Breaking News
Home / Featured / ವಿದ್ಯಾರ್ಥಿಗಳಿಗೆ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆ, ಅರ್ಜಿ ಹಾಕವುದು ಹೇಗೆ ಈ ಯೋಜನೆಯ ಲಾಭ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗಲಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

ವಿದ್ಯಾರ್ಥಿಗಳಿಗೆ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆ, ಅರ್ಜಿ ಹಾಕವುದು ಹೇಗೆ ಈ ಯೋಜನೆಯ ಲಾಭ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗಲಿ ಈ ಮಾಹಿತಿಯನ್ನು ಇತರರಿಗೂ ತಿಳಿಸಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಮೋದಿ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ಪಿಎಂ ಮೋದಿ ಸ್ಕಾಲರ್​ಷಿಪ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಲಾಭ ಪಡೆಯುವುದು ಹೇಗೆ ಮತ್ತು ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಿಇ, ಬಿಟೆಕ್, ವೈದ್ಯಕೀಯ, ಫಾರ್ಮಸಿ, ಬಿಬಿಎ, ಬಿಸಿಎ ಇಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಬಯಸುವ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಕೋರ್ಸ್​ಗಳಲ್ಲಿಉನ್ನತ ಶಿಕ್ಷಣಕ್ಕಾಗಿ ಹೋಗುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿವೇತನ ಯೋಜನೆ 2018ರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು.

ಯಾವ ಕೋರ್ಸ್​ಗಳಿಗೆ ಲಭ್ಯ?

ಇಂಜಿನಿಯರಿಂಗ್

ವೈದ್ಯಕೀಯ

ಪಿಎಚ್​ಡಿ

ಸ್ನಾತಕೋತ್ತರ ಪದವಿ (ಎಂಎ, ಎಂ.ಕಾಂ, ಎಂಎಸ್ಸಿ)

ಪದವಿ(ಬಿಎ, ಬಿಕಾಂ, ಬಿಎಸ್ಸಿ)

ಅರ್ಹತೆಯೇನು?

ಭಾರತೀಯ ನಿವಾಸಿಯಾಗಿದ್ದು, ಇಲ್ಲಿಯೇ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ.

ಶಾಲೆಯಲ್ಲಿ ನಿಯಮಿತ ವಿದ್ಯಾರ್ಥಿಗಳಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.

ವಿದ್ಯಾರ್ಥಿಯು ಈ ಹಿಂದಿನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ಮೊದಲ ಸ್ಥಾನ ಪಡೆದಿರಬೇಕು.

ವಿದ್ಯಾರ್ಥಿಯ ಕುಟುಂಬದ ಆದಾಯ ವಾರ್ಷಿಕವಾಗಿ ರೂ. 6,00,000ಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯ ವಯಸ್ಸು 18 ವರ್ಷದಿಂದ 25 ವರ್ಷಗಳೊಳಗಿರಬೇಕು.

ಪ್ರಧಾನಮಂತ್ರಿ ವಿದ್ಯಾರ್ಥಿವೇತನ 2018-19

ಮಾನ್ಯತೆ ಪಡೆದ ಬೋರ್ಡ್/ಮಂಡಳಿಯಲ್ಲಿ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ ಶೇ.75 ಅಂಕ ಗಳಿಸಿರಬೇಕು.

ಕನಿಷ್ಠ ಶೇ.75ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಪ್ರತಿ ತಿಂಗಳಿಗೆ 1000 ರೂ.ನಂತೆ ವಿದ್ಯಾರ್ಥಿವೇತನ ಪಡೆಯುತ್ತಾರೆ ಅಂದರೆ ಒಟ್ಟು 10,000 ರೂ.

ಶೇ.85 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 25,000 ರೂ. ದೊರೆಯುತ್ತದೆ.

ವಿದ್ಯಾರ್ಥಿವೇತನದ ಹಣದ ಹೊರತಾಗಿ, ಭಾರತ ಸರ್ಕಾರವು 4 ಅಥವಾ 5 ವರ್ಷಗಳ ವೃತ್ತಿಪರ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ 2000 ರೂ.ನಂತೆ ವಿದ್ಯಾರ್ಥಿವೇತನ ನೀಡುತ್ತಿದೆ. ನಾಲ್ಕನೆಯ ಮತ್ತು ಐದನೇ ವರ್ಷಗಳಲ್ಲಿ ಈ ಮೊತ್ತವನ್ನು ವಿದ್ಯಾರ್ಥಿಯು ಪಡೆದುಕೊಳ್ಳಬಹುದು. ಈ ಹಣವನ್ನು ನಿಯಮಿತವಾಗಿ ಪಡೆಯಲು ವಿದ್ಯಾರ್ಥಿಯು ಪ್ರತಿ ಸೆಮಿಸ್ಟರ್​ನಲ್ಲಿ ಕನಿಷ್ಟ ಶೇ.50 ಅಂಕಗಳನ್ನು ಗಳಿಸಬೇಕಿದೆ.

ದಾಖಲೆಗಳೇನು ಬೇಕು?

ಹಿಂದಿನ ವರ್ಷದ ಅಧಿಕೃತ ಅಂಕ ಪಟ್ಟಿ.

ವಯಸ್ಸಿನ ಪುರಾವೆಗೆ 10ನೇ ತರಗತಿ ಅಂಕಪಟ್ಟಿ

ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ.

ಪಾಸ್​ಪೋರ್ಟ್ ಸೈಜಿನ ಭಾವಚಿತ್ರ.

ವೃತ್ತಿಪರ ಕೋರ್ಸ್​ಗಳಿಗೆ ಸೇರಲು ಸಿದ್ಧಗೊಂಡಿರುವ ಪ್ರವೇಶದ ದಾಖಲೆಗಳು.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *