Breaking News
Home / Featured / ನಮ್ಮ ಸೈನಿಕರಿಗೆ ಕೇಂದ್ರದಿಂದ ಭರ್ಜರಿ ಕೊಡುಗೆ ನೀಡಿದ ಮೋದಿ ಸರ್ಕಾರ..!

ನಮ್ಮ ಸೈನಿಕರಿಗೆ ಕೇಂದ್ರದಿಂದ ಭರ್ಜರಿ ಕೊಡುಗೆ ನೀಡಿದ ಮೋದಿ ಸರ್ಕಾರ..!

ಕೇಂದ್ರ ಸರ್ಕಾರ ನಮ್ಮ ಸೈನಿಕರಿಗೆ ಭರ್ಜರಿಯಾದ ಕೊಡುಗೆಯನ್ನು ನೀಡಿದೆ.
ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರ ಕುಟುಂಬಗಳಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಶನಿವಾರ ಘೋಷಿಸಿದ ಕೇಂದ್ರ ಸರ್ಕಾರ ಸೈನಿಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ.

ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ ಅವರ ಕುಟುಂಬಗಳಿಗೆ ಶೇ.100ರಷ್ಟು ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಈ ಮೂಲಕ ಭಾರತ-ಚೀನಾ ಗಡಿಯಲ್ಲಿ ಭದ್ರತೆ ಹೆಚ್ಚಳದ ಜತೆಗೆ, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಈ ಯೋಜನೆಯ ಉದ್ದೇಶವಾಗಿದೆ.

ಡೋಕ್ಲಾಮ್ ಬಿಕ್ಕಟ್ಟಿಗೆ ಬ್ರೇಕ್ ಬಿದ್ದು 8 ತಿಂಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿಂದೆ ಸೈನಿಕರ ಕುಟುಂಬಗಳಿಗೆ ಶೇ. 30ರಷ್ಟು ಪಿಂಚಣಿ ಸೌಲಭ್ಯ ಮಾತ್ರ ನೀಡಲಾಗುತ್ತಿತ್ತು.

ರಕ್ಷಣಾ ಇಲಾಖೆಯ ಅಧಿಸೂಚನೆಯಂತೆ ಈ ನೂತನ ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರ ಕುಟುಂಬದ ಪಿಂಚಣಿ ಯೋಜನೆ ಮಾರ್ಚ್ 7ರಿಂದ ಜಾರಿಗೆ ಬರಲಿದೆ. ಈ ಹಿಂದೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

About SSTV Kannada

Check Also

ಡಿಕೆಶಿ ಹಾಗು ಕುಮಾರಸ್ವಾಮಿ ವಿರುದ್ಧ ಗುಡುಗಿದ ಬಿಜೆಪಿಯ ಜಗದೀಶ್ ಗೌಡ..!

ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಆಟಗಳು ಶುರುವಾಗಿವೆ. ರಾಮನಗರದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಬಿಜೆಪಿ ಮುಖಂಡ ಜಗದೀಶ್ ಗೌಡ ಡಿಕೆಶಿ …

Leave a Reply

Your email address will not be published. Required fields are marked *

error: Content is protected !!