Breaking News
Home / Featured / ಮನಸ್ಸಿಗೆ ನಾಟಿದ ಕೆಲ ಪುಟ್ಟ ಪ್ರೇಮ ಕಥೆಗಳು ಇಲ್ಲಿವೆ ನೋಡಿ..!

ಮನಸ್ಸಿಗೆ ನಾಟಿದ ಕೆಲ ಪುಟ್ಟ ಪ್ರೇಮ ಕಥೆಗಳು ಇಲ್ಲಿವೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಪ್ರೀತಿ ಎರಡಕ್ಷರದ ಕವಿತೆ,ಪ್ರೀತಿ ಮನಸಿನ ಕನಸು, ಪ್ರೀತಿ ನೋವಿನ ಸುಖ,ಪ್ರೀತಿ ಮನದ ಭಾವೋದ್ವೇಗ ಹೀಗೆ ಪ್ರೀತಿಗೆ ಅರ್ಥ-ಅನರ್ಥಗಳು ಬಹಳ ಪ್ರತಿಯೊಬ್ಬರಲ್ಲು ಹೇಳಿಕೊಂಡ,ಹೇಳಿಕೊಳ್ಳಲಾಗದ,ಹೇಳಿಕೊಳ್ಳದೆ ಮನಸಿನ ಕಪ್ಪೆಚಿಪ್ಪಿನಲ್ಲಿ ಒಂದಾದರೂ ಪ್ರೇಮಕಥೆ ಇದ್ದೆ ಇರುತ್ತದೆ.ನಿಮ್ಮ ಪ್ರೀತಿಯನ್ನು ನೆನಪಿಸಿಕೊಂಡ ಥರ ನಿಮಗಾಗಿ ಕೆಲವು ಚಿಕ್ಕ ಪ್ರೇಮ ಕಥೆಗಳು ಇಲ್ಲಿದೆ…

1)ಆತ ಒಳಗೆ ಬಂದು ಹೇಳ್ತಾನೆ “ಕ್ಷಮಿಸು ನಾನು ಬರಬಾರದಿತ್ತು ಆದರೆ ನಿನ್ನ ಬಿಟ್ಟು ಇರೋಕೆ ಆಗ್ಲಿಲ್ಲ”.
ಆದರೆ ಆಕೆ ಆತನನ್ನ ಅಪ್ಪಿ ಹುಸಿ ಕೋಪದಿಂದ ಹೇಳ್ತಾಳೆ “ಇಷ್ಟು ವರ್ಷದಿಂದ ಕಾಯ್ತ ಇದ್ದೆ ..ಯಾಕೋ ಲೇಟ್ ಮಾಡಿದೆ…”

2) ಆತ ಆಕೆಯನ್ನು ಮೊದಲ ಸಲ ನೋಡಿದ ತಕ್ಷಣ ಸೋಲುತ್ತಾನೆ,ನೋಡುತ್ತ ಆಕೆಯನ್ನ ತಬ್ಬಿಕೊಂಡು ಮುಂಜನೆಯ ಮಂಜಲ್ಲಿ ನಡೆದ ಕನಸು ಕಾಣುತ್ತಾನೆ,ಕನಸನ್ನ ಡಿಸ್ಟರ್ಬ್ ಮಾಡಿದ ಸ್ನೇಹಿತ “ಯಾಕೋ ಲೈಫ್ ಲಿ ಸಿಗರೇಟ್ ಮುಟ್ಟದೆ ಇರೋ ನೀನು ಅವಳು ಹುಡುಗನ ಥರ ಸಿಗರೇಟ್ ಸೇದುತ್ತಾ ಇದ್ದರೆ ಹೊಗೆ ಮುಂದೆ ನಿಂತಿದಿಯಾ” ಅಂದಾಗಲೆ ವಾಸ್ತವದ ಅರಿವಾಗುವುದು.ಏನ್ ಮಾಡೋಣ ಕೆಲವು ಹುಡುಗರ ಮನಸು ಹೀಗು ಇರುತ್ತೆ.

3)ಆತನಿಗೆ ಆಕೆಯೇ ಜೀವ ಆದರೆ ಆತ ತನ್ನ ಪ್ರೀತಿಯನ್ನ ಹೇಳಿಕೊಳ್ಳೋದಿಲ್ಲ,ಆಕೆಗಾಗಿ ಅಕೆಗೆ ಇಷ್ಟವಾದ ಪುಳಿಯೋಗರೆಯನ್ನ ಯುಟ್ಯೂಬ್ ನಲ್ಲಿ ಕಲಿತು ಅವಳಿಗೆ ತಿನ್ನಿಸುತ್ತಾನೆ ಆದರೆ ಐ ಲವ್ ಯು ಅನ್ನೋದಿಲ್ಲ,
ಆಕೆ ಸೀನಿದಾಗ ಕರ್ಚೀಫ್ ಹಿಡಿದು ಆಕೆ ಮುಂದೆ ನಿಲ್ತಾ ಇರ್ತಾನೆ ಆದರೆ ಐ ಲವ್ ಯು ಅನ್ನೋದಿಲ್ಲ,ಓದುತ್ತಾ ಹಾಗೆ ಅರಿವಿಲ್ಲದೆ ಮಲಗಿದ ಆಕೆಯ ಸೆರಗನ ಸರಿ ಮಾಡುತ್ತಾನೆ ಆದರೆ ಐ ಲವ್ ಯೂ ಅನ್ನೋದಿಲ್ಲ,ಇಂದಿಗೂ ಆಕೆಯ ಕಣ್ಣೀರಿಗೆ ತನ್ನ ಬೆರಳನ್ನ , ಆಕೆಗೆ ಆಸರೆಯಾಗಿ ತನ್ನ ಭುಜವನ್ನ ಕಾದಿರಿಸಿದ್ದಾನೆ ಆದರೆ….ಐ ಲವ್ ಯೂ ಅಂತ ಹೇಳಿಲ್ಲ…

4)ಆತ ಫ್ಲರ್ಟ್ ಆದರೂ ಆಕೆ ಆತನನ್ನು ನಂಬುತ್ತಾಳೆ,ಪ್ರೀತಿಸ್ತಾಳೆ.ಆತ ಆತನ ಗರ್ಲ್ ಫ್ರೆಂಡ್ ಜೊತೆ ಸಿನಿಮಾಗೆ ಹೊರಟರೆ “ಹೇ..ಅವಳ ಹತ್ರ ಖರ್ಚು ಮಾಡಿಸ ಬೇಡ ಅವಳ ಮುಂದೆ ಚೀಪ್ ಆಗ್ತಿಯಾ ” ಅಂತ ಅವಳೆ ಅವನಿಗೆ ಹಣ ಕೊಡ್ತಾಳೆ.ಆತ ಊರಲ್ಲಿ ಇರೋ ತುಂಬಾ ಹುಡುಗೀರ ಜೊತೆ ಓಡಾಡ್ತ ಇರ್ತಾನೆ,ಆದರೆ ಆಕೆಯ ಪಕ್ಕ ಇನ್ನೊಬ್ಬ ಹುಡುಗ ನಡಕೊಂಡು ಹೋದರು ಕೋಪ ಮಾಡಿ ಕೊಳ್ತಾನೆ ಆದರೆ ಆಕೆ ಆ ಕೋಪದಲ್ಲಿ ಆತನ ಪ್ರೀತಿಯನ್ನ ನೋಡ್ತಾಳೆ, ಒಮ್ಮೆ ಆತ ಕೇಳ್ತಾನೆ ನಿಂಗೆ ಬೇಜಾರು ಆಗೋಲ್ವ ನಿಂಗೆ ಗೊತ್ತು ನಾನು ಫ್ಲರ್ಟ್ ಅಂತಾ….ಆಗ ಆಕೆ ಹೇಳ್ತಾಳೆ ” ನಿನ್ನ ಖುಷಿ ನಂಗೆ ಇಂಪಾರ್ಟೆಂಟ್, ಎಲ್ಲೇ ಹೋದರು ಕೊನೆಗೆ ಈ ರಾಧನೆ ಮತ್ತೆ ಬೇಕು ಅಂತಾ ಬರ್ತಿಯಾ…..ನಾನು ಕಾಯ್ತೀನಿ ಅಂತಾ.”

Aj

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

Leave a Reply

Your email address will not be published. Required fields are marked *