Breaking News
Home / Featured / ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ಕನ್ನಡದ “ಇದಂ ಪ್ರೇಮಂ ಜೀವನಂ” ಸಿನಿಮಾ ಈ ಸಿನಿಮಾದ ವಿಶೇಷತೆ ಏನು ಗೊತ್ತಾ..!

ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ಕನ್ನಡದ “ಇದಂ ಪ್ರೇಮಂ ಜೀವನಂ” ಸಿನಿಮಾ ಈ ಸಿನಿಮಾದ ವಿಶೇಷತೆ ಏನು ಗೊತ್ತಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸಬರ ಸಿನಿಮಾಗಳು ಸದ್ದು ಮಾಡಿವೆ ಮತ್ತು ಹಲವು ದಾಖಲೆಗಳನ್ನು ಬರೆದು ಸಿನಿಮಾ ಪ್ರೇಕ್ಷಕರ ಮನ ಗೆದ್ದ ಉದಾಹರಣೆಗಳು ನಿಮ್ಮ ಮುಂದಿವೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಹೊಸ ಪ್ರತಿಭೆಗಳ ಸಿನಿಮಾಗಳು ಹೆಚ್ಚು ವಿಷಯಾಧಾರಿತ ಚರ್ಚೆಯನ್ನು ಮಾಡುವಂತಹ ಕಥೆಯನ್ನು ಹೊಂದಿ ಬರುವ ಸಿನಿಮಾಗಳೇ ಹೆಚ್ಚು ಅಂತಹ ಸಿನಿಮಾಗಳ ಸಾಲಿಗೆ ಸೇರುವ ಮತ್ತೊಂದು ಕನ್ನಡದ ಸಿನಿಮಾ ಸದ್ದಿಲ್ಲದೇ ಸುದ್ದಿಮಾಡುತ್ತಿದೆ ಅದುವೇ “ಇದಂ ಪ್ರೇಮಂ ಜೀವನಂ”.

“ಇದಂ ಪ್ರೇಮಂ ಜೀವನಂ ಸಿನಿಮಾದ ನಾಯಕ ಸನತ್ ನಾಯಕಿ ಶಾನಯಾ ಇಬ್ಬರು ಹೊಸ ಪ್ರತಿಭೆಗಳೇ ಆದರೆ ನಾಯಕಿಗೆ ಇದು ಮೊದಲ ಚಿತ್ರ. ಇನ್ನು ನಾಯಕ ನಟನಿಗೆ ಇದು ಒಂದು ರೀತಿಯಲ್ಲಿ ಮೊದಲ ಸಿನಿಮಾವಲ್ಲ. ಈ ಹಿಂದೆ ಅನಂತನಾಗ್ ಅಭಿನಯದ ದಿಪ್ಲಾನ್ ಮತ್ತು ಟೋರ ಟೋರ ಸಿನಿಮಾದಲ್ಲಿ ಒಂದು ಲೀಡ್ ರೋಲ್ ನಲ್ಲಿ ಸನತ್ ಅಭಿನಯಿಸಿದ್ದಾರೆ. ಹಾಗೆಯೆ ಇವರ ಮುಂದಿನ ಸಿನಿಮಾ ಕಮರುಟ್ಟು ಚಕ್ ಪೋಸ್ಟ್ ಸಿನಿಮಾದಲ್ಲಿ ಒಂದು ಲೀಡ್ ರೋಲ್ ಮಾಡಲಿದ್ದಾರೆ.

ಈ ಸಿನಿಮಾದ ನಿರ್ದೇಶಕ ರಾಘವಾಂಕ ಪ್ರಭು. ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ಈ ಸಿನಿಮಾದಲ್ಲಿ ಒಳ್ಳೆ ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಬಹುಮುಖ್ಯವಾಗಿ ತಂದೆ ತಾಯಿಯ ಆಸೆಯನ್ನು ಹಿಡೇರಿಸುವುದು ನಾಯಕನ ಜವಾಬ್ದಾರಿಯಾಗಿದೆ. ಒಟ್ಟಾರೆ ಈ ಸಿನಿಮಾ ಇವತ್ತಿನ ಯುವ ಪೀಳಿಗೆಗೆ ಒಪ್ಪುವಂತಹ ಮತ್ತು ಒಂದೊಳ್ಳೆ ಸಂದೇಶವನ್ನು ಕೊಡುವಂತ ಸಿನಿಮಾವಾಗಿದೆ.

ಇನ್ನು ಸಿನಿಮಾದಲ್ಲಿ ಮೊದಲಬಾರಿಗೆ ಅವಿನಾಶ್ ಮತ್ತು ಮಾಳವಿಕಾ ಒಟ್ಟಿಗೆ ನಾಯಕನ ತಂದೆ ತಾಯಿಯಾಗಿ ನಟಿಸಿದ್ದಾರೆ. ಇವರದ್ದು ಸಹ ಈ ಸಿನಿಮಾದಲ್ಲಿ ಹೆಚ್ಚು ಜವಾಬ್ದಾರಿ ಇದೆ.

https://youtu.be/sCwwyzBjH_s

ಇನ್ನು ಈ ಚಿತ್ರದ ಟ್ರೈಲರ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದೂ ಟ್ರೈಲರ್ ಕೂಡ ಹೆಚ್ಚು ಸುದ್ದಿ ಮಾಡುತ್ತಿದೆ. ಇನ್ನು ಸಿನಿಮಾ ಇದೆ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗಲು ರೆಡಿಯಾಗಿದೆ. ನೀವು ನೋಡಿ ಈ ಸಿನಿಮಾ ಗೆಲ್ಲಿಸಿ ಹಾಗು ನಮ್ಮ ಕಡೆಯಿಂದ ಈ ಸಿನಿಮಾ ತಂಡಕ್ಕೆ ಒಳ್ಳೆದಾಗಲಿ ಹಾಗೆ ಸಿನಮಾ ಶತದಿನೋತ್ಸವ ಆಚರಿಸಲಿ ಅಲ್ ದೀ ಬೆಸ್ಟ್ ಇದಂ ಪ್ರೇಮಂ ಜೀವನಂ ಸಿನಿಮಾ ತಂಡಕ್ಕೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ನಾಗರ ಪಂಚಮಿ ಆಚರಣೆ ಹೇಗೆ ಮಾಡಬೇಕು ಮತ್ತು ಇದರ ಹಿನ್ನೆಲೆ ಏನು ಗೊತ್ತಾ..!

ಈ ಹಬ್ಬದ ಆಚರಣೆ ಪದ್ಧತಿಯಂತೆ ಅಕ್ಕಿಹಿಟ್ಟಿನ ತೊಟ್ಟಿಲು ಮಾಡಿ ಅದರಲ್ಲಿ ನಾಗದೇವತಾ ವಿಗ್ರಹವನ್ನು ಇಡಬೇಕು ಅಂದು ಉಪವಾಸವಿದ್ದು ಪೂಜೆ ಮಾಡಿ …

Leave a Reply

Your email address will not be published. Required fields are marked *