Breaking News
Home / Featured / ಸಿದ್ದರಾಮಯ್ಯಗೆ ಸಿದ್ದರಾಮಯ್ಯನೇ ಸಾಟಿ ಅನ್ನೋದಕ್ಕೆ ಒಂದು ಚಿಕ್ಕ ಸ್ಟೋರಿ ನಿಮ್ಮ ಮುಂದೆ..!

ಸಿದ್ದರಾಮಯ್ಯಗೆ ಸಿದ್ದರಾಮಯ್ಯನೇ ಸಾಟಿ ಅನ್ನೋದಕ್ಕೆ ಒಂದು ಚಿಕ್ಕ ಸ್ಟೋರಿ ನಿಮ್ಮ ಮುಂದೆ..!

ಹೌದು ಸಿದ್ದರಾಮಯ್ಯ ಅವರ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು. ಅವರು ಕರ್ನಾಟಕದ ಅದ್ಭುತ ಮುಖ್ಯಮಂತ್ರಿ ಎಂದು ಹೇಳುತ್ತಿಲ್ಲ. ಆದರೆ ಬೇರೆ ಯಾವ ಮುಖ್ಯಮಂತ್ರಿಗೂ ಅಂಟಿದ ಕಳಂಕ ಇವರಿಗೆ ಅಂಟಿಲ್ಲ. ವೈಯಕ್ತಿಕವಾಗಿ ಸಿದ್ದರಾಮಯ್ಯ ಭ್ರಷ್ಟರಲ್ಲ. ಅವರ ವಿರುದ್ಧ ಪ್ರತಿಪಕ್ಷಗಳು ಶತಾಯು ಗತಾಯ ಪ್ರಯತ್ನಿಸಿದರೂ ಒಂದೇ ಒಂದು ಕಳಂಕವನ್ನು ಮೆತ್ತಲೂ ಆಗುತ್ತಿಲ್ಲ. ಐದು ವರ್ಷಗಳ ಕಾಲ ಸರಕಾರ ನಡೆಸಿದವರಿಗೆ ಸಹಜವಾಗಿ ಒಂದಷ್ಟು ಕಳಂಕಗಳು ತಟ್ಟುವುದು ಸಹಜ. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ರೀತಿಯ ವಿವಾದಕ್ಕೆ ಈಡಾಗುತ್ತಾರೆ. ಇಲ್ಲವೇ ಅವರ ಸಚಿವ ಸಂಪುಟದ ಸಹೋದ್ಯೋಗಿಗಳಾದರೂ ಒಂದಿಲ್ಲೊಂದು ಕರ್ಮಕಾಂಡದಲ್ಲಿ ಭಾಗಿಯಾಗುತ್ತಾರೆ. ಆದರೆ ಸಿದ್ದರಾಮಯ್ಯ ಅವರು ಅಂಥ ಯಾವುದೇ ಪ್ರಕರಣದಲ್ಲೂ ಭಾಗಿಯಾಗಿಲ್ಲ ಮತ್ತು ತಮ್ಮ ಸಹೋದ್ಯೋಗಿಗಳಿಂದಲೂ ಅಂಥ ತಪ್ಪಾಗದಂತೆ ನೋಡಿಕೊಂಡರು.

ಮೇಲೆ ಕುಳಿತುಕೊಂಡವರು ಸರಿಯಾಗಿದ್ದರೆ, ವಿವಾದಗಳಿಂದ ಮುಕ್ತರಾಗಿದ್ದರೆ, ವಿಶ್ವಾರ್ಹವಾಗಿದ್ದರೆ ಅವರ ವಿರುದ್ಧ ಬೊಟ್ಟು ಮಾಡಲು ಆಗುವುದಿಲ್ಲ. ಜನ ಸಹಜವಾಗಿಯೇ ಅವರ ಮಾತುಗಳನ್ನು ಕೇಳುತ್ತಾರೆ. ಅವರಿಂದ ಸಣ್ಣ ಪುಟ್ಟ ಲೋಪಗಳಾದರೂ ಜನ ಅದನ್ನು ಕ್ಷಮಿಸಿಬಿಡುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಏನೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

ಐದು ವರ್ಷಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಮೊದಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಪಕ್ಷವನ್ನೇ ತೊರೆದು ಅವರದ್ದೇ ಆದ ಕೆಜೆಪಿಯನ್ನು ಸ್ಥಾಪಿಸಿ, ಮಾತೃ ಪಕ್ಷವನ್ನೇ ಒಡೆದು, ಬಿಜೆಪಿಯನ್ನು ಸೋಲಿಸಲು ಮುಂದಾದರು. ಸ್ವತಃ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೂ ಹೋಗಿ ಬರಬೇಕಾಯಿತು . ಅವರ ಸಚಿವ ಸಂಪುಟದ ಕೆಲವು ಸಹೋದ್ಯೋಗಿಗಳೂ ಅವರ ಜತೆ ಜೈಲು ಪಾಲಾದರು. ಈ ರಾಜ್ಯದಲ್ಲಿ ಕಂಡು ಕೇಳರಿಯದಂಥ ಅತ್ಯಂತ ಕೆಟ್ಟ ಆಡಳಿತ ನೀಡಿದ್ದು ಬಿಜೆಪಿ ರಾಜ್ಯದ ಇತಿಹಾಸದಲ್ಲಿ ದಾಖಲಾಗಿ ಹೋಯಿತು.

ಈಗ ಅದೇ ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಮತದಾರರ ಮುಂದೆ ಹೋಗುತ್ತಾರೆ? ನಾವು ಒಳ್ಳೆಯ ಆಡಳಿತ ಕೊಡ್ತೇವೆ ಅಂದ್ರೆ ಜನ ಹೇಗೆ ನಂಬುತ್ತಾರೆ ? ಅಧಿಕಾರ ಕೊಟ್ಟಾಗ ಇವರೇನು ಮಾಡಿದ್ದಾರೆ ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕಂಡು ಕೇಳರಿಯದ ಭ್ರಷ್ಟ ಆಡಳಿತವನ್ನು ರಾಜ್ಯದ ಜನತೆ ನೋಡುವಂತಾಯಿತು. ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರು ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದರು. ಈಗ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ !

ಸಿದ್ದರಾಮಯ್ಯ ಅವರಿಗೆ ವರದಾನವಾಗಿರುವುದು ಇದೇ. ಯಾವಾಗ ಮೇಲೆ ಕೂತವರು ವಿಶ್ವಾರ್ಹತೆಯನ್ನು ಕಳೆದುಕೊಳ್ಳುತ್ತಾರೋ ಆಗ ನೈತಿಕತೆಯನ್ನೂ ಕಳೆದುಕೊಳ್ಳುತ್ತಾರೆ. ಅವರ ಮಾತಿಗೆ ಕಿಮ್ಮತ್ತು ಇರುವುದಿಲ್ಲ. ಜನ ಇಂಥವರನ್ನು ನಂಬುವುದಿಲ್ಲ. ನನಗೆ ಸಿದ್ದರಾಮಯ್ಯ ಅವರ ಬಗ್ಗೆ ಮತ್ತೊಂದು ಮೆಚ್ಚುಗೆಯಿದೆ. ಅವರು ತಮ್ಮ ಮನೆ ಮಂದಿಯನ್ನೆಲ್ಲ ಅಧಿಕಾರದ ಪಡಸಾಲೆಗೆ ಬರಮಾಡಿಕೊಳ್ಳಲಿಲ್ಲ. ಅವರ ಮಗನ ಬಗ್ಗೆ ಈ ಗುಸು ಗುಸು ಕೇಳಿ ಬಂತಾದರೂ ಅದಕ್ಕೂ ಸಿದ್ದರಾಮಯ್ಯ ಅವರು ಆಸ್ಪದ ನೀಡಿರಲಿಲ್ಲ ಅವರ ಅಣ್ಣ ತಮ್ಮಂದಿರನ್ನು ಯಾರೂ ನೋಡಿಲ್ಲ. ಅವರ ಪತ್ನಿಯನ್ನು ಯಾರೂ ನೋಡಿಲ್ಲ. ‘ಮುಖ್ಯಮಂತ್ರಿ ಪತ್ನಿ’ ಎಂಬ ಸಾಸಿವೆ ಗರ್ವವು ಅವರಿಗಿದ್ದಂತಿಲ್ಲ. ಸ್ವಜನಪಕ್ಷಪಾತದಂಥ ಆಪಾದನೆಯನ್ನೂ ಅವರ ವಿರುದ್ಧ ಮಾಡಲು ಅವರು ಅವಕಾಶವನ್ನೇ ನೀಡಿಲ್ಲ.

