Breaking News
Home / Featured / ನೀವು ಹುಟ್ಟಿದ ದಿನಾಂಕದ ಮೇಲೆ ತಿಳಿಯುತ್ತದೆ ನೀವು ಲವ್‌ ಮ್ಯಾರೇಜ್‌ ಆಗ್ತೀರಾ ಅಥವಾ ಅರೆಂಜ್ಡ್‌ ಮ್ಯಾರೇಜ್‌ ಆಗ್ತೀರಾ ಅನ್ನೋದು ಇಲ್ಲಿದೆ ನೋಡಿ..!

ನೀವು ಹುಟ್ಟಿದ ದಿನಾಂಕದ ಮೇಲೆ ತಿಳಿಯುತ್ತದೆ ನೀವು ಲವ್‌ ಮ್ಯಾರೇಜ್‌ ಆಗ್ತೀರಾ ಅಥವಾ ಅರೆಂಜ್ಡ್‌ ಮ್ಯಾರೇಜ್‌ ಆಗ್ತೀರಾ ಅನ್ನೋದು ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಜೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು . ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್‌ ಮ್ಯಾರೇಜ್‌ ಆಗುತ್ತಾರಾ, ಅರೆಂಜ್ ಮ್ಯಾರೇಜ್ ಆಗ್ತಾರೋ ಅನ್ನೋದನ್ನು ತಿಳಿಯಬಹುದು.

ನಿಮ್ಮ ಹುಟ್ಟಿದ ದಿನಾಂಕ 7 ಆಗಿದ್ದರೆ ನಿಮ್ಮ ಸಂಖ್ಯೆ 7, ನಿಮ್ಮ ಹುಟ್ಟಿದ ದಿನಾಂಕ 12 ಆಗಿದ್ದರೆ 1+2 = 3. ಹಾಗಿದ್ದರೆ ನಿಮ್ಮ ಮೂಲಂಕ 3 ಆಗುತ್ತದೆ. ಅದೇ ರೀತಿ ನಿಮ್ಮ ಹುಟ್ಟಿದ ದಿನಾಂಕ 27 ಆಗಿದ್ದರೆ 2+7=9. ನಿಮ್ಮ ಸಂಖ್ಯೆ 9 ಆಗಿರುತ್ತದೆ. ಈಗ ನೋಡಿ ನಿಮ್ಮದು ಲವ್‌ ಅಥವಾ ಅರೇಂಜ್‌ ಮ್ಯಾರೇಜ್‌ ಆಗುವುದೇ ಎಂದು…

ಸಂಖ್ಯೆ 1 :
ಸಂಖ್ಯೆ 1ನ್ನು ಸೂರ್ಯ ಎಂದು ಹೇಳಲಾಗುತ್ತದೆ. ಒಂದು ನಂಬರ್‌ನವರು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ. ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ. ಇದರಿಂದಾಗಿ ಲವ್‌ ಮ್ಯಾರೇಜ್‌ನಿಂದ ಇವರು ದೂರ ಇರುತ್ತಾರೆ.

ಸಂಖ್ಯೆ 2 :
ಸಂಖ್ಯೆ 2ನ್ನು ಚಂದ್ರ ಎಂದು ಹೇಳಲಾಗುತ್ತದೆ. ಇವರಿಗೆ ತುಂಬಾ ನಿಧಾನವಾಗಿ ಪ್ರೀತಿ ಉಂಟಾಗುತ್ತದೆ. ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿ ಬಿದ್ದರೆ ಲವ್‌ ಮ್ಯಾರೇಜ್‌ ಆಗುವುದು ಖಂಡಿತಾ.

ಸಂಖ್ಯೆ 3 :
ಗುರು ಸಂಖ್ಯೆ ಮೂರರ ದೇವರು. ಈ ಸಂಖ್ಯೆಯವರು ಲವ್‌ ಮ್ಯಾರೇಜ್‌ನಲ್ಲಿ ಹೆಚ್ಚಾಗಿ ಸಫಲರಾಗುತ್ತಾರೆ. ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆಯಿದೆ. ನಂತರ ಅವರು ತಮ್ಮ ಪ್ರೀತಿಯನ್ನು ಮದುವೆಯವರೆಗೂ ತೆಗೆದುಕೊಂಡು ಹೋಗುತ್ತಾರೆ. ಇವರ ವೈವಾಹಿಕ ಜೀವನವೂ ಸಫಲವಾಗಿರುತ್ತದೆ.

ಸಂಖ್ಯೆ 4 :
ಇದನ್ನು ರಾಹು ಎಂದು ಹೇಳಲಾಗುತ್ತದೆ. ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ. ಅಂದರೆ ಇವರು ಯಾವತ್ತೂ ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಆದರೆ ತಮ್ಮ ಸ್ವಭಾವ ಬದಲಾವಣೆ ಮಾಡಿದರೆ ಉತ್ತಮ ಪ್ರೇಮಿ ಆಗಬಹುದು.

ಸಂಖ್ಯೆ 5 :
ಇದನ್ನು ಬುಧ ಎಂದು ಹೇಳಲಾಗುತ್ತದೆ. ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಲು ನೋಡುತ್ತಾರೆ. ಇವರು ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಾರೆ. ಇವರ ಕುಂಡಲಿಯಲ್ಲಿ ಯಶಸ್ವಿ ವೈವಾಹಿಕ ಜೀವನ ಅಥವಾ ಪ್ರೇಮ ವಿವಾಹದ ಯೋಗ ಇದೆ.

ಸಂಖ್ಯೆ 6 :
6 ಸಂಖ್ಯೆಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಇವರು ಪ್ರೇಮ ವಿವಾಹವಾಗುತ್ತಾರೆ. ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧ ಹೊಂದಿರುತ್ತಾರೆ. ಆದುದರಿಂದ ಕೆಲವೊಮ್ಮೆ ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಈ ಸಂಖ್ಯೆಯವರಲ್ಲಿ 80 ಶೇಕಡಾ ಜನರದ್ದು ಪ್ರೇಮ ವಿವಾಹವಾಗುತ್ತದೆ.

ಸಂಖ್ಯೆ 7 :
7 ನಂಬರ್‌ ಕೇತು ಎಂದು ಹೇಳಲಾಗುತ್ತದೆ. ಇವರು ಸಂಕುಚಿತ ಸ್ವಭಾವ ಹೊಂದಿರುತ್ತಾರೆ. ಇವರು ತಮ್ಮ ಸ್ಟೇಟಸ್‌ಗೆ ಅನುಗುಣವಾಗಿ ಪ್ರೇಮ ವಿವಾಹವಾಗಲು ಬಯಸುತ್ತಾರೆ.

ಸಂಖ್ಯೆ 8 :
ಶನಿಯ ಸಂಖ್ಯೆ ಇದಾಗಿದೆ. ಈ ಸಂಖ್ಯೆಯವರು ಕಡಿಮೆ ಪ್ರೇಮ ಸಂಬಂಧ ಹೊಂದುತ್ತಾರೆ. ಆದರೆ ಒಂದು ವೇಳೆ ಪ್ರೀತಿ ಮಾಡಿದರೆ ಸಾಯುವವರೆಗೂ ತಮ್ಮ ಪ್ರೀತಿಯನ್ನು ನಿಭಾಯಿಸುತ್ತಾರೆ.

ಸಂಖ್ಯೆ 9 :
ಇದನ್ನು ಮಂಗಳ ಎಂದು ಹೇಳಾಗುತ್ತದೆ. ಮಂಗಳಪ್ರಧಾನವಾದ ಈ ವ್ಯಕ್ತಿ ಯಾವುದೇ ರೀತಿಯ ವಿವಾದದಲ್ಲಿ ಬೀಳಲು ಇಷ್ಟಪಡೋದಿಲ್ಲ. ಪ್ರೇಮದಲ್ಲಿ ವಿವಾದಗಳು ಇರುತ್ತವೆ, ಆದರೆ ಈ ಜನರು ಪ್ರೀತಿಗೆ ಸಂಬಂಧಿಸಿದಂತೆ ಉದಾಸೀನರಾಗುತ್ತಾರೆ. ಹೃದಯದಲ್ಲಿ ತುಂಬಾ ಇಚ್ಛೆ ಇರುತ್ತದೆ, ಆದರೆ ಹೆಚ್ಚು ಭಯ ಪಡುತ್ತಾರೆ. ಇವರ ಪ್ರೇಮ ವಿವಾಹ ನಡೆಯುವುದು ಕಷ್ಟ.
ಶುಭೋದಯ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ ಎಂದ ಸುಮಲತಾ, ನಿಮ್ಮ ಪ್ರಕಾರ ಯಾವ ಪಕ್ಷದನ್ನು ಸ್ಪರ್ದಿಸಬೇಕು..!

ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ …

2 comments

  1. V v giri road raichur

  2. Date of birth 30-08-1997

Leave a Reply

Your email address will not be published. Required fields are marked *