Breaking News
Home / Featured / ನಿಮ್ಮ ಮನೆಯ ಮುಂದಿರುವ ಈ ದಾಸವಾಳ ಹೂವಿನ ಮಹತ್ವ ಮತ್ತು ಗುಣಗಳನ್ನು ಕೇಳಿದರೆ ಆಶ್ಚರ್ಯ ಪಡುತ್ತೀರಾ..!

ನಿಮ್ಮ ಮನೆಯ ಮುಂದಿರುವ ಈ ದಾಸವಾಳ ಹೂವಿನ ಮಹತ್ವ ಮತ್ತು ಗುಣಗಳನ್ನು ಕೇಳಿದರೆ ಆಶ್ಚರ್ಯ ಪಡುತ್ತೀರಾ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ನಿಮ್ಮ ಮನೆ ಮುಂದೆ ಮತ್ತು ನಿಮ್ಮ ಹಿತ್ತಲಲ್ಲಿ ಇರುವ ಈ ದಾಸವಾಳ ಹೂ ನೋಡಲು ಎಷ್ಟು ಸುಂದವಾಗಿರುತ್ತದೆಯೋ ಅಷ್ಟೇ ಅದರ ಪರಿಮಳ ಮತ್ತು ಉಪಯೋಗ ಗುಣಗಳನ್ನು ಹೊಂದಿದೆ.

ಸೌಂದರ್ಯವರ್ಧಕ, ಔಷಧ ಹಾಗೂ ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ದಾಸವಾಳದಷ್ಟು ಹೆಚ್ಚು ಬಳಕೆಯಾಗುವ ಬಹೂಪಯೋಗಿ ಹೂವು ಇನ್ನೊಂದಿಲ್ಲ .

ಮಹಿಳೆಯರ ಸೌಂದರ್ಯಕ್ಕೆ ಇಂಬು ಕೊಡುವ ತಲೆಗೂದಲು ಬೆಳೆವಣಿಗೆಯಲ್ಲಿ ದಾಸವಾಳ ಹೂವು ಮುಖ್ಯ ಪಾತ್ರ ವಹಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ.

ಹೂವಿನಲ್ಲಿರುವ ನೈಸರ್ಗಿಕ ತೈಲ ಅತ್ಯುತ್ತಮ ಕಂಡೀಷನರ್.

ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ.

ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ.

ದಾಸವಾಳ ಹೂಗಳ ಪಕಳೆಗಳನ್ನು ಶೂಗಳಿಗೆ ತಿಕ್ಕಿದರೆ, ಹೊಳಪು ಬರುತ್ತದೆ.

ಹೂವಿನ ಪಕಳೆಗಳನ್ನು ಹಾಕಿ ತಯಾರಿಸಿದ ಚಹಾ ಸೇವನೆ ಎಷ್ಟೋ ಬುಡಕಟ್ಟು ಜನರಲ್ಲಿ ಇನ್ನೂ ಇದೆ. ಈ ಚಹಾ ಖನಿಜಾಂಶ ಹಾಗೂ ವಿಟಮಿನ್ ಒಳಗೊಂಡಿರುತ್ತದೆ.

ದಾಸವಾಳ ಸಸ್ಯದ ಬೇರನ್ನು ಬಳಸಿ ತಯಾರಿಸುವ ಔಷಧವು ಅನೇಕ ರೋಗಗಳಿಗೆ ರಾಮಬಾಣವಾಗಿದೆ.

ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ. ಹೀಗಾಗಿಯೇ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ, ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.

ದಾಸವಾಳ ಸಸ್ಯದ ಕಾಂಡದಲ್ಲಿರುವ ಫೈಬರ್ (ನಾರು) ಒಳ್ಳೆಯ ಗುಣಮಟ್ಟದ್ದು. ಬಟ್ಟೆ, ಬಲೆ ಹಾಗೂ ಪೇಪರ್ ತಯಾರಿಸಲು ಇದರ ಬಳಕೆಯಾಗುತ್ತದೆ.

ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಮೈ ಕೊಬ್ಬು ಕರಗಿಸುವ ಕಬ್ಬಿನ ಹಾಲು ಹೇಗೆ ಬಳಕೆ ಮಾಡಬೇಕು ಗೊತ್ತಾ..!

ಬೊಜ್ಜು ಕರಗಿಸುವಲ್ಲಿ ಕಬ್ಬಿನ ಹಾಲು ಹೇಗೆ ಸಹಕಾರಿಯಾಗಿವೆ ಎಂಬುವುದರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಒಂದು ಲೋಟ ಕಬ್ಬಿನ ಹಾಲು ಕುಡಿಯುವುದರಿಂದ …

Leave a Reply

Your email address will not be published. Required fields are marked *