Breaking News
Home / Featured / ಬೆಂಕಿ ಫಾಲ್ಸ್ ಆಗಂತ ಇಲ್ಲಿ ಬೆಂಕಿ ಬರಲ್ಲ, ಪ್ರವಾಸಿಗರನ್ನು ಕೈಬೀಸಿ ಕರೆಯುವ ಜಲಪಾತ ಇಲ್ಲಿದೆ ನೀವು ಒಮ್ಮೆ ಹೋಗಿ..!

ಬೆಂಕಿ ಫಾಲ್ಸ್ ಆಗಂತ ಇಲ್ಲಿ ಬೆಂಕಿ ಬರಲ್ಲ, ಪ್ರವಾಸಿಗರನ್ನು ಕೈಬೀಸಿ ಕರೆಯುವ ಜಲಪಾತ ಇಲ್ಲಿದೆ ನೀವು ಒಮ್ಮೆ ಹೋಗಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬೆಂಕಿ ಫಾಲ್ಸ್, ಗಾಣಾಳು ಫಾಲ್ಸ್, ಶಿಂಷಾ ಫಾಲ್ಸ್ ಎಂಬ ನಾನಾ ಹೆಸರುಗಳಿಂದ ಕರೆಯಲಾಗುವ ಈ ಜಲಧಾರೆ ಸ್ಥಳೀಯರ ಬಾಯಲ್ಲಿ ‘ಬೆಂಕಿ ಫಾಲ್ಸ್’ ಎಂದೇ ಹೆಚ್ಚು ಪ್ರಸಿದ್ಧಿ! ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪ (ಮುತ್ತತ್ತಿ ಮಾರ್ಗ) ಈ ಜಲಪಾತವಿದೆ. ಕಾವೇರಿ ನದಿಯ ಉಪನದಿ ಆಗಿರುವ ಶಿಂಷಾ ನದಿ ಸೃಷ್ಟಿಸುವ ಮನಮೋಹಕ ಜಲಧಾರೆ ಇದು.

‘ಬೆಂಕಿ ಫಾಲ್ಸ್’ ಎಂದ ಮಾತ್ರಕ್ಕೆ ಬೆಂಕಿಯೇ ಧರೆಗಿಳಿಯುತ್ತದೆ ಎಂದು ಭಾವಿಸಬೇಕಿಲ್ಲ. ವಿಸ್ತಾರವಾಗಿ ಹರಡಿರುವ ಕಲ್ಲಬಂಡೆಯನ್ನು ಸೀಳಿ ಮೇಲಿಂದ ಇಳಿಯುವುದು ಜಲ ಜಲ ಜಲಧಾರೆಯೇ..! ‘ಬೆಂಕಿ ಫಾಲ್ಸ್’ ಎಂಬ ಹೆಸರು ಹೇಗೆ ಬಂತು ಎಂಬುವುದು ಸ್ಥಳೀಯರಿಗೆ ತಿಳಿದಿಲ್ಲ.

ಮೌನ ತಬ್ಬಿದ, ಹಸಿರ ಕಾನನ ಮಧ್ಯೆ ವಿಸ್ತಾರವಾಗಿ ಮೈಚಾಚಿರುವ ಕಲ್ಲುಬಂಡೆ ಮೇಲಿಂದ ಕೆಳಗಿಳಿಯುವ ಜಲಧಾರೆಯ ದೃಶ್ಯ ಚೇತೋಹಾರಿ. ನಂತರ, ಹಸಿರು ಕಣಿವೆ ಮೂಲಕ ಮೌನವಾಗಿ ಸಾಗುವ ‘ಶಿಂಷೆ’ ಮುಂದೆ ‘ಕಾವೇರಿ’ ನದಿಯ ಒಡಲು ಸೇರುತ್ತಾಳೆ. ಅಲ್ಲಲ್ಲಿ ಕಾಣುವ ಸಣ್ಣ ಸಣ್ಣ ಝರಿಗಳು, ಹಸಿರ ಸಿರಿ, ಬಂಡೆಗಲ್ಲಿನಲ್ಲಿ ಮೂಡಿರುವ ಚಿತ್ತಾರದ ಸೌಂದರ್ಯ ಮನಸ್ಸಿನ ಪುಟದಲ್ಲಿ ಅಚ್ಚೊತ್ತುತ್ತದೆ. ಮಳೆಗಾಲವಿದ್ದರೂ ಶಿಂಷೆ ಉಕ್ಕಿಹರಿದರಷ್ಟೇ ಈ ಜಲಪಾತದ ಸೊಗಸು ಕಣ್ತುಂಬಿಕೊಳ್ಳಲು ಸಾಧ್ಯ.

ಎಚ್ಚರಿಕೆ ಇರಲಿ:
ಜಲಧಾರೆ ಸಮೀಪ ತೆರಳಬೇಕೆಂದರೆ ಭಯ ಮೂಡಿಸುವಷ್ಟು ಇಳಿಜಾರಿದೆ. ಸೌಕರ್ಯ ಇಲ್ಲದಿರುವ ಕಾರಣ ಕಾಲುದಾರಿಯಲ್ಲಿಯೇ ಕೆಳಗಿಳಿಯಬೇಕು. ಸ್ವಲ್ಪ ಮೈಮರೆತರೂ ಅನಾಹುತ ಗ್ಯಾರಂಟಿ. ಜಲಧಾರೆ ಸಮೀಪ ತಲುಪಿದಾಗ ರಭಸದಿಂದ ಕೆಳಗಿಳಿಯುವ ನೀರು ಎಬ್ಬಿಸುವ ತುಂತುರು ಆಹ್ಲಾದಕರ ಅನುಭೂತಿ ನೀಡುತ್ತದೆ. ಪ್ರಕೃತಿ ಉಪಾಸಕರಿಗೆ ಹೇಳಿ ಮಾಡಿಸಿದ ಸ್ಥಳವಿದು.

ಹೋಗುವುದು ಹೇಗೆ?:
ಹಲಗೂರಿನಿಂದ ಮುತ್ತತ್ತಿ ಮಾರ್ಗವಾಗಿ ಗಾಣಾಳು-ಬಿರೋಟ ರಸ್ತೆಯಲ್ಲಿ ಸಾಗಬೇಕು. ಗಾಣಾಳು ಗ್ರಾಮದಿಂದ ಸ್ವಲ್ಪ ಮುಂದೆ ಸಾಗಿ ಬಳಿಕ ಬಲಕ್ಕೆ ತಿರುಗಿ ಮಣ್ಣಿನ ರಸ್ತೆ ಮೂಲಕ ಸುಮಾರು ಎರಡು ಕಿ.ಮೀ. ಹೋದರೆ ‘ಬೆಂಕಿ ಫಾಲ್ಸ್’ ಸಿಗುತ್ತದೆ. ಮಂಡ್ಯದಿಂದ 60 ಕಿ.ಮೀ., ಬೆಂಗಳೂರಿನಿಂದ 100 ಕಿ.ಮೀ., ದೂರವಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಮೂಲಕ ಸ್ಥಳಕ್ಕೆ ತೆರಳು ಸಾಧ್ಯ. ರಸ್ತೆ ಮಾರ್ಗದಲ್ಲಿ ಜಲಧಾರೆ ಬಗ್ಗೆ ತಿಳಿಸುವ ನಾಮಫಲಕಗಳು ಇಲ್ಲ. ಸ್ಥಳಿಯರನ್ನು ಕೇಳಿ ತೆರಳುವುದು ಉತ್ತಮ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್ ನಮ್ಮ ಕನ್ನಡ ಕುವರಿ ಚಿಕ್ಕಮಗಳೂರ ಹುಡುಗಿ..!

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ …

Leave a Reply

Your email address will not be published. Required fields are marked *