Breaking News
Home / Featured / ಹಾವುಗಳು ಮನೆ ಹತ್ತಿರ ಬರದಂತೆ ಮತ್ತು ಹಾವುಕಚ್ಚಿದ ತಕ್ಷಣ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ..!

ಹಾವುಗಳು ಮನೆ ಹತ್ತಿರ ಬರದಂತೆ ಮತ್ತು ಹಾವುಕಚ್ಚಿದ ತಕ್ಷಣ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಹಾವು ಅಂದ್ರೆ ಯಾರಿಗೆ ಭಯವಿಲ್ಲ ಹೇಳಿ ಪ್ರತಿಯೊಬ್ಬ ಮನುಷ್ಯನಿಗೂ ಹಾವಿನ ಭಯ ಮತ್ತು ಪ್ರತಿಯೊಂದು ಹಾವಿಗೂ ಮನುಷ್ಯನನ್ನು ಕಂಡ್ರೆ ಭಯ. ಹಾಗಾಗಿ ಹಾವು ಬೇಕು ಅಂತ ಯಾರಿಗೂ ಕಚ್ಚುವುದಿಲ್ಲ ಕೆಲವೊಮ್ಮೆ ನಮ್ಮ ತಪ್ಪುಗಳಿಂದ ಮತ್ತು ತಿಳಿದೋ ತಿಳಿಯದೇನೆ ಹಾವುಗಳು ಕಚ್ಚುತ್ತವೆ ಹಾಗಾಗಿ ಹಾವುಗಳು ಕಚ್ಚಿದರೆ ತಕ್ಷಣ ಏನ್ ಮಾಡಬೇಕು ಮತ್ತು ನಮ್ಮ ಮನೆಯ ಹತ್ತಿರ ಹಾವು ಬರದಂತೆ ನೋಡಿಕೊಳ್ಳೋದು ಹೇಗೆ ಅನ್ನೋದು ಇಲ್ಲಿದೆ ನೋಡಿ..

ಹಾವು ಕಚ್ಚಿದ ತಕ್ಷಣ ಪ್ರಥಮ ಚಿಕಿತ್ಸೆ:
ಹಾವು ಕಚ್ಚಿದಾಗ ಅದು ವಿಷಕಾರಿ ಹಾವೇ ಅಥವಾ ವಿಷ ರಹಿತ ಹಾವೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ವಿಷಕಾರಿ ಹಾವು ಕಚ್ಚಿದ್ದರೆ ಅನುಸರಿಸಬೇಕಾದ ಕ್ರಮಗಳು ಹೀಗಿವೆ.

  1. ಹಾವು ಕಚ್ಚಿದವರನ್ನು ಮೊದಲು ಆತಂಕ ಪಡದೆ ಶಾಂತವಾಗಿರುವಂತೆ ಮಾಡಬೇಕು.
  2. ಇದರಿಂದ ಅವರ ದೇದಲ್ಲಿ ರಕ್ತ ಪರಿಚಲನೆ ಸಾಮಾನ್ಯವಾಗಿದ್ದು, ವಿಷ ಹರಡುವುದು ನಿಧಾನವಾಗುತ್ತದೆ.
  3. ಕೈ ಅಥವಾ ಕಾಲಿಗೆ ಹಾವು ಕಚ್ಚಿದರೆ, ಕಚ್ಚಿದ ಜಾಗದಿಂದ ಎರಡು ಅಂಗುಲ ಮೇಲೆ ಹಗ್ಗದಿಂದ ಬಿಗಿಯಾಗಿ ಕಟ್ಟಬೇಕು.
  4. 20 ನಿಮಿಷಕ್ಕೊಮ್ಮೆ ಕಟ್ಟನ್ನು ಸ್ವಲ್ಪ ಸ್ವಲ್ಪ ಸಡಿಲಗೊಳಿಸಬೇಕು.
  5. ಹಾವು ಕಚ್ಚಿದ ತಕ್ಷಣ ಆ ಜಾಗವನ್ನು ನೀರಿನಿಂದ ಅಥವಾ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು.
  6. ಹಾವು ಕಚ್ಚಿದ ಜಾಗದಿಂದ ವಿಷ ತೆಗೆದಯುವ ಪ್ರಯತ್ನ ಅಥವಾ ಆ ಜಾಗವನ್ನು ಕತ್ತರಿಸುವ ಪ್ರಯತ್ನ ಮಾಡಬಾರದು.
  7. ಹಾವು ಕಚ್ಚಿದ ವ್ಯಕ್ತಿಯ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುವ ಕೆಲಸಗಳನ್ನು ಮಾಡಿಸಬಾರದು (ಓಡಾಡಿಸಬಾರದು, ಮಲಗಿಸಬಾರದು, ಸ್ನಾನ ಮಾಡಿಸಬಾರದು).
  8. ಆದಷ್ಟು ಬೇಗ ವೈದ್ಯರನ್ನು ಕಾಣಬೇಕು.
  9. ವಿಷರಿಯಲ್ಲದ ಹಾವು ಕಚ್ಚಿದಲ್ಲಿ, ಕಚ್ಚಿದ ಜಾಗವನ್ನು ಸ್ವಚ್ಛಗೊಳಿಸಿ, ದಡಾರ ನಿರೋಧಕ (ಆ್ಯಂಟಿ ಟೆಟಾನಸ್) ಚುಚ್ಚುಮದ್ದು ತೆಗೆದುಕೊಂಡರೆ ಸಾಕು.

ಹಾವುಗಳು ಮನೆಯ ಒಳಗೆ ಸುಲಭವಾಗಿ ಬಾರದಂತೆ ಮಾಡಲು ಹಲವು ಉಪಾಯಗಳಿವೆ.
*ಮನೆಯ ಬಳಿ ಇರುವ ಇಲಿಯ ಬಿಲಗಳನ್ನು ಮುಚ್ಚಿ
*ಮನೆಯಿಂದ ಮೋರಿಗೆ ಸೇರುವ ಸ್ಯಾನಿಟರಿ ಪೈಪ್‌ಗಳಿಗೆ ಕಬ್ಬಿಣದ ಜಾಲರ ಅಳವಡಿಸಿ
*ಮನೆಯ ಸುತ್ತಮುತ್ತ ಕಸವಿಲ್ಲದಂತೆ, ಇಲಿಗಳು ಬಾರದಂತೆ ಸ್ವಚ್ಛತೆ ಕಾಪಾಡಿ

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *