Breaking News
Home / Featured / ಬಾಯಿ ಹುಣ್ಣು, ಎದೆ ಉರಿ, ಅತಿ ರಕ್ತಸ್ರಾವ, ಮೂಗಿನಿಂದ ರಕ್ತಸ್ರಾವ ಸಮಸ್ಯೆಗಳನ್ನು ಹೋಗಲಾಡಿಸುವ ಗುಲಾಬಿ..!

ಬಾಯಿ ಹುಣ್ಣು, ಎದೆ ಉರಿ, ಅತಿ ರಕ್ತಸ್ರಾವ, ಮೂಗಿನಿಂದ ರಕ್ತಸ್ರಾವ ಸಮಸ್ಯೆಗಳನ್ನು ಹೋಗಲಾಡಿಸುವ ಗುಲಾಬಿ..!

ಹೌದು ಗುಲಾಬಿ ನೋಡಲು ಎಷ್ಟೊಂದು ಅಂದವಾಗಿರುತ್ತೆ ಅಂತ ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಕೆಲವರು ಅಂದ್ಕೊಂಡಿರೋದು ಇದು ಕೇವಲ ಅಲಂಕಾರಕ್ಕೆ ಮತ್ತು ಮಹಿಳೆಯರ ಮುಡಿವುದಕ್ಕೆ ಅಂತ ಎಷ್ಟೋ ಮಂದಿ ತಿಳಿದಿದ್ದರೆ ಆದ್ರೆ ಈ ಗುಲಾಬಿಯಲ್ಲಿರುವ ಆರೋಗ್ಯಕಾರಿ ಅಂಶಗಳು ಇಲ್ಲಿವೆ ನೋಡಿ.

ಪದೇ ಪದೆ ಕಾಡುವ ಹೊಟ್ಟೆ ನೋವಿಗೆ ಕಾರಣವಾಗುವ ಕರುಳಿನ ಸೋಂಕಿಗೆ ಗುಲಾಬಿ ಹೂವಿನ ಕಷಾಯ ತುಂಬಾ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವಿಸಿದರೆ ಕರುಳಿನ ಸೋಂಕು ನಿವಾರಣೆಯಾಗುತ್ತದೆ.

ಗುಲಾಬಿ ಹೂವಿನ ಪಕಳೆಗಳಿಂದ ತಯಾರಿಸಿದ ಗುಲ್ಕಂದ್‌ ಸೇವಿಸಿದರೆ ಬಾಯಿ ಹುಣ್ಣು, ಎದೆ ಉರಿ, ಅತಿ ರಕ್ತಸ್ರಾವ, ಮೂಗಿನಿಂದ ರಕ್ತಸ್ರಾವ ಸಮಸ್ಯೆಗಳು ಕಡಿಮೆಯಾಗುತ್ತವೆ.

ಗುಲಾಬಿ ನೀರಿಗೆ ನಿಂಬೆ ರಸ ಮತ್ತು ಗ್ಲಿಸರಿನ್‌ ಹಾಕಿ ತುಟಿಗಳಿಗೆ ಮತ್ತು ಚರ್ಮಕ್ಕೆ ಲೇಪಿಸಿದರೆ ತುಟಿ ಮತ್ತು ಚರ್ಮ ಮೃದುವಾಗುತ್ತವೆ. ಒಣಗಿದ ತುಟಿ ಮತ್ತು ಚರ್ಮದ ಸಮಸ್ಯೆಯಿದ್ದವರಿಗೆ ಇದು ತುಂಬಾ ಉತ್ತಮ.

ಗುಲಾಬಿ ನೀರಿಗೆ ಗಂಧ ಹಾಕಿ ಕಣ್ಣಿನ ಸುತ್ತಲೂ ಲೇಪಿಸಿದರೆ ಕಣ್ಣುಗಳ ಸುಸ್ತು ಕಡಿಮೆಯಾಗುತ್ತದೆ.

ಬಿಸಿಲಿನಿಂದ ಕಪ್ಪಾದ ಚರ್ಮಕ್ಕೂ ಗುಲಾಬಿ ನೀರು ಒಳ್ಳೆಯದು. ಎರಡು ಚಮಚ ಗುಲಾಬಿ ನೀರಿಗೆ ಎರಡು ಚಮಚ ಟೊಮೇಟೊ ರಸ ಹಾಕಿ ಲೇಪಿಸಿದರೆ ಚರ್ಮದ ಕಪ್ಪು ಕಡಿಮೆಯಾಗಿ ಕಾಂತಿ ಹೆಚ್ಚುತ್ತದೆ.

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!