Breaking News
Home / Featured / ಸಿಂಹ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..?

ಸಿಂಹ ರಾಶಿಯ ವರ್ಷ ಭವಿಷ್ಯ ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ ಶುಭನಾ ಅಶುಭನಾ..?

ಮಖ, ಪುಬ್ಬ, ಉತ್ತರ1
[ಮ,ಮಿ,ಮು,ಮೊ,ಮೆ,ಟ,ಟಿ,ಟು,ಟೆ]

ಸಿಂಹ ರಾಶಿಯವರಿಗೆ ಗುರು ಗ್ರಹವು 12.10.2018ರ ವರೆಗೆ ತುಲಾರಾಶಿ 3ನೇ ಮನೆಯಲ್ಲಿ ಫಲವನ್ನು ಕೊಡುತ್ತದೆ ಸಹೋದರ ಸಹೋದರಿಯರ ಪ್ರೀತಿಗೆ ಪಾತ್ರರಾಗುವಿರಿ ಜನ ಸಂಪರ್ಕವನ್ನು ಬೆಳೆಸುವಿರಿ ಅಧಿಕ ದುಃಖವು ಬಂಧುಗಳಿಗೆ ಅರಿಷ್ಟವು ದಾರಿದ್ರ್ಯವು ದೇಹ ಪೀಡೆಯು ಮಾನ ಹಾನಿಯು ಅಧಿಕ ತಿರುಗಾಟವು ಉಂಟಾಗುತ್ತದೆ ಆಸ್ತಿ ಹಂಚಿಕೆ ವಿಚಾರದಲ್ಲಿ ಕಲಹಗಳು ಉಂಟಾಗಿ ಅದು ಕೋರ್ಟ್ ಹಂತಕ್ಕೆ ಹೋಗುತ್ತದೆ ನಿಮ್ಮ ಸುತ್ತಮುತ್ತ ಇರುವವರೇ ನಿಮಗೆ ತಿರುಗಿ ಬೀಳುತ್ತಾರೆ
ನಿಮ್ಮ ಒಳ್ಳೆತನವೇ ನಿಮ್ಮ ದೌರ್ಬಲ್ಯ ಎಂಬಂತೆ ನಿಮ್ಮ ಪ್ರಾಮಾಣಿಕತೆ ನಿಮಗೆ ಮುಳುವಾಗುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ.


12.10.2018ರಿಂದ 30.03.2019 ವರೆಗೆ ಗುರುಗ್ರಹವು 4ನೇ ಮನೆ ಪ್ರವಾಶಿಸಿದಾಗ ಮಿಶ್ರ ಫಲವನ್ನು ಅನುಭವಿಸುವಿರಿ.

ಶನಿ ಗ್ರಹವು ವರ್ಷಪೂರ್ತಿ ಧನಸ್ಸು ರಾಶಿಯಲ್ಲೇ ಇರುವುದರಿಂದ ಪಂಚಮ ಶನಿ ಫಲ ಕಾರ್ಯಹಾನಿಯು, ಮನಸ್ಸಿಗೆ ಸಂತಾಪವು ಕಲಹವು ವಿದ್ಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಪರೀಕ್ಷೆ ಭಯ ಕಾಡುವುದು ಹೀನ ಸ್ತ್ರೀ ಸುಖಭೋಗವು ದುಃಖವು ಪ್ರೀತಿ ಪ್ರೇಮದಲ್ಲಿ ಮೋಸ ಹೋಗುವ ಸಂಭವ ಇರುತ್ತದೆ ಧಾರ್ಮಿಕ ಮನೋಭಾವದಿಂದ ಮನಸ್ಸು ದುಃಖಿಸುತ್ತದೆ
ನಿಮ್ಮ ಮಕ್ಕಳೊಂದಿಗೆ ಹೊಂದಾಣಿಕೆ ಕೊರತೆ ಉಂಟಾಗುತ್ತದೆ ಸಣ್ಣ ಪುಟ್ಟ ವಿಷಯಗಳಿಗೆ ವೈಷಮ್ಯ ಬೆಳೆಯುತ್ತದೆ ಪ್ರೀತಿಯಿಂದ ಸಾಕಿದಂತಹ ಪ್ರಾಣಿಗಳಿಗೂ ಸಸ್ಯಗಳಿಗೂ ಕೀಟ ಬಾದೆ ಉಂಟಾಗುತ್ತದೆ.

ರಾಹುಗ್ರಹವು 07.03.2019 ವರೆಗೆ ಕಟಕದಲ್ಲಿರುವುದರಿಂದ 12ನೇ ಮನೆ ವ್ಯಯ ಸ್ಥಾನವಾದುದರಿಂದ ಅಧಿಕ ತಿರುಗಾಟವು ವಿಷ ಜಂತುಗಳ ತೊಂದರೆ ಉಂಟಾಗುವುದು ಪಾಪ ಕೃತ್ಯಗಳು ದುಃಖವು ದುಷ್ಟರ ಸಹವಾಸ ಮಾಡುವುದು ಕುಟುಂಬದ ಸದಸ್ಯರೊಂದಿಗೆ ಜಗಳವಾಡಿ ದೂರದ ಪ್ರದೇಶದಲ್ಲಿ ಹೋಗಿ ವಾಸ ಮಾಡುವುದು ಸ್ವ ಧರ್ಮೀಯರಿಂದ ಹೆಚ್ಚು ಸಂಬಂಧ ಉಂಟಾಗುತ್ತದೆ.

ಪರಿಹಾರ: ತಿಲಹೋಮ ಮಾಡಿಸುವುದು ಶಿವನ ದರ್ಶನ ಪೂಜೆ ಮಾಡಿಸುವುದು.

ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

About SSTV Kannada

Check Also

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ಲಭ್ಯ ಇಲ್ಲಿದೆ ಫುಲ್ ಡಿಟೇಲ್ಸ್..!

ಹೌದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾನಸಿಕ ರೋಗಗಳಿಗೆ ಮನೆ ಬಾಗಿಲಲ್ಲೆ ಚಿಕಿತ್ಸೆ ದೊರೆಯುತ್ತದೆ ಕರ್ನಾಟಕದಲ್ಲಿ ಕಳೆದ 2016-17 ನೇ ಸಾಲಿನಿಂದ …

Leave a Reply

Your email address will not be published. Required fields are marked *

error: Content is protected !!