Breaking News
Home / Featured / ಯಡಿಯೂರಪ್ಪಗಿಂತ ಸಿದ್ದರಾಮಯ್ಯ ಬುದ್ದಿವಂತ ನಾಯಕ : ಅನುಪಮಾ ಶೆಣೈ…!

ಯಡಿಯೂರಪ್ಪಗಿಂತ ಸಿದ್ದರಾಮಯ್ಯ ಬುದ್ದಿವಂತ ನಾಯಕ : ಅನುಪಮಾ ಶೆಣೈ…!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗಿಂತ ಬುದ್ಧಿವಂತ ರಾಜಕಾರಣಿ ಎಂದು ಮುಕ್ತವಾಗಿ ಬಣ್ಣಿಸುವ ಮೂಲಕ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಜನತೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಭಾನುವಾರ ಪತ್ರಿಕೆ ಜೊತೆ ಮಾತನಾಡಿದ ಅವರು, ಬಹಳಷ್ಟು ಬಜೆಟ್‌ಗಳನ್ನು ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗಿದೆ. ಯಾರು ಏನೇ ಹೇಳಲಿ ರಾಜ್ಯ ಸರ್ಕಾರ ತಂದ ಅಕ್ಕಿ ಭಾಗ್ಯ ಯೋಜನೆ ನಿಜಕ್ಕೂ ಅದ್ಭುತ.

ರಾಜ್ಯ ಸರ್ಕಾರ ಒಳ್ಳೊಳ್ಳೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತ ಹಲವು ಭಾಗ್ಯಗಳನ್ನು ಪ್ರಕಟಿಸುತ್ತಿದೆ. ಆದರೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆಗೊಳಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಬುದ್ಧಿವಂತರಾಗಿದ್ದರಿಂದಲೇ ಯಡಿಯೂರಪ್ಪನವರಂತೆ ಜೈಲಿಗೆ ಹೋಗಲಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಜೈ ಎಂದಿದ್ದಾರೆ.

About SSTV Kannada

Check Also

ಡಿಕೆಶಿ ಹಾಗು ಕುಮಾರಸ್ವಾಮಿ ವಿರುದ್ಧ ಗುಡುಗಿದ ಬಿಜೆಪಿಯ ಜಗದೀಶ್ ಗೌಡ..!

ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಆಟಗಳು ಶುರುವಾಗಿವೆ. ರಾಮನಗರದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಬಿಜೆಪಿ ಮುಖಂಡ ಜಗದೀಶ್ ಗೌಡ ಡಿಕೆಶಿ …

Leave a Reply

Your email address will not be published. Required fields are marked *

error: Content is protected !!