Breaking News
Home / Featured / ಎ ಟಿ ಎಂ ಕಾರ್ಡ್ ಹೊಂದಿದವರಿಗೆ ಮೋದಿಯಿಂದ ಬಿಗ್ ಗಿಫ್ಟ್..!

ಎ ಟಿ ಎಂ ಕಾರ್ಡ್ ಹೊಂದಿದವರಿಗೆ ಮೋದಿಯಿಂದ ಬಿಗ್ ಗಿಫ್ಟ್..!

ಹೌದು ಅದೇನಂತೀರಾ, ಇತ್ತೀಚಿಗೆ ಅಂದರೆ ನೋಟ್ ಬ್ಯಾನ್ ಆದಮೇಲೆ ಡಿಜಿಟಲ್ ಮತ್ತು ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ, ಅದೇ ರೀತಿ ಎ ಟಿ ಎಂ ಹೊಂದಿದವರಿಗೂ ಸಹ ಬ್ಯಾಂಕಿನ ಕಡೆಯಿಂದ ವಿಮಾ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

ನೀವು ಎ.ಟಿ.ಎಮ್ ಕಾರ್ಡಗಳ ಮೂಲಕ ಮಾಡುವ ವ್ಯವಹಾರಕ್ಕನುಗುಣವಾಗಿ ವಿಮಾ ಮೊತ್ತ ಶುಲ್ಕ ರೂಪಾಯಿ 25000 ದಿಂದ ಶುರುವಾಗುತ್ತದೆ ಮತ್ತು 5 ಲಕ್ಷ ರೂಪಾಯಿಗಳಲ್ಲಿ ಅಂತ್ಯವಾಗುತ್ತದೆ. ಅಂದರೆ ನಿಮ್ಮ ವ್ಯವಹಾರಕ್ಕನುಗುಣವಾಗಿ ನಿಮಗೆ ವಿಮಾ ಮೊತ್ತ ದೊರಕಲಾಗುತ್ತದೆ. ಈ ಸೌಲಭ್ಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಯಾಕೆಂದರೆ ಬ್ಯಾಂಕುಗಳು ಜನರಿಗೆ ಇಂತಹ ಯೋಜನೆಗಳ ಬಗ್ಗೆ ತಿಳಿಸುವ ಕಾರ್ಯ ಮಾಡುವುದಿಲ್ಲ.

ಈ ವಿಮಾ ಯೋಜನೆ ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ನಿಮ್ಮ ಪಾಸ್ ಬುಕ್ ಚಾಲ್ತಿಯಲ್ಲಿದ್ದರೆ ಮಾತ್ರ ಈ ಸೌಲಭ್ಯದ ಲಾಭ ನೀವು ಪಡೆದುಕೊಳ್ಳಬಹುದು. ಕಾರ್ಡ್ ತೆಗೆದುಕೊಂಡ ನಲವತ್ತೈದು ದಿನಗಳೊಳಗಾಗಿ ನೀವು ಕಾರ್ಡ್ ಬಳಸಿ ಲೇವಾದೇವಿ ಮಾಡಿದ್ದರೆ ನಿಮಗೆ ವಿಮೆಯ ಹಕ್ಕನ್ನು ಪಡೆಯುವ ಅಧಿಕಾರವಿರುತ್ತದೆ.

ಬೇರೆ ಬೇರೆ ಪ್ರಕಾರದ ಕಾರ್ಡ್ ಗಳಲ್ಲಿ ದೊರಕುವ ವಿಮಾ ಮೊತ್ತವೂ ಬೇರೆ ಬೇರೆಯಾಗಿರುತ್ತದೆ.

ಮಾಸ್ಟರ್ ರಕ್ಷಕ್ ಕಾರ್ಡ್-5 ಲಕ್ಷ ರುಪಾಯಿಗಳು
ಪ್ಲಾಟಿನಂ ಕಾರ್ಡ್- 2 ಲಕ್ಷ ರುಪಾಯಿಗಳು
ಕ್ಲಾಸಿಕ್ ಕಾರ್ಡ್- 50,000 ರುಪಾಯಿಗಳು
ಕಿಸಾನ್ ಡೆಬಿಟ್ ಕಾರ್ಡ್-50,000 ರುಪಾಯಿಗಳು
ಪಿ.ಎನ್.ಬಿ ಕಾರ್ಡ್-25,000 ರುಪಾಯಿಗಳು.

ಈ ವಿಮಾ ಸೌಲಭ್ಯ ಪಡೆದುಕೊಳ್ಳಲು ನೀವೇನು ಮಾಡಬೇಕು?

1.ಅಫಘಾತವಾದಂತಹ ಸಂಧರ್ಭದಲ್ಲಿ ವಿಮೆಯ ಮೊತ್ತವನ್ನು ಪಡೆಯಲು ಮೊದಲಿಗೆ ನೀವು ಪೋಲೀಸರಿಗೆ ಸೂಚನೆ ನೀಡಬೇಕಾಗುವುದು.

2.ದುರ್ಘಟನಾ ಗ್ರಸ್ತ ವ್ಯಕ್ತಿಯ ಎಲ್ಲಾ ಪ್ರಾಸಂಗಿಕ ದಾಖಲೆಗಳನ್ನು ಜೋಪಾನವಾಗಿ ಇಡತಕ್ಕದ್ದು.

3.ಒಂದು ವೇಳೆ ವ್ಯಕ್ತಿಯು ಮೃತನಾಗಿದ್ದಲ್ಲಿ, ಆತನ ವಿಮೆಯ ಹಕ್ಕನ್ನು ಪಡೆಯಲು, ಅಂಚೆ ಪ್ರಮಾಣ ಪತ್ರ, ಪೋಲಿಸರಿಂದ ಪ್ರಮಾಣ ಪತ್ರ, ಮೃತ್ಯು ಪ್ರಮಾಣ ಪತ್ರ ಮತ್ತು ಮೃತ ವ್ಯಕ್ತಿಯ ವಾಹನ ಚಾಲನಾ ಪರವಾನಿಗೆಯ ಪ್ರಮಾಣ ಪತ್ರವನ್ನು ತೋರಿಸಬೇಕಾಗುವುದು.

4.ಈ ಎಲ್ಲಾ ಪ್ರಕ್ರಿಯೆಗಳನ್ನು ಅವಘಡ ನಡೆದ ಮೂವತ್ತು ದಿನಗಳೊಳಾಗಾಗಿ ಮಾಡತಕ್ಕದ್ದು.

5.ಆಸ್ಪತ್ರೆಯ ದಾಖಲಾತಿ ವಿವರ ಮತ್ತು ಖರ್ಚು-ವೆಚ್ಚಗಳ ವಿವರಗಳ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

ನಿಮ್ಮಲ್ಲಿ ಬ್ಯಾಂಕಿನ ಒಂದಕ್ಕಿಂತ ಹೆಚ್ಚು ಕಾರ್ಡ್ಗಳಿದ್ದಲ್ಲಿ,ಕೇವಲ ಒಂದು ಬ್ಯಾಂಕಿನ ಒಂದು ಕಾರ್ಡಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುವುದು. ಕಾರ್ಡ್ ದಾರನು ಕಾರ್ಡ್ ತೆಗೆದುಕೊಂಡ ಎಷ್ಟು ದಿನಗಳೊಳಗೆ ಮಾನ್ಯ ರೀತಿಯಲ್ಲಿ ವ್ಯವಹಾರ ಮಾಡಿರುತ್ತಾನೆ ಎಂಬ ಅಂಶವೂ ಇಲ್ಲಿ ಪರಿಗಣಿಸಲಾಗುತ್ತದೆ.

ಸಾಮಾನ್ಯವಾಗಿ ಒಂದು ಬ್ಯಾಂಕಿನ ಕಾನೂನು ಮತ್ತೊಂದು ಬ್ಯಾಂಕಿನ ಕಾನೂನಿಗಿಂತ ಭಿನ್ನವಾಗಿರುತ್ತದೆ. ಯಾವುದೇ ಬ್ಯಾಂಕಿನಲ್ಲಿ ನೀವು ಖಾತೆ ತೆರೆದು ಎ.ಟಿ.ಎಮ್ ಕಾರ್ಡ್ ಪಡೆದ ಕ್ಷಣದಿಂದಲೇ ನೀವು ಈ ಸೌಲಭ್ಯಕ್ಕೆ ಬಾಧ್ಯರಾಗುತ್ತೀರ. ಅವಘಡ ನಡೆದು ವ್ಯಕ್ತಿಯು ಮೃತನಾದಲ್ಲಿ ವಿಮೆಯ ಮೊತ್ತವು ಆತನ ನಾಮಿನಿಗೆ ಹಸ್ತಾಂತರಿಸಲ್ಪಡಲಾಗುವುದು. ಅಂತಹ ಸಂಧರ್ಭದಲ್ಲಿ ಎರಡರಿಂದ ಐದು ತಿಂಗಳೊಳಗೆ ಎಲ್ಲಾ ದಾಖಲೆ ಸಮೇತ ಬ್ಯಾಂಕ್ ಗೆ ಭೇಟಿ ನೀಡಿ ವಿಮಾ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.

ಎ.ಟಿ.ಎಮ್ ಕಾರ್ಡ್ ಇರುವ ಎಲ್ಲಾ ಗ್ರಾಹಕರು ಇಂದೇ ನಿಮ್ಮ ಬ್ಯಾಂಕ್ ಖಾತೆಗೆ ತೆರಳಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ವಿಮಾ ಸೌಲಭ್ಯದ ಲಾಭವನ್ನು ಉಚಿತವಾಗಿ ಪಡೆಯಿರಿ. ನಿಮ್ಮ ಪರಿವಾರ ಮತ್ತು ಸ್ನೇಹಿತರಿಗೂ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ.

About SSTV Kannada

Check Also

ಡಿಕೆಶಿ ಹಾಗು ಕುಮಾರಸ್ವಾಮಿ ವಿರುದ್ಧ ಗುಡುಗಿದ ಬಿಜೆಪಿಯ ಜಗದೀಶ್ ಗೌಡ..!

ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಆಟಗಳು ಶುರುವಾಗಿವೆ. ರಾಮನಗರದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಬಿಜೆಪಿ ಮುಖಂಡ ಜಗದೀಶ್ ಗೌಡ ಡಿಕೆಶಿ …

Leave a Reply

Your email address will not be published. Required fields are marked *

error: Content is protected !!