರೆ ಒಂಭತ್ತನೇಯ ಮನೆಯಲ್ಲಿ ಇರುವ ಕಾರಣ ಶೋಕವು ರೋಗವು ಅಧಿಕ ದುಃಖವು ಅಲ್ಪ ಲಾಭವು ಮತ್ತು ಉನ್ನತ ಶಿಕ್ಷಣಗಳಿಗೆ ಹಿನ್ನಡೆ ಉಂಟಾಗುತ್ತದೆ ಪಿತೃ ಮತ್ತು ಪಿತೃ ವರ್ಗದವರಿಂದ ಮನಸ್ತಾಪಗಳು ಉಂಟಾಗುತ್ತದೆ. ಧೀರ್ಘ ಪ್ರಯಾಣವು ಆಯಾಸ ತರುತ್ತದೆ ಹಲವು ಕನಸುಗಳು ಕನಸಾಗಿಯೇ ಉಳಿಯಬಹುದು ತಂದೆಗೆ ಆರೋಗ್ಯದಲ್ಲಿ ಸಮಸ್ಸೆಗಳು ಉಂಟಾಗುವುದು ಮಕ್ಕಳ ಸಂಬಂಧವಾಗಿ ದುಃಖವು ಸಂಬಂಧಿಸುತ್ತದೆ.


ಶನಿ ಶಾಂತಿ ಶನಿವಾರ ಎಳ್ಳು ಎಣ್ಣೆ ದಾನ ಮತ್ತು ಶ್ರೀ ಹನುಮಾನ್ ಚಾಲೀಸ್ ಓದಬೇಕು.

ಮೇಷರಾಶಿಯವರಿಗೆ ರಾಹುಗ್ರಹವು 18.08.2017ರಿಂದ 07.03.2019ರವರೆಗೆ ಕಟಕ ರಾಶಿಯಲ್ಲಿ ಇರುತ್ತದೆ 4ನೇ ಮನೆಯ ಫಲವನ್ನು ಕೊಡುತ್ತದೆ ವಿದ್ಯೆಯಲ್ಲಿ ತೊಂದರೆಗಳು ಅತ್ತಿರ ಸಂಬಂಧಿಕರಿಂದ ಕಿತ್ತಾಟಗಳು ಭಯವು ಹೆಚ್ಚಾಗುವುದು ಕೃಷಿ ಭೂಮಿಯಲ್ಲಿ ನಷ್ಟ ಪದೇ ಪದೇ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸನ್ನಿವೇಶಗಳು ಸೃಷ್ಟಿಯಾಗುವುದು ಧನ ಹಾನಿಯು ಉಂಟಾಗುವುದು.

ಪರಿಹಾರ: ರುದ್ರಹೋಮ ಮಾಡಿಸಿ ನಿತ್ಯ ಸೂರ್ಯ ನಮಸ್ಕಾರ ಮಾಡಿ.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *