Breaking News
Home / Featured / ಸಿಂಪಲ್ ಆಗಿ ನಿಮ್ಮ ಮನೆಯಲ್ಲೇ ಮಾಡಿ ಆರೋಗ್ಯಕ್ಕೆ ಬೇಕಾದ ಸೋರೆಕಾಯಿ ಬರ್ಫಿ..!

ಸಿಂಪಲ್ ಆಗಿ ನಿಮ್ಮ ಮನೆಯಲ್ಲೇ ಮಾಡಿ ಆರೋಗ್ಯಕ್ಕೆ ಬೇಕಾದ ಸೋರೆಕಾಯಿ ಬರ್ಫಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಸೋರೆಕಾಯಿ ಬರ್ಪಿ ಯನ್ನು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ಸೇವಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು…
ತುರಿದ ಸೋರೆಕಾಯಿ – 2 ಬಟ್ಟಲು
ತುಪ್ಪ – 1 ಬಟ್ಟಲು
ಹಾಲು – 1 ಬಟ್ಟಲು
ಕೋವಾ – 1 1/2 ಬಟ್ಟಲು
ಏಲಕ್ಕಿ ಪುಡಿ – 1 ಚಮಚ
ಲವಂಗ – 2
ಸಕ್ಕರೆ – 2 ಬಟ್ಟಲು
ಡ್ರೈಫ್ರೂಟ್ಸ್ – (ದ್ರಾಕ್ಷಿ, ಬಾಗಾಮಿ, ಗೋಡಂಬಿ, ಗೇರು ಬೀಜ, ಅಕ್ರೂಟ್, ನೆಲಗಡಲೆ) ಅರ್ಧ ಬಟ್ಟಲು
ತುರಿದ ತೆಂಗಿನ ಕಾಯಿ – ಅರ್ಧ ಬಟ್ಟಲು
ಸೂರ್ಯಕಾಂತಿ ಬೀಜ – 1 ಚಮಚ
ಮೆಲನ್ ಬೀಜ – 1 ಚಮಚ

ಮಾಡುವ ವಿಧಾನ…
ಮೊದಲು ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು.
ನೆಲಗಡಲೆಯನ್ನು ಸಿಪ್ಪೆ ತೆಗೆದು ಬೀಜವನ್ನು ಬಿಡಿಸಿಕೊಳ್ಳಿ.
ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಇದಕ್ಕೆ ಏಲಕ್ಕಿ ಪುಡಿ ಹಾಗೂ ಲವಂಗವನ್ನು ಹಾಕಬೇಕು. ನಂತರ ತುರಿದ ಸೋರೆಕಾಯಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

ಸೋರೆಕಾಯಿಯಿಂದ ತುಪ್ಪ ಬೇರ್ಪಡುವವರೆಗೆ ಕೈಯಾಡಿಸುತ್ತಿರಬೇಕು.
ನಂತರ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಮತ್ತೊಂದು ಒಲೆಯ ಮೇಲೆ ಹಾಲನ್ನು ಕಾಯಿಸಿ ಅದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಬೇಕು. ಇದನ್ನು ಬೇಯಿಸಿಕೊಂಡ ಸೋರೆಕಾಯಿಗೆ ಹಾಕಿ ಮಿಶ್ರಣವನ್ನು ಮಾಡಬೇಕು.
ಸೋರೆಕಾಯಿ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ, ಕೋವಾ ಹಾಗೂ ಕತ್ತರಿಸಿಕೊಂಡ ನಟ್ಸ್ ಗಳನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.

ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ. ಮುಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಉಳಿದ ನಟ್ಸ್ ಗಳನ್ನು ಇದರ ಮೇಲೆ ಹಾಕಿ ಅಲಂಕಾರ ಮಾಡಿ. ಕೆಲಸ ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿರಿಸಿ ತಿಂದರೆ ರುಚಿಕರವಾಗಿರುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ …

Leave a Reply

Your email address will not be published. Required fields are marked *