ಈ ಎಲ್ಲ ಕಾರಣಗಳಿಂದ ಅವರ ವಿರುದ್ಧ ಮಾತಾಡಲು ಪ್ರತಿಪಕ್ಷಗಳಿಗೆ ವಿಷಯವೇ ಇಲ್ಲದಂತಾಗಿವೆ. ಹೀಗಾಗಿ ಅವರು ವೇದಿಕೆ ಮೇಲೆ ನಿದ್ದೆ ಮಾಡುತ್ತಾರೆ ಎಂಬುದನ್ನೇ ದೊಡ್ಡ ವಿಷಯ ಮಾಡಿ ಹೇಳುತ್ತಿದ್ದಾರೆ. ಆದರೆ ಅದು ಕೂಡ ಈಗ ಹಳತಾಗಿಬಿಟ್ಟಿದೆ. ಸಿದ್ದರಾಮಯ್ಯ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇಲ್ಲ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ನಂತರ ಯಾವ ಮುಖ್ಯಮಂತ್ರಿಯೂ ಎರಡನೇ ಅವಧಿಗೆ ಗೆದ್ದ ದಾಖಲೆ ಇಲ್ಲ. ಅಂದರೆ ಕಳೆದ ಮೂವತ್ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ಮುಖ್ಯಮಂತ್ರಿಯ ನೇತೃತ್ವದಲ್ಲಿ ಚುನಾವಣೆಗೆ ಹೋದರೂ, ಆಡಳಿತ ವಿರೋಧಿ ಅಲೆಯಿಂದಾಗಿ ಅವರೆಲ್ಲ ಸೋತು ಹೋಗಿದ್ದಾರೆ. ಆದರೆ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಈ ಆಡಳಿತ ವಿರೋಧಿ ಅಲೆಯನ್ನು ತಡೆಗಟ್ಟಲು ಸಫಲರಾಗುತಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಸಂಪೂರ್ಣ ಸಮ್ಮತಿ ಇಲ್ಲದವರು, ಉಳಿದವರಿಗಿಂತ ವಾಸಿ ಎಂಬ ಕಾರಣಕ್ಕಾದರೂ ಅವರನ್ನು ಬೆಂಬಲಿಸುವುದು ಅನಿವಾರ್ಯವಾಗಬಹುದು.

ಬಿಜೆಪಿಯವರಿಗೆ ಸೋಸಿ, ಜಜ್ಜಿ, ಹಿಂಜಿದರೂ ಅವರ ಬಗ್ಗೆ ಮಾತಾಡಲು ಏನೂ ಸಿಗುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಿದ್ದರಾಮಯ್ಯ ಅವರ ವಿರುದ್ಧ ಮಾತಾಡಿ ಈಗಾಗಲೇ ಇಕ್ಕಿಸಿಕೊಂಡಿದ್ದಾರೆ. ಜೈಲಿಗೆ ಹೋಗಿ ಬಂದವರೆಲ್ಲ ಇಲ್ಲಿ ಬಂದು ಉಪದೇಶ ಮಾಡಬೇಕಿಲ್ಲ ಎಂಬ ಒಂದು ಏಟಿಗೆ ಅವರ ಅವಾಜ್ ಅಷ್ಟರಮಟ್ಟಿಗೆ ಅಡಗುವಂತಾಗಿದೆ. ಮೋದಿಯವರು ಬಂದು ರಾಹುಲ್ ಗಾಂಧಿ ವಿರುದ್ಧ ಮಾತಾಡಲಾಗುವುದಿಲ್ಲ. ಸಿದ್ದರಾಮಯ್ಯ ಅವರ ಮಾತಾಡಬೇಕು. ಏನೆಂದು ಮಾತಾಡುತ್ತಾರೆ ? ಇಲ್ಲ, ತಮ್ಮ ಸರಕಾರದ ಸಾಧನೆಯ ಬಗ್ಗೆ ಹೇಳಿಕೊಳ್ಳಬೇಕು. ರಾಜ್ಯ ಬಿಜೆಪಿ ನಾಯಕರ ಬಗ್ಗೆ ಹೇಳಿದರೆ ಬರುವ ಮತವೂ ಬರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ.

ಪಕ್ಷ, ರಾಜಕಾರಣ, ಸಿದ್ಧಾಂತ…ಎಲ್ಲವನ್ನೂ ಬಿಟ್ಟು ಈ ಇಬ್ಬರು ನಾಯಕರನ್ನು ನೋಡಿ. ನಾನು ಇಲ್ಲಿ ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಸಿಲ್ಲ. ಅದು ನನ್ನ ಉದ್ದೇಶವೂ ಅಲ್ಲ. ಕೈಶುದ್ಧಿ, ಕಳಂಕರಹಿತ್ವ ಮತ್ತು ವಿಶ್ವಾಸಾರ್ಹತೆ ಬೆಳೆಸಿಕೊಂಡರೆ ಜನ ಒಪ್ಪುತ್ತಾರೆ ಎಂಬುದನ್ನು ಹೇಳುವುದಕ್ಕಾಗಿ ಇವರಿಬ್ಬರನ್ನು ಬೇರೆ ಉದಾಹರಿಸಿದ್ದೇನೆ.

ಸಂಗ್ರಹ ಮಾಹಿತಿ

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *