Breaking News
Home / Featured / ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ಲಭ್ಯ ಇಲ್ಲಿದೆ ಫುಲ್ ಡಿಟೇಲ್ಸ್..!

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ಲಭ್ಯ ಇಲ್ಲಿದೆ ಫುಲ್ ಡಿಟೇಲ್ಸ್..!

ಹೌದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ದೊರೆಯುತ್ತದೆ ಕರ್ನಾಟಕದಲ್ಲಿ ಕಳೆದ 2016-17 ನೇ ಸಾಲಿನಿಂದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಕಾರ್ಯ ನಿರ್ವಹಿಸುತ್ತದೆ ಮೊದಲಿನಂತೆ ಮಾನಸಿಕ ರೋಗಗಳಿಗೆ ಚಿಕೆತ್ಸೆಗಾಗಿ ದೂರದ ಪಟ್ಟಣಗಳಿಗೆ ನಗರಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡುವ ಪ್ರಮೇಯವೇ ಇಲ್ಲ ಮತ್ತು ನುರಿತ ತಜ್ಞ ವೈದ್ಯರನ್ನು (ಸೈಕಿಯಾಟ್ರಿಸ್ಟ್) ಭೇಟಿ ಮಾಡಲು ದಿನಗಟ್ಟಲೆ ವಾರಗಟ್ಟಲೇ ಕಾಯುವ ಅವಶ್ಯಕತೆ ಇಲ್ಲ .

ನಮ್ಮ ಭಾರತ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ ೧೧ ರಷ್ಟು ಜನರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಸಂಶೋದನೆಗಳು ತಿಳಿಸುತ್ತದೆ ಅದಕ್ಕೆ ಸರಿಯಾಗಿ ತಜ್ಞ ವೈದ್ಯರ ಕೊರತೆಯಿದ್ದರೂ ನಮ್ಮ ಕರ್ನಾಟಕದ 31ಜಿಲ್ಲೆಗಳಲ್ಲಿ ಮತ್ತು ಬಿಬಿಎಂಪಿ ಯಲ್ಲಿಯೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಡಿಯಲ್ಲಿ ಮನೋರೋಗ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಮಾನಸಿಕ ಆರೋಗ್ಯಕಾರ್ಯಕ್ರಮ :
ಮಾನಸಿಕ ಆರೋಗ್ಯ ಮನುಷ್ಯನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ವಿಶ್ವ ಆರೋಗ್ಯ ಸಂಸ್ಥೆ ಯಾವ ಪ್ರಕಾರ ಆರೋಗ್ಯ ವೆಂದರೆ : ದೈಹಿಕವಾಗಿ ,ಮಾನಸಿಕವಾಗಿ ,ಆಧ್ಯಾತ್ಮಿಕವಾಗಿ ಸದೃಢವಾಗಿರುವುದೇ ಆರೋಗ್ಯವಾಗಿದೆ .ಆದುದರಿಂದ ಮುನುಷ್ಯ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿ ಸದೃಢನಾಗಿರಬೇಕು.

ಈ ಮಾನಸಿಕ ರೋಗ ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ದಿಟ್ಟಹೆಜ್ಜೆಯನ್ನು ಇಟ್ಟಿದೆ . ರಾಷ್ಟ್ರೀಯ ಆರೋಗ್ಯ ಅಭಿಯಾನದಅಡಿಯಲ್ಲಿ ಮತ್ತು ನಿಮ್ಹಾನ್ಸ್ ನ ಸಹಕಾರದೊಂದಿಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವನ್ನು ಅನುಷ್ಠಾನಕ್ಕೆ ತರಲಾಗಿತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವು ಒಟ್ಟು31 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತಿದ್ದು ಮನಸಿಕರೋಗಿಗಳು ಪೋಷಕರು ಚಿಕಿತ್ಸೆ ಗೆ ದೂರದ ಊರುಗಳಿಗೆ ಹೋಗುವ ಅವಶ್ಯಕತೆ ಇಲ್ಲ .

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿನ ಸಿಬ್ಬಂದಿಗಳ ವಿವರ :
Psychiatrist, Psychologist, Psychiatric Social Worker, Psychiatric Nurse, Community Nurse,
record keeper, ward assistant

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮುಖ್ಯ ಉದ್ದೇಶ :
ಪ್ರತಿಯೊಬ್ಬ ಮಾನಸಿಕ ರೋಗಿಗೂ ಸೂಕ್ತ ಚಿಕಿತ್ಸೆ ದೊರೆಯಬೇಕು
ಅವರು ಸಾಮಾನ್ಯ ಜನರಂತೆ ಜೀವಿಸಬೇಕು

ಜಿಲ್ಲಾ ಮಾನಸಿಕ ಆರೋಗ್ಯದ ಕಾರ್ಯ ವೈಖರಿಗಳು:
ಮಾನಸಿಕ ರೋಗದ ಬಗ್ಗೆ ಸಾರ್ವಜನಿಕರಿಂದ ಹಿಡಿದು ಸರ್ಕಾರಿ ನೌಕರವರೆಗೆ ಅರಿವು
ಮೂಡಿಸುವ ಕಾರ್ಯ ಮಾಡುತ್ತಿದೆ.

ಪ್ರಾಥಮಿಕ ಹಂತದಲ್ಲಿ ಚಿಕೆತ್ಸೆ ಲಭ್ಯ : –
ಈ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಜಿಲ್ಲೆಯಾ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾನಸಿಕ ರೋಗಗಳ ಬಗ್ಗೆ ಮತ್ತು ರೋಗದ ಲಕ್ಷಣಗಳ ಬಗ್ಗೆ ,ತಿಳಿಸುವ ಮೂಲಕ ಪ್ರಾಯೋಗಿಕವಾಗಿ ತರಬೇತಿ ನೀಡಿಲಾಗಿದೆ .ಈಗ ಮಾನಸಿಕ ರೋಗಿಗಳು ನಿಮ್ಹಾನ್ಸ್ ಅಥವಾ ಡಿಮ್ಯಾನ್ಸ್
ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಹೋಗಲೇ ಬೇಕಾದ ಅನಿವಾರ್ಯತೆ ಇಲ್ಲ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ದೊರೆವಂತೆ ಮಾಡಲಾಗಿದೆ http://kannada.indiatyping.com/

 ಆಪ್ತ ಸಮಾಲೋಚಕರ ನೇಮಕ :-
ತಾಲ್ಲೂಕ್ ಹಂತದಲ್ಲಿ ಆಪ್ತಸಮಾಲೋಚಕರನ್ನು ನೇಮಿಸಿ ಸಾರ್ವಜನಿಕರಿಗೆ ಆಪ್ತ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ.

ಅ)ಪದವಿ / ಪದವಿಪೂರ್ವ ಕಾಲೇಜುಗಳಲ್ಲಿ: ಕಾಲೇಜುನ ಹಂತದಲ್ಲಿ ಮಕ್ಕಳು ಮಾನಸಿಕವಾಗಿ ಸಮಸ್ಯೆಗಳನ್ನೂ ಎದುರಿಸುತ್ತಾರೆ.

ಉದಾಹರಣೆಗೆ : ಮನೆಯಲ್ಲಿ ತಂದೆ ತಾಯಿ ಜಗಳ ,ಪರೀಕ್ಷೆಯಲ್ಲಿ ಫೇಲ್ ಆದಾಗ ಆತ್ಮ ಹತ್ಯೆ ಗೆ ಪ್ರಯತ್ನ, ಪ್ರೀತಿ ಪ್ರೇಮ ಆದಿಹರೆಯದ
ವಯಸ್ಸಿನ ತಪ್ಪು ಕಲ್ಪನೆಗಳು ಇನ್ನೂ ಅಳವರು ಕಾರಣಗಳು ಸಮಸೆಯನ್ನು ಎದುರಿಸುತ್ತಾರೆ ಇದನ್ನು ತಡೆಯುವ ಉದ್ದೇಶ ನಮ್ಮದಾಗಿದೆ.

ಆ) ಸ್ಲಂ ಗಳಲ್ಲಿ ಆಪ್ತ ಸಮಾಲೋಚಕರು :- ಸ್ಲಂ ಗಳಲ್ಲಿ ಅಪರಾಧಗಳು , ಶಾಲೆ ಬಿಟ್ಟ ವಿದ್ಯಾರ್ಥಿಗಳು, ಮಾದಕ ವ್ಯಸನಿಗಳು, ಮದ್ಯಪಾನ ,ಧೂಮಪಾನ , ಕೌಟುಂಬಿಕ ಕಲಹಗಳು ಇಂತಹ ಸಾಮಾಜಿಕ ಸಮಸ್ಯೆಗಳನ್ನೂ ನಿವಾರಿಸಲು ಆಪ್ತ ಸಮಾಲೋಚಕರನ್ನು ನೇಮಿಸಲಾಗಿದೆ.

ಇ) ಕಾರ್ಯ ಕ್ಷೇತ್ರದಲ್ಲಿ ಆಪ್ತ ಸಮಾಲೋಚನೆ :- ಈ ಒತ್ತಡದ ಜೀವನದಿಂದ ಸಾಕಷ್ಟು ಮಾನಸಿಕ ತೊಂದರೆಗಳು ಉಂಟಾಗುತ್ತವೆ.

ಉದಾಹರಣೆಗೆ :ಒತ್ತಡದಿಂದ ತುಂಬಾ ಜನ ಆತ್ಮ ಹತ್ಯೆ ಮಾಡಿಕೊಂಡಿದ್ದರೆ ಮತ್ತೊಂದು ಕಡೆ ತೀವ್ರ ತರಹದ ಮಾನಸಿಕ ತೊಂದರೆಗಳಿಗೆ ಗುರಿಯಾಗಿದೆ ,ಕಾರ್ಯ ಕ್ಷೇತ್ರದಲ್ಲಿ ಕಿರುಕುಳ , ಕೌಟುಂಬಿಕ ಕಲಹ ,ಮುಂತಾದ ಸಮಸ್ಯೆ ಯಿಂದ ಪರಿಹಾರ ಕಂಡುಕೊಳ್ಳಲು ಆಪ್ತ
ಸಮಾಲೋಚಕರು ಸಹಾಯ ಮಾಡುತ್ತಾರೆ.

ಮಾನಸಿಕ ಆರೋಗ್ಯದ ತರಬೇತಿ ಮತ್ತು ಅರಿವು :-
ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮದ ವತಿಯಿಂದ ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ,ತಾಲ್ಲೂಕ್ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ
ತರಬೇತಿ ನೀಡಲಾಗಿತ್ತು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ , RBSK ಆಯುಷ್ ವೈದ್ಯರಿಗೆ , ಪಾರ್ಮಸಿಸ್ಟ್ ಗಳಿಗೆ , ICTC KSAPS ಆಪ್ತ ಸಮಾಲೋಚಕರಿಗೆ , ಆಶಾ ಕಾರ್ಯಕರ್ತೆಯರಿಗೆ ,ಅಂಗನವಾಡಿ ಶಿಕ್ಷಕಿಯರು ,ಪೊಲೀಸ್ ಸಿಬ್ಬಂದಿಗಳಿಗೆ ,ಚುನಾವಣಾ ಪ್ರತಿನಿಧಿಗಳಿಗೆ , ಶಾಲಾ ಶಿಕ್ಷಕರಿಗೆ , ಬಂದೀಖಾನೆ ಸಿಬ್ಬಂದಿಗಳಿಗೆ ,ಇನ್ನೂ ಮುಂತಾದ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ತರಬೇತಿ ಮತ್ತು ಅರಿವು ಮೂಡಿಸಲಾಗುತ್ತಿದೆ.

 ಮನೋಚೈತನ್ಯ ಕಾರ್ಯಕ್ರಮ (ಸೂಪರ್ ಮಂಗಳವಾರ ) :- ಮಾನಸಿಕ ರೋಗಿಗಳಿಗೆಂದೇ ವಾರದಲ್ಲಿ ಒಂದು ದಿನ ನಿಗದಿ ಮಾಡಿದ್ದು ಮಂಗಳವಾರದಂದು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಜಿಲ್ಲಾ ಮಾನಸಿಕ ಆರೋಗ್ಯದ ಸಿಬ್ಬಂದಿಯು ಪ್ರತಿ ಮಂಗಳವಾರದಂದು ತಾಲ್ಲೂಕ್ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

 ಮಾನಸಿಕ ರೋಗಿಗಳ ಮನೆ ಭೇಟಿ :
ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮದ ವತಿಯಿಂದ ಮಾನಸಿಕ ರೋಗಿಗಳ ಅರೋಗ್ಯ
ವಿಚಾರಿಸುವ ಉದ್ದೇಶದಿಂದ ಹಾಗೂ ಮಾನಸಿಕ ರೋಗಿಗಳ ಪೋಷಕರಿಗೆ ರೋಗಿಯಾ ಸಂಪೂರ್ಣ ಪರಿಸ್ಥಿತಿ ಮತ್ತು ಅವನ ಹೇಗೆ ನೋಡಿಕೊಳ್ಳಬೇಕು ಎಂದು ಮನೆ ಭೇಟಿ ಮಾಡಿ ತಿಳಿಸಲಾಗುತ್ತದೆ ಉದಾಹರಣೆ : ಮಾನಸಿಕ ರೋಗಿಯನ್ನು ಮನೆಯಲ್ಲಿ ಕೂಡಿ ಹಾಕಿದಾದರೆ, ಮಾನಸಿಕ ರೋಗಿ ಜಗಳ ಮಾಡುತ್ತಿದ್ದರೆ, ಮಾನಸಿಕ ರೋಗಿ ಚಿಕಿತ್ಸೆ ಗೆ ಹೇಗೆ ಸ್ಪಂದಿಸಿದರೆ ಎಂದು ಇನ್ನೂ
ಮುಂತಾದ ಕಾರಣ ಗಳಿಗೆ ಮನೆ ಭೇಟಿ ಮಾಡುತ್ತಾರೆ.

ಹೀಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಮಾನಸಿಕ ರೋಗಿಗಳಿಗೆ ಹೊಸ ಜೀವನ ಮೂಡಿಸುವ ಪ್ರಯತ್ನದಲ್ಲಿದ್ದೇವೆ ನಮ್ಮ ಉದ್ದೇಶ ಹೇಗೆ ದೈಹಿಕ ರೋಗಗಳಿಗೆ ಬೇಗ ಚಿಕಿತ್ಸೆ ಕೊಡಿಸುತ್ತಾರೋ ಅದೇರೀತಿ ಮಾನಸಿಕ ರೋಗಗಳಿಗೂ ಬೇಗ ಚಿಕಿತ್ಸೆ ಕೊಡಿಸಬೇಕು.
Keshava Murthy CG
, Psychiatric Social Worker

About SSTV Kannada

Check Also

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು …

Leave a Reply

Your email address will not be published. Required fields are marked *

error: Content is protected !!