Breaking News
Home / Featured / ಮತ್ತೊಂದು ರಾಜಕೀಯ ಅಖಾಡಕ್ಕೆ ಸಿದ್ದವಾದ ರಾಮನಗರ, ಬಿಜೆಪಿಗೆ ಮತ್ತೊಂದು ಸ್ಥಾನ..!

ಮತ್ತೊಂದು ರಾಜಕೀಯ ಅಖಾಡಕ್ಕೆ ಸಿದ್ದವಾದ ರಾಮನಗರ, ಬಿಜೆಪಿಗೆ ಮತ್ತೊಂದು ಸ್ಥಾನ..!

ರಾಜ್ಯ ರಾಜಕಾರಣದಲ್ಲಿ ಈ ಭಾರಿ ಯಾರು ಸರ್ಕಾರ ರಚನೆ ಮಾಡ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ
೧೦೪ ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿರುವ ಬಿಜೆಪಿ ತನ್ನ ಸರ್ಕಾರ ರಚನೆ ಮಾಡುತ್ತೆ ಅಂತ ಹೇಳಲಾಗುತ್ತಿದೆ.

ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಕಾರಣ ಇಷ್ಟು ದಿನ ಎದುರಾಳಿಗಳಾಗಿ ಚುನಾವಣಾ ಚದುರಂಗದಲ್ಲಿ ಬದ್ದ ವೈರಿಗಳಂತೆ ಕಾದಾಡಿ ಇದೀಗ ಮೈತ್ರಿ ಮಾಡಿಕೊಳ್ಳುತ್ತಿರುವುದಕ್ಕೆ ಜೆಡಿಎಸ್ ಮತ್ತು ಕಾಂಗ್ರಸ್ ಕಾರ್ಯಕರ್ತರ ಸಹಮತ ಕಂಡುಬರುತ್ತಿಲ್ಲ ಇನ್ನು ಬಿಜೆಪಿಗೆ ಮತ್ತೊಂದು ಸ್ಥಾನ ಸಿಗೋದು ಪಕ್ಕ ಆಗಿದೆ.

ಕುಮಾರಸ್ವಾಮಿ ಚನ್ನಪಟ್ಟಣ ಹಾಗು ರಾಮನಗರ ಎರಡು ಕ್ಷೇತ್ರಗಳಲ್ಲಿ ಸ್ಪರ್ದಿಸಿದ್ದು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ಕಾರಣ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು ಆಗ ಆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.

ಕುಮಾರಸ್ವಾಮಿ ರಾಮನಗರಕ್ಕೆ ರಾಜೀನಾಮೆ ನೀಡಿದರೆ ತನ್ನ ಪಕ್ಷದ ಕಾರ್ಯಕರ್ತರಿಗೆ ಯಾವ ಸಂದೇಶ ನೀಡಲಿದ್ದಾರೆ ಅನ್ನೋದು ದೊಡ್ಡ ಪ್ರಶ್ನೆ ಕಾರಣ ಇಲ್ಲಿ ಕುಮಾರಸ್ವಾಮಿಯ ಅಭಿಮಾನಿಗಳು ಹೆಚ್ಚಾಗಿದ್ದು ಅವರು ರಾಜೀನಾಮೆ ಕೊಟ್ಟರೆ ಅದು ಅವರ ಪಾಲಿಗೆ ಮುಳುವಾಗಲಿದೆ. ಆಗ ಬಿಜೆಪಿಯಲ್ಲಿ ಈ ಭಾರಿ ಟಿಕೆಟ್ ಕೈತಪ್ಪಿದ ಜಗದೀಶ್ ಗೌಡ ಹೆಚ್ಚು ಆಕ್ಟಿವ್ ಆಗಿದ್ದು ಒಂದುವೇಳೆ ಬಿಜೆಪಿ ಜಗದೀಶ್ ಗೌಡಗೆ ಬಿಜೆಪಿ ಟಿಕೆಟ್ ಕೊಟ್ರೆ ಜಗದೀಶ್ ಗೌಡ ಗೆಲ್ಲುವ ಚಾನ್ಸ್ ಕೂಡ ಇದೆ ಹಾಗಾಗಿ ಬಿಜೆಪಿಗೆ ರಾಮನಗರ ಜಿಲ್ಲೆಯಿಂದ ಮತ್ತೊಂದು ಸ್ಥಾನ ಬರುವುದು ಪಕ್ಕ ಆಗಿದೆ.

ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿದರೆ ಸಿಪಿ ಯೋಗೀಶ್ವರ್ ಮತ್ತೆ ಚುನಾವಣೆಗೆ ಸ್ಪರ್ದಿಸುವುದು ಪಕ್ಕ ಈ ಕ್ಷೇತ್ರದಲ್ಲಿ ಯೋಗೀಶ್ವರ್ ಅವರ ವರ್ಚಸ್ ಹೆಚ್ಚಾಗಿದ್ದು ಯೋಗೀಶ್ವರ್ ಉಪಚುನಾವಣೆಯಲ್ಲಿ ಗೆಲ್ಲುವು ಸಾಧ್ಯತೆಗಳೇ ಹೆಚ್ಚಾಗಿ ಕಂಡುಬರುತ್ತಿದೆ.

 

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!