Breaking News
Home / Featured / ಈರುಳ್ಳಿ ಪಕೋಡಾ ಗೊತ್ತು ಆದ್ರೆ ಕ್ರಿಸ್ಪಿ ಚಿಕನ್ ಪಕೋಡಾ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..!

ಈರುಳ್ಳಿ ಪಕೋಡಾ ಗೊತ್ತು ಆದ್ರೆ ಕ್ರಿಸ್ಪಿ ಚಿಕನ್ ಪಕೋಡಾ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಈರುಳ್ಳಿ ಪಕೋಡಾ ಗೊತ್ತು ಆದ್ರೆ ಕ್ರಿಸ್ಪಿ ಚಿಕನ್ ಪಕೋಡಾ ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..!

ಬೇಕಾಗುವ ಪದಾರ್ಥಗಳು…
ಬೋನ್ ಲೆಸ್ ಚಿಕನ್ – ಅರ್ಧ ಕೆಜಿ
ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು) – 5 ಚಮಚ
ಮೈದಾ ಹಿಟ್ಟು – 5 ಚಮಚ
ಮೊಟ್ಟೆ – 2
ಸೋಯಾ ಸಾಸ್ – 2 ಚಮಚ
ಚಿಲ್ಲಿ ಸಾಸ್ – 2 ಚಮಚ
ಸಾಸಿವೆ ಪುಡಿ – 1 ಚಮಚ
ಕಾಳು ಮೆಣಸಿನ ಪುಡಿ – ಸ್ವಲ್ಪ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಬ
ಉಪ್ಪು- ರುಚಿಗೆ ತಕ್ಕಷ್ಟು
ಅಜಿನೋಮೋಟೋ – ಚಿಟಿಕೆಯಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ…
ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ತೊಳೆದು ಪಾತ್ರೆಯೊಂದಕ್ಕೆ ಹಾಕಿಡಬೇಕು.

ಪ್ರೆಷರ್ ಕುಕ್ಕರ್ ತೆಗೆದುಕೊಂದು ಅದಕ್ಕೆ ಸ್ವಲ್ಫ ಮಾಂಸವನ್ನು ಹಾಗಿ ಮಧ್ಯಮಗಾತ್ರದ ಲೋಟದಲ್ಲಿ 2-3 ಲೋಟ ನೀರು, ಎಣ್ಣೆ, ಅಜಿನೋಮೋಟೋ, ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ 4 ಕೂಗು ಕೂಗಿಸಿಕೊಳ್ಳಬೇಕು.

ನಂತರ ಬೆಂದ ಮಾಂಸವನ್ನು ತೆಗೆದು ನೀರು ಹೋಗುವಂತೆ ಮಾಡಬೇಕು. ಪಾತ್ರೆಯೊಂದರನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಕಾರ್ನ್ ಫ್ಲೋರ್, ಮೊಟ್ಟೆ, ಸೋಯಾಸಾಸ್, ಚಿಲ್ಲಿ ಸಾಸ್, ಸಾಸಿವೆಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟು ಸ್ವಲ್ಪ ಗಟ್ಟಿಯಿರುವಂತೆಯೇ ಮಾಡಿಕೊಳ್ಭಬೇಕು. ಅಗತ್ಯಬಿದ್ದರೆ, ಹಾಲು ಸೇರಿಸಬಹುದು.

ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಕಾಯಲು ಬಿಡಬೇಕು. ಎಣ್ಣೆ ಕಾದ ನಂತರ ಬೇಯಿಸಿದ ಮಾಂಸದ ಚೂರುಗಳನ್ನು ಮಿಶ್ರಣದಲ್ಲಿ ಅದ್ದಿಕೊಂಡು ಎಣ್ಣೆಗೆ ಹಾಕಿ ಕೆಂಪಗೆ ಕರಿದುಕೊಂಡರೆ ರುಚಿಕರವಾದ ಕ್ರಿಸ್ಪಿ ಚಿಕನ್ ಪಕೋಡಾ ಸವಿಯಲು ಸಿದ್ಧ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *