Breaking News
Home / Featured / ತೊಂಡೆಕಾಯಿಯನ್ನು ಬಳಸುವುದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ..!

ತೊಂಡೆಕಾಯಿಯನ್ನು ಬಳಸುವುದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹಳ್ಳಿ ಕಡೆಗಳಲ್ಲಿ ಹಿತ್ತಲ ಬೇಲಿಗಳಲ್ಲಿ ತೊಂಡೆ ಕಾಯಿಯನ್ನು ಬೆಳೆಸುತ್ತಾರೆ, ಆದರೆ ಅದರ ಬಳಕೆ ಮಾಡುವುದು ತುಂಬಾ ಕಡಿಮೆ. ಆದರೆ ಇದರ ಬಳಕೆಯಿಂದಾಗುವ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ನೀವು ಖಂಡಿತ ತಪ್ಪದೆ ಬಳಕೆ ಮಾಡುತ್ತೀರಾ.

ತೊಂಡೆಕಾಯಿಯ ಆರೋಗ್ಯಕಾರಿ ಗುಣಗಳೆಂದರೆ:-

1. ತೊಂಡೆ ಕಾಯಿಯನ್ನು ತಿನ್ನುವುದರಿಂದ ಚರ್ಮದ ಸಮಸ್ಯೆ ನಿವಾರಿಸುತ್ತದೆ.

2. ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದುವಾಗುತ್ತದೆ ಮತ್ತು ಮಧುಮೇಹವು ಸಹ ಗುಣವಾಗುತ್ತದೆ.

3 . ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

4 . ದೇಹದಲ್ಲಿ ಹುಳು ಕಚ್ಚಿ ಗಾಯ , ಗಂದೆ ಅಥವಾ ತುರಿಕೆಯಾಗಿದ್ದರೆ, ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ, ಗಂದೆ, ತುರಿಕೆ ಕಡಿಮೆಯಾಗುತ್ತದೆ .

5 .ತೊಂಡೆಕಾಯಿ ಎಲೆಯ 5 ಚಮಚ ರಸಕ್ಕೆ 1 ಲೋಟ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ. ನಂತರ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.

6. ಅತಿಯಾಗಿ ಭೇದಿಯಾಗುತ್ತಿದ್ದರೆ 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

7. ತೊಂಡೆ ಹಣ್ಣನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮೈ ಕೊಬ್ಬು ಕರಗಿಸುವ ಕಬ್ಬಿನ ಹಾಲು ಹೇಗೆ ಬಳಕೆ ಮಾಡಬೇಕು ಗೊತ್ತಾ..!

ಬೊಜ್ಜು ಕರಗಿಸುವಲ್ಲಿ ಕಬ್ಬಿನ ಹಾಲು ಹೇಗೆ ಸಹಕಾರಿಯಾಗಿವೆ ಎಂಬುವುದರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಒಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ …

Leave a Reply

Your email address will not be published. Required fields are marked *