Breaking News
Home / Featured / ಭಾರತ ದೇಶದಲ್ಲಿ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ ನಿಮಗೆ ಸಿಗುತ್ತೆ 11 ಸಾವಿರ ರೂಪಾಯಿಗಳು..!

ಭಾರತ ದೇಶದಲ್ಲಿ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ ನಿಮಗೆ ಸಿಗುತ್ತೆ 11 ಸಾವಿರ ರೂಪಾಯಿಗಳು..!

ಹೌದು ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ತಡೆಗಟ್ಟಲು ಹಾಗು ಹೆಣ್ಣು ಮಕ್ಕಳನ್ನು ಶೈಕ್ಷಣಿಕವಾಗಿ ಹಾಗು ಆರ್ಥಿಕವಾಗಿ ಬೆಳೆಯಲು ಇಲ್ಲೊಂದು ಸಂಸ್ಥೆ ನಿಮ್ಮ ಹೆಣ್ಣು ಮಗುವಿಗೆ ನೀಡುತ್ತಿದೆ ೧೧ ಸಾವಿರ ರೂಗಳನ್ನು ಹೇಗೆ ಏನು ಅನ್ನೋದು ಇಲ್ಲಿದೆ ನೋಡಿ.

ದೇಶದಲ್ಲಿ ‘ಆಕ್ಸಿ ಮಹಿಳಾ ಶಿಶು ಅಭಿವೃದ್ಧಿ ಕಾರ್ಯಕ್ರಮ’ ದಡಿಯಲ್ಲಿ ಹೆತ್ತವರು ಹೆಣ್ಣು ಮಗುವಿನ ಜನನವನ್ನು ನೊಂದಾಯಿಸಿದಲ್ಲಿ ಮಗುವಿನ ಹೆಸರಿನಲ್ಲಿ 11 ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ (ಎಫ್ಡಿ) ಇಡುವುದಾಗಿ ಓಕ್ಸಿ ಸಂಸ್ಥೆ ಹೇಳಿದೆ.

ಎಲ್ಲರಿಗೂ ಈ ಸೌಲಭ್ಯ ನೀಡಲಾಗುವುದು’ ಎಂದು ಸಂಸ್ಥೆ ತಿಳಿಸಿದೆ.

18 ವರ್ಷ ಪೂರ್ಣಗೊಳಿಸಿದ ನಂತರ ಹುಡುಗಿಯು ಈ ನಿಶ್ಚಿತ ಠೇವಣಿ ಮೊತ್ತವನ್ನು ತೆಗೆದುಕೊಳ್ಳಬಹುದು. ಈ ಹಣವನ್ನು ಅವರ ವಿದ್ಯಾಭ್ಯಾಸ ಅಥವಾ ಅವರ ವೃತ್ತಿಪರ ಗುರಿ ಸಾಧನೆಗೆ ಬಳಸಬಹುದು.

ಈ ಹಣವನ್ನು ಅವರ ಭವಿಷ್ಯಕ್ಕಾಗಿ ಬಳಸಿಕೊಳ್ಳಬಹುದೇ ವಿನಃ, ಇದರ ಮೇಲೆ ಬೇರೆ ಯಾರಿಗೂ ಹಕ್ಕಿರುವುದಿಲ್ಲ.

ಆಕ್ಸಿ ಹೆಲ್ತ್ ಕೇರ್ ನ ಈ ಯೋಜನೆಯು ಮೂರು ತಿಂಗಳ ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯು ಅದನ್ನು ಆಕ್ಸಿ ಹೆಲ್ತ್ ಕೇರ್ ಅಪ್ಲಿಕೇಶನ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ, ಆಗ 11 ಸಾವಿರ ರೂಪಾಯಿ ಎಫ್ಡಿ ಅನ್ನು ಹುಡುಗಿಯ ಹೆಸರಿನಲ್ಲಿ ಇಡಲಾಗುತ್ತದೆ.

ಇದು ಮಗುವಿನ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗುತ್ತದೆ. 18 ವರ್ಷಗಳ ಪೂರ್ಣಗೊಂಡ ನಂತರ, ಅವರು ಯಾವುದೇ ಹಸ್ತಕ್ಷೇಪವಿಲ್ಲದೆ ಅದನ್ನು ಬಳಸಬಹುದು.

ಈ ಯೋಜನೆ ಭಾರತ ದೇಶದಲ್ಲಿ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 11 ಸಾವಿರ ರೂಪಾಯಿಗಳನ್ನು ಠೇವಣಿ (ಎಫ್ಡಿ) ಇಡು ಬಹುದಾಗಿದೆ.
ಸಂಗ್ರಹ ಮಾಹಿತಿ:

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!