Breaking News
Home / Featured / ಅಧಿಕ ಜ್ಯೇಷ್ಠ ಮಾಸದ ವಿಶೇಷತೆಗಳು

ಅಧಿಕ ಜ್ಯೇಷ್ಠ ಮಾಸದ ವಿಶೇಷತೆಗಳು

ಅಧಿಕ ಮಾಸ ಎಂದರೆ ಯಾವ ಚಾಂದ್ರಮಾಸದಲ್ಲಿ ಸೂರ್ಯನ ಸಂಕ್ರಾಂತಿ ಇರುವುಗಿಲ್ಲವೋ ಅದು ಸಂಸರ್ಪಮಾಸ ಅಥವಾ ಅಧಿಕ ಮಾಸ ಎಂದು ಕರೆಯುತ್ತಾರೆ.ಎರಡು ತಿಂಗಳುಗಳ ಕಾಲ ಸೂರ್ಯಗ್ರಹವು
ಒಂದೇ ರಾಶಿಯಲ್ಲಿ ಇರುತ್ತಾನೆ.

ಈ ವರ್ಷ ವಿಶೇಷವಾಗಿ ಅಧಿಕವು ಜೇಷ್ಠಮಾಸವೇ ಆಗಿದೆ ವಿಳಂಬನಾಮ ಸಂವಸ್ಸರದ ಮೇ16ರ ರಿಂದ ಅಧಿಕ ಜೇಷ್ಠ ಮಾಸ ಪ್ರರಂಭವಾಗುತ್ತದೆ ಸರಿಸುಮಾರು 3 ವರ್ಷಕ್ಕೊಮ್ಮೆ ಅಧಿಕಮಾಸ ಪುನರಾವರ್ತನೆಯಾಗುತ್ತಲೇ ಇರುತ್ತದೆ.

ಜೇಷ್ಠಮಾಸದ ವಿಶೇಷವೆಂದರೆ ಈ ಮಾಸದಲ್ಲಿ ಶುಕ್ಲ ಪೂರ್ಣಮಿ ತಿಥಿ ಇರುವ ದಿವಸ ಚಂದ್ರನು ಜೇಷ್ಠ ನಕ್ಷತ್ರದಲ್ಲಿರುತ್ತಾನೆ ಆದ್ದರಿಂದ ಈ ಮಾಸಕ್ಕೆ ಜೇಷ್ಠ ಮಾಸ ಎಂದು ಕರೆಯುತ್ತಾರೆ.

ಈ ಮಾಸದಲ್ಲಿ ಗಂಗಾ ಸ್ನಾನ ಸಮುದ್ರ ಸ್ನಾನ ಮಾಡಿದರೆ ವಿಶೇಷ ಫಲಸಿಗುತ್ತದೆ ದಾನಕ್ಕೂ ವಿಶೇಷ ಫಲಸಿಗುತ್ತದೆ ಸದಾ ಧಾರ್ಮಿಕ ಚಿಂತನೆ ಮಾಡುತ್ತಿದ್ದರೆ ಮತ್ತು ಜಪ ತಪ ಇಷ್ಟ ದೇವರ ಆರಾಧನೆ ಮಾಡುವುದರಿಂದ ಅಧಿಕ ಫಲ ಪ್ರಾಪ್ತಿಯಾಗುತ್ತದೆ.

ಅಧಿಕ ಮಾಸದಲ್ಲಿ ಸಾಮಾನ್ಯವಾಗಿ ಐಹಿಕ ಕಾರ್ಯಕ್ರಮಗಳಿಗಿಂತ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಹೆಚ್ಚು ಪ್ರಾಶಸ್ತ್ಯ ನೀಡಿರುತ್ತದೆ. ಷೋಡಶ ಸಂಸ್ಕಾರಗಳಲ್ಲಿ ಗರ್ಭಾದಾನದಿಂದ ಅನ್ನಪ್ರಾಶನ ಸಂಸ್ಕಾರದವರೆಗೆ ಎಂಟು ಸಂಸ್ಕಾರಗಳು ಕೈಗೊಳ್ಳಬಹುದು.

ಅಧಿಕ ಮಾಸದಲ್ಲಿ ಈ ಕಾರ್ಯಗಳು ಮಾಡಲೇ ಬಾರದು

ಗೃಹ ಪ್ರವೇಷ, ದೇವತಾ ಪ್ರತಿಷ್ಠಾಪನ, ಉಪಕರ್ಮ, ಉತ್ಸರ್ಜನ, ಚೌಲ ಸಂಸ್ಕಾರ, ವಿವಾಹ, ಉಪನಯನ, ವಾಸ್ತು ಕಾರ್ಯ, ತೀರ್ಥಯಾತ್ರೆ, ಜೀರ್ಣೋದ್ದಾರ, ತುಲಾಭಾರ
ಮುಂತಾದ ಕಾರ್ಯಗಳು ಮಾಡಬಾರದು.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!