Breaking News
Home / Featured / ನಿಮಗೆ ಏನನ್ನಾದರೂ ಸಾದಿಸುವ ಛಲವಿದ್ದರೆ ಈ ಲೇಖನ ಒಮ್ಮೆ ಓದಿ, ಈ ಸೂತ್ರಗಳು ನಿಮಗೆ ಸ್ಫೂರ್ತಿಯಾಗಲಿವೆ..!

ನಿಮಗೆ ಏನನ್ನಾದರೂ ಸಾದಿಸುವ ಛಲವಿದ್ದರೆ ಈ ಲೇಖನ ಒಮ್ಮೆ ಓದಿ, ಈ ಸೂತ್ರಗಳು ನಿಮಗೆ ಸ್ಫೂರ್ತಿಯಾಗಲಿವೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಯಶಸ್ಸಿನ ದಾರಿ ಸುಲಭದ್ದಲ್ಲ ಯಶಸ್ಸು ಪಡೆದವರು ನಡೆದು ಬಂದ ದಾರಿಯೂ ಹೂವಿನ ಹಾಸಿಗೆಯೇನೂ ಆಗಿರುವುದಿಲ್ಲ. ಆದರೆ ಅವರು ಪಾಲಿಸುವ ಕೆಲವು ಸೂತ್ರಗಳನ್ನ ಪಾಲಿಸಿದರೆ ಬಹುಷಃ ದಾರಿ ಸುಗಮವಾಗಬಹುದು..

1)ಗಂಟೆಗಳಲ್ಲ, ನಿಮಿಷಗಳ ಲೆಕ್ಕ:
ಸಾಮನ್ಯವಾಗಿ ದಿನಗಳ ಲೆಕ್ಕದಲ್ಲಿ ತಮ್ಮ ಕೆಲಸಗಳನ್ನು ಆಯೋಜಿಸುತ್ತೇವೆ, ಇನ್ನು ಕೆಲವರು ಗಂಟೆಗಳ ಲೆಕ್ಕದಲ್ಲಿ ಪ್ಲಾನ್‌ಮಾಡುತ್ತಾರೆ. ಆದರೆ ಸಾಧಕರು ನಿಮಿಷಗಳಿಗೆ ಅನುಸಾರವಾಗಿಯೇ ಎಲ್ಲವನ್ನೂ ಲೆಕ್ಕ ಹಾಕುತ್ತಾರೆ. ಅವರಿಗೆ ಗೊತ್ತು, ಹಣವನ್ನು ಕಳೆದರೆ ಅದನ್ನು ಮತ್ತೆ ಗಳಿಸಬಹುದು. ಆದರೆ, ಸಮಯವನ್ನು ಕಳೆದರೆ ಅದು ಮತ್ತೆ ಸಿಗಲಾರದು. ಅದಕ್ಕೇ, ಪ್ರತಿಯೊಂದು ನಿಮಿಷವೂ ಅವರಿಗೆ ಅತ್ಯಮೂಲ್ಯ.

2)ಅರ್ಜುನನಂತೆ ಒಂದು ಬಾರಿಗೆ ಒಂದೇ ಗುರಿ:
ಸದ್ಯಕ್ಕೆ ನನ್ನ ಗುರಿ ಏನು ಎಂಬುದು ಇವರಿಗೆ ಖಚಿತವಾಗಿ ಗೊತ್ತು. ಅದನ್ನು ತಲುಪಲು ತಾನೀಗ ಏನು ಮಾಡಿದರೆ ಉತ್ತಮ ಎಂಬುದನ್ನೂ ಅವರು ಸರಿಯಾಗಿ ತಿಳಿದುಕೊಂಡಿರುತ್ತಾರೆ ಮತ್ತು ಪ್ರತಿದಿನ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಾರೆ.

3)ನಾಳೆ ಎಂದವನ ಮನೆ ಹಾಳು:-
ನಮ್ಮ ನಾಳೆಯ ಬಗ್ಗೆ ನಮಗೆ ತಿಳಿದಿಲ್ಲ ನಾಳೆಯೇ ಏನು, ಇನ್ನೊಂದು ಗಂಟೆಯಲ್ಲಿ ಏನು ಸಂಭವಿಸಬಹುದು ಎಂಬುದು ಒಂದು ಚಿದಂಬರಂ ರಹಸ್ಯ. ಇದನ್ನು ನೆನಪಿಟ್ಟುಕೊಂಡಿರುವುದರಿಂದಲೇ ಸಾಧಕರು ಕೆಲಸಗಳನ್ನು ಮುಂದೂಡುವುದಿಲ್ಲ.

4)ರಾತ್ರಿ ಮನೆಯೂಟ:
ಈ ಸಾಧಕರಿಗೆ ದಿನವೊಂದರಲ್ಲಿ ತಮಗೆ ಸಿಗುವ 1440 ನಿಮಿಷಗಳಲ್ಲಿ ಯಾವುದಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬುದು ತಳಿದಿರಯತ್ತದೆ. ಕೆಲಸ ಮಾಡಲು ಎಷ್ಟೋ ಇರುತ್ತದೆ, ಮಾಡಿದಷ್ಟೂ ಅದು ಮುಗಿಯುವುದೂ ಇಲ್ಲ. ಇದರ ಜತೆಯಲ್ಲೇ ಮಕ್ಕಳ ಜತೆ ಸಮಯ ಕಳೆಯುವುದೂ ಮುಖ್ಯ. ಅದಕ್ಕಾಗಿಯೇ ರಾತ್ರಿ ಎಷ್ಟೇ ಕಷ್ಟವಾದರೂ ಊಟಕ್ಕೆ ಮನೆಗೇ ಬರುತ್ತಾರೆ ಇವರು.

5)ಹೇಗೆ ಮಾಡಬಹುದು?:
ಸಾಧಕರು ಎಂದೂ ‘ನಾನು ಈ ಕೆಲಸವನ್ನು ಹೇಗೆ ಮಾಡಲಿ?’ ಎಂದು ಆಲೋಚಿಸುತ್ತಾರೆ ಪ್ರತಿ ಕೆಲಸದಲ್ಲು ತಮ್ಮ ತನವನ್ನು ಉಳಿಸಿಕೊಳ್ಳುತ್ತಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *