Breaking News
Home / Featured / ಸುಖ ಜೀವನಕ್ಕೆ 25 ಪರಿಹಾರ ಸೂತ್ರಗಳು..!

ಸುಖ ಜೀವನಕ್ಕೆ 25 ಪರಿಹಾರ ಸೂತ್ರಗಳು..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

1. ನಿಮ್ಮ ಮನೆಯ ಮುಖ್ಯದ್ವಾರದಿಂದ ಒಳ್ಳೆಯ ಗಾಳಿ, ಬೆಳಕು ಬರುವ ಹಾಗೆ ನೋಡಿಕೊಳ್ಳಿ.

2. ಪೂರ್ವದ ಗೋಡೆಯಲ್ಲು ನಿಮ್ಮ ಕುಟುಂಬದ ಪೋಟೋವನ್ನು ಹಾಕಿ, ಇದರಿಂದ ಕುಟುಂಬದಲ್ಲಿ ಭಾಂದವ್ಯ ಹೆಚ್ಚುತ್ತದೆ.

3. ಮಲಗುವಾಗ ದಂಪತಿಗಳು ಬೇರೆ ಬೇರೆ ಹಾಸಿಗೆ ಮತ್ತು ಓದಿಕೆಗಳನ್ನು ಉಪಯೋಗಿಸಬೇಡಿ.

4. ನೀವು ಬಳಸುವ ಊಟದ ಟೇಬಲ್ ಸುತ್ತಾ ಆಸನಗಳು( ಛೇರ್) ಬರುವ ಹಾಗೇ ಇಡಬೇಕು ಮತ್ತು ಕುಟುಂಬದವರೆಲ್ಲಾ ಒಟ್ಟಿಗೆ ಕೂತು ಊಟ ಮಾಡಬೇಕು.

5. ನಿಮ್ಮ ಮನೆಯ ಪೂರ್ವದ ಗೋಡೆಗೆ ಸೂರ್ಯ ಉದಯಿಸುವ ಚಿತ್ರಪಟವನ್ನು ಹಾಕಿ.

6. ನಿಮ್ಮ ಅಡಿಗೆ ಮನೆಯಲ್ಲಿ ಕನ್ನಡಿಯನ್ನು ಇಡಬೇಡಿ.

7. ಕಸದ ಪೊರಕೆಗಳು ಮತ್ತು ಕಸದ ಬುಟ್ಟಿಯನ್ನು ಅಡಿಗೆ ಮನೆಯಲ್ಲಿ ಇಡಬೇಡಿ.

8. ಮನೆಯ ಮುಂದೆ prickly cactus ಗಿಡವನ್ನು ಬೆಳಸಬೇಡಿ.

9. ಮನೆಯ ಹೆಣ್ಣು ಮಕ್ಕಳು ಸೂರ್ಯೋದಯದಲ್ಲಿ ಎದ್ದು ರಂಗೋಲೆಯನ್ನು ಹಾಕಿ, ದೇವರ ದೀಪವನ್ನು ಹಚ್ಚಿರಿ( ಎಳ್ಳೆಣ್ಣೆ ದೀಪ ಮನೆಯಲ್ಲಿ ಹಚ್ಚಬಾರದು) .

10. ಮನೆಯ ಮುಂದೆ ಗೋಡೆ ಮತ್ತು ಬಾಗಿಲಲ್ಲಿ ದೇವರ ಚಿತ್ರವಿರಬಾರದು.

11. ಆಕ್ವೇರಿಯಂ ಉಪಯೋಗಿಸುತ್ತಿದ್ದರೆ ಅದನ್ನು ಓದುವ ಕೋಣೆಯ ಆಗ್ನೇಯದಲ್ಲಿ ಇಡಿ.

12. ನಿಮ್ಮ ಕಛೇರಿಯಲ್ಲಿ ನೀವು ಕೂರುವ ಹಿಂಭಾಗ ಮೌಂಟೇನ್ ಚಿತ್ರಪಟವನ್ನು ಹಾಕಿ.

