Breaking News
Home / Featured / ಬೇಸನ್ ಲಾಡು ಮಾಡುವ ಸಿಂಪಲ್ ವಿಧಾನ..!

ಬೇಸನ್ ಲಾಡು ಮಾಡುವ ಸಿಂಪಲ್ ವಿಧಾನ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಸಿಹಿತಿನಿಸು ಎಂದರೆ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರಿಯ ಅದರಲ್ಲು ಚಿನ್ನದ ಉಂಡೆಯಂತಿರುವ ಬೇಸನ್ ಲಾಡು ಬಹುಜನರಿಗೆ ಅಚ್ಚು-ಮೆಚ್ಚು.ಆದರೆ ಹೊರಗಿನಿಂದ ತಂದರೆ ಮಕ್ಕಳ ಆರೋಗ್ಯ ಏನಾಗುವುದೊ ಎಂಬ ಚಿಂತೆ ತಾಯಂದರಲ್ಲಿ ಸಾಮನ್ಯ,ಮನೆಯಲ್ಲೆ ಸುಲಭವಾಗಿ ಬೇಸನ್ ಲಾಡು ಮಾಡೊ ಬಯಕೆಯೇ ಇಲ್ಲಿದೆ ನೋಡಿ ಅದರ ಸಿಂಪಲ್ ರೆಸಿಪಿ.

ಸಾಮಗ್ರಿಗಳು-
ಕಡ್ಲೆಹಿಟ್ಟು ಒಂದು ಕಾಲು ಕಪ್,
ತುಪ್ಪ
ಅರ್ಧ ಕಪ್,
ಬಾಂಬೆ ರವೆ ನಾಲ್ಕು ಟೇಬಲ್ ಸ್ಪೂನ್,
ಬಾದಮಿ ಐದು ಬೀಜಗಳು,
ಏಲಕ್ಕಿ ಪುಡಿ
ದ್ರಾಕ್ಷಿ ಒಂದು ಟೇಬಲ್ ಸ್ಪೂನ್,
ಮೂರು ಚುಕ್ಕೆ ಕೇಸರಿ.

ಮಾಡುವ ವಿಧಾನ:
ಬಾದಮಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಪಕ್ಕಕ್ಕಿರಿಸಿ,ಪ್ಯಾನ್ ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ ಕಡ್ಲೆಹಿಟ್ಟು ಹಾಕಿ ಉಂಡೆಗಳಾಗದಂತೆ ಗೋಧಿ ಬಣ್ಣ ಬರುವವರೆಗೂ ಬೇಯಿಸಿ.

ಮತ್ತೊಂದು ಪ್ಯಾನ್ ನಲ್ಲಿ ತುಪ್ಪ ಹಾಕಿ ರವೆಯನ್ನು ಹುರಿದು ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಾತ್ರೆ ರವೆ ಮತ್ತು ಕಡ್ಲೆಹಿಟ್ಟನ್ನು ಬೆರಸಿ ಸ್ಟೋವ್ ಮೇಲಿಟ್ಟು ಬೆರೆಸಿ.

ಮತ್ತೊಂದು ಪ್ಯಾನ್ ನಲ್ಲಿ ಸಕ್ಕರೆ ಕೇಸರಿ ಬೆರಸಿ ಬಿಸಿ ಮಾಡಿ ಕಡ್ಲೆಹಿಟ್ಟು ಮತ್ತೆ ರವೆಯ ಮಿಶ್ರಣದೊಂದಿಗೆ ಬೆರಸಿ ಮೇದಬೇಕು,ಸ್ವಲ್ಪ ಬಿಸಿಯಿರುವಾಗಲೆ ಉಂಡೆ ಮಾಡಿ ಕಾಡು ಕಟ್ಟಿ.
ಹೀಗೆ ಮಾಡಿ ನಿಮ್ಮ ಮಕ್ಕಳಿಗೆ ತಿನ್ನಿಸಿ ನಿಮ್ಮ ಮುದ್ದು ಮಕ್ಕಳ ಸೂಪರ್ ಮಾಮ್ ಆಗಿ .
-Aj

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ನಾಗರ ಪಂಚಮಿ ಆಚರಣೆ ಹೇಗೆ ಮಾಡಬೇಕು ಮತ್ತು ಇದರ ಹಿನ್ನೆಲೆ ಏನು ಗೊತ್ತಾ..!

ಈ ಹಬ್ಬದ ಆಚರಣೆ ಪದ್ಧತಿಯಂತೆ ಅಕ್ಕಿಹಿಟ್ಟಿನ ತೊಟ್ಟಿಲು ಮಾಡಿ ಅದರಲ್ಲಿ ನಾಗದೇವತಾ ವಿಗ್ರಹವನ್ನು ಇಡಬೇಕು ಅಂದು ಉಪವಾಸವಿದ್ದು ಪೂಜೆ ಮಾಡಿ …

Leave a Reply

Your email address will not be published. Required fields are marked *