Breaking News
Home / Featured / ಕರ್ನಾಟಕ ಮತ್ತು ಭಾರತ ಮಾತ್ರವಲ್ಲ ವಿದೇಶದಲ್ಲೂ ಸಹ ಸಿದ್ದರಾಮಯ್ಯ ಸರಕಾರಕ್ಕೆ ಮೆಚ್ಚುಗೆ..!

ಕರ್ನಾಟಕ ಮತ್ತು ಭಾರತ ಮಾತ್ರವಲ್ಲ ವಿದೇಶದಲ್ಲೂ ಸಹ ಸಿದ್ದರಾಮಯ್ಯ ಸರಕಾರಕ್ಕೆ ಮೆಚ್ಚುಗೆ..!

ಹೌದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಬಂದಮೇಲೆ ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತೆಗೆದುಕೊಳ್ಳುವ ಮೂಲಕ ಹೆಸರು ಗಳಿಸಿದೆ, ಈಗ ಅದೇ ರೀತಿ ಇನ್ನೊಂದು ವಿಷಯದಲ್ಲಿ ವಿದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ,

ಅದೇನಂದರೆ ಹಾಲಿವುಡ್ ನ ವ್ಯಕ್ತಿಯೊಬ್ಬರು ಅವರ ಕಾರ್ಯವನ್ನು ಹೊಗಳಿದ್ದಾರೆ. ಹಾಲಿವುಡ್ ನ ಟೈಟಾನಿಕ್ ಫಿಲ್ಮ್ ನೋಡಿದವರಿಗೆ ಈ ವ್ಯಕ್ತಿಯ ಪರಿಚಯ ಇರುತ್ತದೆ, ಹೌದು, ಅವರೇ ಲಿಯೋನಾರ್ಡೋ ಡಿ ಕ್ಯಾಪ್ರಿಯೋ.

ಈ ವ್ಯಕ್ತಿ ಸಿದ್ದರಾಮಯ್ಯ ಸರಕಾರದ ಬಗ್ಗೆ ಯಾಕೆ ಮೆಚ್ಚುಗೆ ವ್ಯಕ್ತಪಡಿಸಿದರು ಅಂತ ಗೊತ್ತಾ,ಇತ್ತೀಚಿಗೆ
ರಾಜ್ಯ ಸರ್ಕಾರ ತುಮಕೂರಿನ ಪಾವಗಡದಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಮತ್ತು ದೇಶದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಿಸಿದೆ.ಅದನ್ನು ಇತ್ತೀಚಿಗೆ ಲೋಕಾರ್ಪಣೆ ಮಾಡಲಾಯಿತು.

ಈ ಸೋಲಾರ್ ಪಾರ್ಕ್ ಬಗ್ಗೆ ಲಾಸ್ ಎಂಜಲಿಸ್ ಟೈಮ್ಸ್ ಪತ್ರಿಕೆಯು ವರದಿ ಮಾಡಿದೆ.ಇದನ್ನು ಟೈಟಾನಿಕ್ ಖ್ಯಾತಿಯ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮರು ಟ್ವೀಟ್ ಮಾಡಿದ್ದಾರೆ.ಆ ಮೂಲಕ ಕರ್ನಾಟಕದ ಕಾರ್ಯಕ್ರಮವು ಭಾರತ ಅಲ್ಲದೆ ವಿದೇಶದಲ್ಲೂ ಸಹ ಸುದ್ದಿಯಾಗಿರುವುದು ನಮ್ಮ ದೇಶದ ಮತ್ತು ಸಿದ್ದರಾಮಯ್ಯ ಸರಕಾರದ ಹೆಮ್ಮೆಯ ಸಂಗತಿ ಎಂದು ಹೇಳಬಹುದಾಗಿದೆ.

About SSTV Kannada

Check Also

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ಲಭ್ಯ ಇಲ್ಲಿದೆ ಫುಲ್ ಡಿಟೇಲ್ಸ್..!

ಹೌದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ದೊರೆಯುತ್ತದೆ ಕರ್ನಾಟಕದಲ್ಲಿ ಕಳೆದ 2016-17 ನೇ ಸಾಲಿನಿಂದ …

Leave a Reply

Your email address will not be published. Required fields are marked *

error: Content is protected !!