13. ಹರಿದ ಬಟ್ಟೆ, ಖಾಲಿ ಇರುವ ಡಬ್ಬಗಳು , ಉಪಯೋಗಿಸದ ಹಳೆಯ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ, ಇದರಿಂದ ಸಾಲಬಾಧೆ , ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ.

14. ಮಾರ್ಬಲ್ , ಗ್ರ್ಯಾನೆಟ್ ಅನ್ನು ದೇವರ ಕೋಣೆಯಲ್ಲಿ ಮಾತ್ರ ಉಪಯೋಗಿಸಿ.

15. ಗರ್ಭವತಿಯಾದ ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಸಾಧಕರ ಮತ್ತು ಸುಂದರ ಮಕ್ಕಳ ಪೋಟೋವನ್ನು ಅವರು ಮಲಗುವ ಕೋಣೆಯಲ್ಲಿ ಹಾಕಿ.

16. ನೀವು ನಿಮ್ಮ ಕುಟುಂಬದ ವರ ಜೊತೆ ಯಾವುದಾದರೂ ಕಾರಣ ಕೋಪಗೊಂಡು , ಅವರಿಗೆ ಏನಾದರೂ ಹೇಳುವ ಮೊದಲು ಸ್ನಾನವನ್ನು ಮಾಡಿ, ಇದರಿಂದ ಕೋಪ ಕಮ್ಮಿಯಾಗುತ್ತದೆ ಮತ್ತು ಸರಿ , ತಪ್ಪುಗಳ ತಿಳಿವಳಿಕೆ ಉಂಟಾಗುತ್ತದೆ.

17. ಪ್ಲಾಸ್ಟಿಕ್ ಹೂಗಳನ್ನಹ ಬಳಸಬೇಡಿ( ಇದರಿಂದ ಚರ್ಮ ಬಾಧೆ ಹೆಚ್ಚುತ್ತದೆ) .

18. ದೇವಾಯಕ್ಕೆ ಹೋಗುವಾಗ ಭಕ್ತಿಯಿಂದ ಹೋಗಿ, ಮೋಜು, ಮಸ್ತಿ, ಪ್ರವಾಹಕ್ಕೆಂದು ಹೋಗಬೇಡಿ.

19. ದಕ್ಷಿಣಕ್ಕೆ ಮುಖಮಾಡಿ ಊಟ ಮಾಡಬೇಡಿ.

20.ಮನೆಯಿಂದ ಹೊರಡುವಾಗ ಉತ್ತರ ಅಥವಾ ಪೂರ್ವ ಕ್ಕೆ ಕಡೆಗೆ ತಿರುಗಿ ಪ್ರಯಾಣ ಬೆಳಸಿ.

21. ಉತ್ತರಕ್ಕೆ ತಲೆಹಾಕಿಕೊಂಡು ಮಲಗಬೇಡಿ.

22. ಹೊಸ ಬಟ್ಟೆಗಳನ್ನು ಧರಿಸಿ ಕಾರ್ಯಕ್ರಮಗಳಿಗೆ ಹೋಗುವಾಗ ಬಟ್ಟೆಗೆ ಸ್ವಲ್ಪ ಅರಿಶಿನವನ್ನು ಹಚ್ಚಿರಿ ಇದರಿಂದ ದೃಷ್ಠಿಯಾಗುವುದಿಲ್ಲ.

23. ವಾರಕ್ಕೊಮ್ಮೆ ನೀರಿಗೆ ಉಪ್ಪನ್ನು ಬೆರೆಸಿ ಮನೆಯನ್ನು ಶುದ್ಧಿಗೊಳಿಸಿ.

24. ಮನೆಯ ಗೋಡೆಗಳಿಗೆ ತಿಳಿ ಬಣ್ಣವನ್ನು ಬಳಸಿ.

25. ಪ್ರತಿ ಶುಕ್ರವಾರ ಸಂಜೆ ಮನೆಯ ಒಳಗೆ ಮತ್ತು ಹೊರಗೆ ದೂಪವನ್ನು ಹಚ್ಚಿರಿ.

ಡಾ.ಮೂಗೂರು ಮಧುದೀಕ್ಷಿತ್ ಗುರೂಜಿ.
7411161111

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *